ಬೆಂಗಳೂರು: ಒಳಗೊಳ್ಳುವಿಕೆಯ ಮತ್ತು ಸಮಾನ ಶಿಕ್ಷಣವನ್ನು ಒದಗಿಸುವ ಉದ್ದೇಶದಿಂದ ಎಬಿಬಿ ಇಂಡಿಯಾ ತನ್ನ ಸಿಎಸ್ಆರ್ ಉಪಕ್ರಮಗಳ ಭಾಗವಾಗಿ ಆಯೋಜಿಸಿರುವ ಎರಡು ಶೈಕ್ಷಣಿಕ ಕಾರ್ಯಕ್ರಮಗಳನ್ನು ಇನ್ನಷ್ಟು ಶಾಲೆಗಳಿಗೆ ವಿಸ್ತರಿಸುತ್ತಿರುವುದಾಗಿ ಇಂದು ಘೋಷಿಸಿದ್ದು, ನೆಲಮಂಗಲದ 98 ಸರ್ಕಾರಿ ಶಾಲೆಗಳಲ್ಲಿ ಅನುಷ್ಠಾನಗೊಳಿಸಲಾಗಿರುವ ಈ ಕಾರ್ಯಕ್ರಮಗಳನ್ನು ಈ ಶೈಕ್ಷಣಿಕ ವರ್ಷದಿಂದ ಪೀಣ್ಯದಲ್ಲಿರುವ 50 ಸರ್ಕಾರಿ ಶಾಲೆಗಳಿಗೂ ವಿಸ್ತರಿಸಲಾಗಿದೆ. ಈ ಕಾರ್ಯಕ್ರಮಗಳಿಂದ ಪೀಣ್ಯ ಮತ್ತು ನೆಲಮಂಗಲದ ಒಟ್ಟು 148 ಶಾಲೆಗಳ ಸುಮಾರು 10000 ವಿದ್ಯಾರ್ಥಿಗಳಿಗೆ (Education News) ನೆರವಾಗಲಿದೆ.
ಎಸ್‌ಟಿಇಎಂ (ಸೈನ್ಸ್ ಟೆಕ್ನಾಲಟಿ ಇಂಜಿನಿಯರಿಂಗ್ ಮ್ಯಾತ್ಸ್) ಅವೇರ್‌ನೆಸ್ ಮತ್ತು ಫೌಂಡೇಷನಲ್ ಲಿಟರೆಸಿ ಆಂಡ್ ನ್ಯುಮರಿಕಲ್ ಸ್ಕಿಲ್ಸ್ ಪ್ರೋಗ್ರಾಮ್ (ಎಫ್ಎಲ್ಎನ್) ನ ಯುವ ವಿದ್ಯಾರ್ಥಿಗಳಿಗೆ ಅಗತ್ಯವಾದ ಬೇಕಾಗಿರುವ ವೈಜ್ಞಾನಿಕ ಪರಿಕಲ್ಪನೆಗಳು ಮತ್ತು ಎಸ್‌ಟಿಇಎಂ ವಿಷಯಗಳ ಜತೆಗೆ ಸಾಕ್ಷರತೆ ಮತ್ತು ಸಂಖ್ಯಾಶಾಸ್ತ್ರದ ಅರಿವು ಮತ್ತು ಆ ವಯಸ್ಸಿಗೆ ಸೂಕ್ತವಾದ ಕೌಶಲ್ಯಗಳನ್ನು ಕಲಿಸುವ ಉದ್ದೇಶವನ್ನು ಹೊಂದಿದೆ.
ಇದನ್ನೂ ಓದಿ: KEA : ಜು.13,14ಕ್ಕೆ ವಿವಿಧ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ; ಅಕ್ರಮ ತಡೆಯಲು ಮೊದಲ ಬಾರಿಗೆ ವೆಬ್ ಕಾಸ್ಟಿಂಗ್
ಶಾಲೆಯ ವೇಳಾಪಟ್ಟಿಯ ಜತೆಗೆ ಈ ಕಾರ್ಯಕ್ರಮಗಳನ್ನು ಸಂಯೋಜಿಸಲಾಗಿದ್ದು, ಕಲಿಕೆಯನ್ನು ಸಂವಾದಾತ್ಮಕವಾಗಿಸಲು ಮತ್ತು ಹೆಚ್ಚು ತೊಡಗಿಸಿಕೊಳ್ಳುವಂತೆ ಮಾಡಲು ಪ್ರಾಯೋಗಿಕ ಕಲಿಕಾ ಕ್ರಮವನ್ನು ಬಳಸಲಾಗುತ್ತದೆ. ಶಿಕ್ಷಣ ಪ್ರತಿಷ್ಠಾನದ ಸಹಭಾಗಿತ್ವದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮವು ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ಅರಿವನ್ನು ಹೆಚ್ಚಿಸುವ ಮೂಲಕ ಅವರ ಬೆಳವಣಿಗೆಗೆ ಅಗತ್ಯವಾದ ಸಾಮರ್ಥ್ಯ ಒದಗಿಸುವ ಮೂಲಕ ಶಿಕ್ಷಣದ ಮಟ್ಟವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.
ಈ ಕಾರ್ಯಕ್ರಮದ ಜತೆಗೆ ಪರಿಸರ ಶಿಕ್ಷಣ ಕೇಂದ್ರ (ಸೆಂಟರ್ ಫಾರ್ ಎನ್‌ವಿರಾನ್ಮೆಂಟ್ ಎಜುಕೇಷನ್- ಸಿಇಇ) ಸಹಯೋಗದ ಮೂಲಕ ಪರ್ಯಾವರಣ ಮಿತ್ರ ಎಂಬ ಇನ್ನೊಂದು ಕಾರ್ಯಕ್ರಮವನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುತ್ತದೆ. ಶಾಲೆ ಮತ್ತು ಅದರ ಸುತ್ತಮುತ್ತಲಿನ ಪರಿಸರ ಸ್ನೇಹಿ ಚಟುವಟಿಕೆಗಳಲ್ಲಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳುವ ಮೂಲಕ ಪರಿಸರ ಸುಸ್ಥಿರತೆಯ ಸವಾಲುಗಳನ್ನು ಎದುರಿಸಲು ಅವರನ್ನು ಈ ಕಾರ್ಯಕ್ರಮದ ಮೂಲಕ ಸಿದ್ಧಪಡಿಸುವ ಗುರಿಯನ್ನು ಹೊಂದಲಾಗಿದೆ.
ನೀರು ಮತ್ತು ನೈರ್ಮಲ್ಯ, ತ್ಯಾಜ್ಯ ನಿರ್ವಹಣೆ, ವಿದ್ಯುತ್ ಇತ್ಯಾದಿಗಳಂತಹ ಪ್ರಮುಖ ವಿಷಯಗಳನ್ನು ಒಳಗೊಂಡ ಈ ಕಾರ್ಯಕ್ರಮದ ವಿನ್ಯಾಸ ಮತ್ತು ಅನುಷ್ಠಾನದಲ್ಲಿ ರಾಜ್ಯದ ಶಿಕ್ಷಣ ಇಲಾಖೆಯು ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಈ ಕಾರ್ಯಕ್ರಮವು ವಿದ್ಯಾರ್ಥಿಗಳು ಶಾಲೆಗಳು ಮತ್ತು ತರಗತಿ ಕೊಠಡಿಗಳ ಆಚೆ ಬಂದು ಕಲಿಯಲು ಸಹಾಯ ಮಾಡುತ್ತದೆ ಮತ್ತು ಅವರನ್ನು ಪ್ರಕೃತಿ, ಸಮಾಜ ಮತ್ತು ಸಮುದಾಯಗಳ ಜತೆ ಬೆರೆಯುವುಂತೆ ಮಾಡುತ್ತದೆ.
ಈ ಕುರಿತು ಎಬಿಬಿ ಇಂಡಿಯಾದ ಮೋಷನ್ ಬಿಸಿನೆಸ್ ಪ್ರೆಸಿಡೆಂಟ್ ಸಂಜೀವ್ ಅರೋರಾ ಮಾತನಾಡಿ, ಎಬಿಬಿ ಸಂಸ್ಥೆಯು ಒಳಗೊಳ್ಳುವಿಕೆಯ ಶಿಕ್ಷಣ ಮತ್ತು ಪರಿಸರ ಸುಸ್ಥಿರತೆಗೆ ನೆರವಾಗಲು ಬದ್ಧವಾಗಿದೆ. ನಾವು ನಮ್ಮ ಕಾರ್ಯಾಚರಣೆಗಳಲ್ಲಿ ಸುಸ್ಥಿರ ಮಾರ್ಗಗಳನ್ನು ಕಲಿಯಲು ಮತ್ತು ಅಳವಡಿಸಿಕೊಳ್ಳುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ಮುಂದಿನ ಪೀಳಿಗೆಯು ಕೂಡ ಪರಿಸರದ ಮೇಲೆ ಉಂಟಾಗುವ ಪರಿಣಾಮಗಳ ಕುರಿತು ತಿಳಿದಿರಬೇಕು ಎಂದು ನಾವು ಭಾವಿಸುತ್ತೇವೆ. ಉತ್ತಮವಾಗಿ ವಿನ್ಯಾಸಗೊಳಿಸಿರುವ ಈ ಕಾರ್ಯಕ್ರಮಗಳ ಮೂಲಕ ಅವರು ಅಗತ್ಯವಿರುವ ಸಾಮರ್ಥ್ಯಗಳನ್ನು ಪಡೆದು ತಮ್ಮನ್ನು ತಾವು ಸಿದ್ಧಗೊಳಿಸುತ್ತಾರೆ ಮತ್ತು ಜೀವನದಲ್ಲಿ ಹೆಚ್ಚು ಸುಸ್ಥಿರ ಆಯ್ಕೆಗಳನ್ನು ಮಾಡಲು ಕಲಿಯುತ್ತಾರೆ ಎಂದು ನಾವು ನಂಬುತ್ತೇವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Bengaluru News: ಭವಿಷ್ಯಕ್ಕೆ ಬೇಕಾಗಿರುವ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳಿಗಾಗಿ ಎನ್‌ಎಸ್‌ಡಿಸಿ, ವಿಟಿಯು ನಡುವೆ ಸಹಭಾಗಿತ್ವ
2022ರಲ್ಲಿ ಪ್ರಾರಂಭವಾದ ಈ ಉಪಕ್ರಮವು ವಿದ್ಯಾರ್ಥಿಗಳಲ್ಲಿ ಅರಿವಿನ ಮಟ್ಟವನ್ನು ಯಶಸ್ವಿಯಾಗಿ ಹೆಚ್ಚಿಸಿದೆ. ಪ್ರಮುಖ ವೈಜ್ಞಾನಿಕ ಪರಿಕಲ್ಪನೆಗಳಲ್ಲಿನ ಇದ್ದ ಮಹತ್ವಾಕಾಂಕ್ಷೆ ಮತ್ತು ವಾಸ್ತವದ ಮಧ್ಯದ ಅಂತರವನ್ನು ಕಡಿಮೆ ಮಾಡಿದೆ. ಕಾಲಕಾಲಕ್ಕೆ ಮಾಡಲಾದ ಮೌಲ್ಯಮಾಪನಗಳಲ್ಲಿ ವಿದ್ಯಾರ್ಥಿಗಳ ಸಾಮರ್ಥ್ಯ ಮತ್ತು ಅರಿವಿನ ಮಟ್ಟಗಳಲ್ಲಿ ಪ್ರಗತಿ ಆಗಿರುವುದು ಕಂಡುಬಂದಿದೆ.
ನೆಲಮಂಗಲ ಬ್ಲಾಕ್‌ನ 98 ಶಿಕ್ಷಕರಿಗೆ ಈ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಬೇಕಾಗಿರುವ ತರಬೇತಿ ಮತ್ತು ಅಪ್‌ಡೇಟ್ ಆಗಿರುವ ಪರಿಕಲ್ಪನೆಗಳು ಮತ್ತು ಅದಕ್ಕೆ ಪೂರಕವಾದ ಸಂಪನ್ಮೂಲಗಳನ್ನು ಒದಗಿಸಲಾಗಿದೆ. ಈ ಶಿಕ್ಷಕರ ಮೇಲ್ವಿಚಾರಣೆಯಲ್ಲಿ ಎಲ್ಲಾ ಶ್ರೇಣಿಗಳ ವಿದ್ಯಾರ್ಥಿಗಳು ಎಸ್‌ಟಿಇಎಂ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರೆ. ಇದೇ ರೀತಿಯ ಶಿಕ್ಷಕರ ತರಬೇತಿ ಮತ್ತು ಓರಿಯಂಟೇಶನ್ ಕಾರ್ಯಕ್ರಮವನ್ನು ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಪೀಣ್ಯ ಬ್ಲಾಕ್‌ನಲ್ಲಿ ಕೂಡ ಜಾರಿಗೊಳಿಸಲಾಗುತ್ತದೆ.
ಇದನ್ನೂ ಓದಿ: Gold Rate Today: ಚಿನ್ನದ ಬೆಲೆ ಮತ್ತೆ ಏರಿಕೆ; ಇಂದಿನ ದರ ಹೀಗಿದೆ ನೋಡಿ
ಲೀಲಾ ಪೂನಾವಾಲ ಫೌಂಡೇಶನ್‌ನ ಸಹಭಾಗಿತ್ವದಲ್ಲಿ ಸ್ಥಾಪಿಸಲಾಗಿರುವ ಎಂಜಿನಿಯರಿಂಗ್ ವಿದ್ಯಾರ್ಥಿವೇತನದ ಮೂಲಕ ಎಸ್‌ಟಿಇಎಂನಲ್ಲಿ ಮಹಿಳಾ ಶಿಕ್ಷಣವನ್ನು ಕೂಡ ಎಬಿಬಿ ಸಂಸ್ಥೆ ಬೆಂಬಲಿಸುತ್ತದೆ. ಈ ಕಾರ್ಯಕ್ರಮದ ಮೂಲಕ ಇದುವರೆಗೆ ಎರಡು ಬ್ಯಾಚ್‌ಗಳು ಪದವಿ ಪಡೆದಿವೆ ಎಂದು ತಿಳಿಸಿದೆ.