Site icon Vistara News

ಖಾಸಗಿ ಶಾಲೆಗಳ ಆರಂಭ, ಮಾನ್ಯತೆ, ನವೀಕರಣ ಮತ್ತಿತರ ಅನುಕೂಲಕ್ಕೆ ಹೊಸ ಸಾಫ್ಟ್​ವೇರ್​ ಪರಿಚಯಿಸಿದ ಶಿಕ್ಷಣ ಇಲಾಖೆ

Education Department introduces new software for the benefit of private schools

Education Department introduces new software for the benefit of private schools

ಬೆಂಗಳೂರು: ಖಾಸಗಿ ಶಾಲೆಗಳ ಅವಾಂತರದ ಬಳಿಕ ಎಚ್ಚೆತ್ತ ಶಿಕ್ಷಣ ಇಲಾಖೆ, ಖಾಸಗಿ ಶಾಲೆಗಳ ಆರಂಭಕ್ಕೆ ಅರ್ಜಿ ಸಲ್ಲಿಕೆ, ಮಾನ್ಯತೆ ನವೀಕರಣ, ನಿರಾಕ್ಷೇಪಣಾ ಪತ್ರ ನೀಡಿಕೆ ಸೇರಿದಂತೆ ಶಿಕ್ಷಣ ಇಲಾಖೆಯ ವಿವಿಧ ಸೇವೆಗಳನ್ನು ಮತ್ತಷ್ಟು ಸಿಂಪಲ್​ ಮಾಡಿದೆ.

ಈ ಹಿಂದೆ ಪುಟಗಟ್ಟಲೇ ದಾಖಲೆಗಳೊಂದಿಗೆ ಇಲಾಖೆಗೆ ಬರುತ್ತಿದ್ದವರು ಇನ್ನು ಮುಂದೆ ಬೆರಳ ತುದಿಯಲ್ಲೇ ಎಲ್ಲಾ ಕೆಲಸ ಆಗುವ ರೀತಿ ಸರಳಗೊಂಡಿದೆ. ಶಿಕ್ಷಣ ಇಲಾಖೆಯ ಹೊಸ ಸಾಫ್ಟ್​ವೇರ್​ ಮೂಲಕ ಇದೀಗ ಶಾಲೆಗಳ ಕೆಲಸ ಮತ್ತಷ್ಟು ಸುಲಭವಾಗಲಿದೆ. ಶುಕ್ರವಾರ ಶಿಕ್ಷಣ ಸಚಿವ ಬಿ.ಸಿ ನಾಗೇಶ್‌ ಹೊಸ ಸಾಫ್ಟ್​ವೇರ್ ಬಿಡುಗಡೆ ಮಾಡಿದ್ದಾರೆ.

ಒಂದು ಶಾಲೆ​ ಆರಂಭ ಮಾಡಬೇಕು ಎಂದರೆ ಹತ್ತು ಹಲವು ಪ್ರೊಸಿಜರ್​ಗಳನ್ನು ಅನುಸರಿಸುತ್ತಿದ್ದವರಿಗೆ ಕೊಂಚ ರಿಲೀಫ್​ ಸಿಕ್ಕಿದೆ. ಇಲಾಖೆಯಲ್ಲಿ ನಡೆದ ಕೆಲ ಗೊಂದಲಗಳ ಬಳಿಕ, ಶಿಕ್ಷಣ ಇಲಾಖೆ ಡಿಜಿಟಲ್​ ತಂತ್ರಜ್ಞಾನದ ಮೊರೆಹೋಗಿದೆ. ಶಿಕ್ಷಣ ಇಲಾಖೆ ಪರಿಚಯಿಸಿರುವ ಈ ಹೊಸ ಸಾಫ್ಟ್​ವೇರ್​ನಿಂದ ಶಾಲೆ ಆರಂಭಕ್ಕೆ ಕಚೇರಿಯಿಂದ ಕಚೇರಿಗೆ ಅಲೆಯಬೇಕಿದ್ದ ಕೆಲಸಕ್ಕೆ ಬ್ರೇಕ್​ ಬಿದ್ದಿದೆ. ಜತೆಗೆ ಎನ್​ಒಸಿ, ಪಠ್ಯ ಕ್ರಮ ಸಂಯೋಜನೆಗೆ ಪ್ರತ್ಯೇಕವಾಗಿ ಫಾಲೋಅಪ್​ ಮಾಡುವ ವ್ಯವಸ್ಥೆ ಮಾಡಲಾಗಿದ್ದು, ಅರ್ಜಿ ಯಾವ ಹಂತದಲ್ಲಿದೆ ಎಂಬ ಮಾಹಿತಿ ಮೊಬೈಲ್‌ ಸಂದೇಶದ​ ಮೂಲಕ ಪಡೆಯಬಹುದಾಗಿದೆ.

ಶಿಕ್ಷಣ ಇಲಾಖೆ ಬಿಡುಗಡೆ ಮಾಡಿರುವ ಈ ನೂತನ ಸಾಫ್ಟ್​ವೇರ್​ನಿಂದ ಏನೆಲ್ಲಾ ಕೆಲಸಗಳು ಸುಲಭವಾಗಿದೆ ಎಂಬುದನ್ನು ನೋಡುವುದಾದರೆ, ಹೊಸ ಶಾಲಾ ನೋಂದಣಿ, ಮಾನ್ಯತೆ ನವೀಕರಣ, ಪಠ್ಯ ಕ್ರಮ ಸಂಯೋಜನೆ, ಮಾನ್ಯತೆ ನವೀಕರಣ 8 ಹಂತದಿಂದ 4ಕ್ಕೆ ಇಳಿಕೆ ಜತೆಗೆ ಪ್ರಮಾಣ ಪತ್ರ ಕೂಡ ಡಿಜಿಟಲ್ ರೂಪದಲ್ಲಿ ಲಭ್ಯವಿರಲಿದೆ.

ಇದನ್ನೂ ಓದಿ: Lokayukta raid : ಶಾಸಕ ಮಾಡಾಳು ಚನ್ನೇಶಪುರ ಮನೆಗೂ ಲೋಕಾಯುಕ್ತ ಲಗ್ಗೆ; 3 ಲಕ್ಷ ರೂ. ನಗದು, ಬೆಳ್ಳಿ, ಬಂಗಾರ ಪತ್ತೆ

ಶಾಲೆಗಳಿಗೆ ಮಾನ್ಯತೆ ನೀಡುವ ಬಗ್ಗೆ ಎದ್ದಿದ್ದ ಗೊಂದಲಗಳಿಗೆ ತೆರೆ ಎಳೆಯಲು ಶಿಕ್ಷಣ ಇಲಾಖೆ ಹೊಸ ಪ್ರಯೋಗಕ್ಕೆ ಮುಂದಾಗಿದೆ. ಈ ಕೆಲಸದಿಂದ ಅವಧಿಯ ಜತೆಗೆ ಕೆಲಸ ಕೂಡ ಕಡಿಮೆಯಾಗಲಿದ್ದು, ಖಾಸಗಿ ಶಾಲೆಗಳ ಕೆಲಸ-ಕಾರ್ಯಗಳಿಗೆ ಮತ್ತಷ್ಟು ವೇಗ ಸಿಗಲಿದೆ.

ಬೆಂಗಳೂರು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version