Site icon Vistara News

ಬರಗೂರು ಸಮಿತಿ ಎಡವಟ್ಟು‌ ಸರಿಪಡಿಸಲು ಮುಂದಾದ ಶಿಕ್ಷಣ ಇಲಾಖೆ?

ಶಿಕ್ಷಣ ಇಲಾಖೆ

ಬೆಂಗಳೂರು: ಪಠ್ಯಪುಸ್ತಕ ಪರಿಷ್ಕರಣೆ ವಿವಾದ ಮುಗಿಯುವಂತೆ ಕಾಣುತ್ತಿಲ್ಲ. ರೋಹಿತ್‌ ಚಕ್ರತೀರ್ಥ ಸಮಿತಿ ವಿವಾದದ ಬಳಿಕವೂ ಮತ್ತೆ ಪಠ್ಯ ಸರಿಪಡಿಸಲು ಶಿಕ್ಷಣ ಇಲಾಖೆ ಮುಂದಾಗಿದ್ದು, ಬರಗೂರು ರಾಮಚಂದ್ರಪ್ಪ ಸಮಿತಿಯ ತಪ್ಪು ಸರಿಪಡಿಸಲು ನಿರ್ಧರಿಸಲಾಗಿದೆ.

ಜನರ ನಂಬಿಕೆ, ಧಾರ್ಮಿಕ ಭಾವನೆಗಳಿಗೆ ಕುಂದು ತರುವ ಪದ್ಯ ವಾಪಸ್ ಪಡೆಯಲು ಸಚಿವ ನಾಗೇಶ್ ಆದೇಶ ನೀಡಿದ್ದಾರೆ. ಮಠಗಳ ಮೇಲಿನ ನಂಬಿಕೆ ಒಡೆಯಲು ಬರಗೂರು ಸಮಿತಿ ಮುಂದಾಗಿತ್ತು ಎಂಬ ಆರೋಪವಿದೆ. ಸಾರ್ವಜನಿಕ ಆಕ್ಷೇಪಣೆ ಹಿನ್ನೆಲೆಯಲ್ಲಿ ನಾಲ್ಕನೇ ತರಗತಿ ಪರಿಸರ ಅಧ್ಯಯನದ ನಲಿಕಲಿ ವಿಭಾಗದ ಭೂಮಿ ಎಂಬ ಪದ್ಯ ವಾಪಸ್ ಪಡೆಯಲು ಶಿಕ್ಷಣ ಇಲಾಖೆ ಮುಂದಾಗಿದೆ.

ಕವಿ ಸಿದ್ದಲಿಂಗಯ್ಯ ಅವರು ರಚಿಸಿದ ʼಭೂಮಿʼ ಪದ್ಯವನ್ನು ರೋಹಿತ್ ಚಕ್ರತೀರ್ಥ ಸಮಿತಿ ಪರಿಷ್ಕರಣೆ ಮಾಡಿರಲಿಲ್ಲ. ಆದರೆ ನಲಿಕಲಿ ಪಠ್ಯದಲ್ಲಿ ಧಾರ್ಮಿಕ ನಂಬಿಕೆ ಹಾಗೂ ವಿವಾದಾತ್ಮಕ ಅಂಶಗಳಿವೆ ಎಂಬ ಆರೋಪ ಕೇಳಿಬಂದಿರುವುದರಿಂದ ಬರಗೂರು ಸಮಿತಿಯ ಪಠ್ಯ ವಾಪಸ್ ಪಡೆಯಲು ಇಲಾಖೆ ನಿರ್ಧರಿಸಿದೆ.

ಸೂರ್ಯ ಚಂದ್ರ ದೇವರಲ್ಲ ಎಂಬ ಸಾಲು ವಿವಾದಿತ ಪದ್ಯದಲ್ಲಿ ಉಲ್ಲೇಖವಾಗಿದೆ. ಇನ್ನು ಮಠಗಳು ಮೋಸದ ಜಾಲ ಎಂಬ ವಾಕ್ಯ, ದೇವರ ಆತ್ಮ ಕಂಡವರಿಲ್ಲ, ಶಾಸ್ತ್ರ ಪುರಾಣ ‌ಸುಳ್ಳಿನ ಕಂತೆ, ಅರಮನೆ, ಗುರುಮನೆ ಮೋಸದ ಜಾಲ, ಮುಗಿಲು ಶೋಷಣೆ ಮಾಡುವ ಕಾಲ ವಾಕ್ಯಗಳನ್ನ ಬರಗೂರು ಸಮಿತಿ ಉಳಿಸಿಕೊಂಡಿತ್ತು. ಈ ವಾಕ್ಯಗಳು ಮಠಗಳ ಬಗ್ಗೆ ತಪ್ಪು ಭಾವನೆ ಮೂಡಿಸುತ್ತಿವೆ, ಸೂರ್ಯ ಚಂದ್ರ ದೇವರು ಅಲ್ಲ ಎಂಬುದು ವೈಜ್ಞಾನಿಕ ಸತ್ಯ ಆದರೂ ಧಾರ್ಮಿಕ ನಂಬಿಕೆಯ ಪ್ರಕಾರ ದೇವರೆಂದೇ ಪೂಜಿಸಲಾಗುತ್ತಿದೆ. ಹೀಗಾಗಿ ಪದ್ಯ ವಾಪಸ್ ಪಡೆಯಲು ಇಲಾಖೆ ಆದೇಶ ನೀಡಿದೆ.

ಇದನ್ನೂ ಓದಿ | Textbook controversy: ತಮ್ಮ ಕಥನವನ್ನು ಪಠ್ಯದಲ್ಲಿ ಸೇರಿಸಲು ನಿರಾಕರಿಸಿದ ದೇವನೂರು

Exit mobile version