Site icon Vistara News

Election boycott: ಬಗೆಹರಿಯದ ಮೂಲ ಸೌಕರ್ಯ ಸಮಸ್ಯೆ; ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರದ ಎಚ್ಚರಿಕೆ

Boycott of Elections teerthahalli

#image_title

ಹೊಸನಗರ: ತಾಲೂಕಿನ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮೇಲಿನ ಬೆಸಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋರಗೋಡು ಗ್ರಾಮದ ಗೊರದಳ್ಳಿಯ ಜನರು ವಿಧಾನಸಭೆ ಚುನಾವಣೆಯನ್ನು ಬಹಿಷ್ಕರಿಸುವುದಾಗಿ (Election boycott) ಎಚ್ಚರಿಕೆ ನೀಡಿದ್ದಾರೆ. ಈ ಸಂಬಂಧ ಹೊಸನಗರದ ಗ್ರೇಡ್ 2 ತಹಸೀಲ್ದಾರ್ ರಾಕೇಶ್‌ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

ಈ ಊರಿನಲ್ಲಿ 66ಕ್ಕೂ ಹೆಚ್ಚು ಮನೆಗಳಿದ್ದು, ಸುಮಾರು 223ಕ್ಕೂ ಹೆಚ್ಚು ಮತಗಳಿವೆ. ಇಲ್ಲಿ ಗೊರದಳ್ಳಿಯಿಂದ ನಾಗರಕೊಡಿಗೆ ಪಿಡಬ್ಲ್ಯೂಡಿ ರಸ್ತೆ ಇದ್ದರೂ, ಕಳೆದ 25 ವರ್ಷಗಳಿಂದ ರಸ್ತೆಯ ಮಧ್ಯೆ ಸಿಮೆಂಟ್ ಪೈಪ್ ಹಾಕದೆ ಚರಂಡಿಯಲ್ಲಿ ಹೋಗುವ ನೀರು ರಸ್ತೆಯ ಮೇಲೆ ಹೋಗಿ ಸಂಪೂರ್ಣವಾಗಿ ರಸ್ತೆ ಹಾಳಾಗಿರುತ್ತದೆ. ಇದನ್ನು ಸರಿಪಡಿಸಲು ಸಾಕಷ್ಟು ಬಾರಿ ಶಾಸಕರ, ಸಚಿವರ ಗಮನಕ್ಕೆ ತಂದರೂ ಏನೂ ಪ್ರಯೋಜನವಾಗಿಲ್ಲ ಎಂಬ ಹಿನ್ನೆಲೆಯಲ್ಲಿ ಚುನಾವಣೆಯನ್ನು ಬಹಿಷ್ಕರಿಸಲು ಮುಂದಾಗಿದ್ದಾರೆ.

ಇದನ್ನೂ ಓದಿ: Rakshit shetty: ರಕ್ಷಿತ್‌ ಶೆಟ್ಟಿ-ರುಕ್ಮಿಣಿ ವಸಂತ್‌ ಅಭಿನಯದ ʻಸಪ್ತ ಸಾಗರದಾಚೆ ಎಲ್ಲೋʼ ಶೂಟಿಂಗ್‌ ಪೂರ್ಣ

ಈ ರಸ್ತೆಯಲ್ಲಿ ನೂರಾರು ಜನ ಸಾರ್ವಜನಿಕರು ಮತ್ತು ಶಾಲಾ ಮಕ್ಕಳು, ವೃದ್ದರು ಓಡಾಡಬೇಕಿದೆ. ಆದರೂ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಸರಿಯಾದ ರಸ್ತೆ ವ್ಯವಸ್ಥೆ ಇರುವುದಿಲ್ಲ. ರಸ್ತೆಯ ಅಕ್ಕ-ಪಕ್ಕದ ಮನೆಯವರು ವಾಸವಾಗಿರಲೂ ಸಾಧ್ಯವಾಗಿರುವುದಿಲ್ಲ. ಕಾರಣವೇನೆಂದರೆ, ಸದರಿ ನಮ್ಮ ಗ್ರಾಮ ಪಂಚಾಯಿತಿಯವರು ರಸ್ತೆಯನ್ನು ದುರಸ್ತಿ ಮಾಡಿದ್ದಾರೆ. ಈ ರಸ್ತೆಗೆ ಸುಮಾರು 300 ಮೀಟರ್ ಅಳತೆಯಷ್ಟು ರಸ್ತೆ ಕಾಮಗಾರಿ ಮಾಡಲು ಯೋಜನೆಯನ್ನು ರೂಪಿಸಿ, ಸುಮಾರು 1 ಕಿ.ಮೀ ವರೆಗೂ ಕೇವಲ ಚರಂಡಿಯ ಮಣ್ಣನ್ನು ರಸ್ತೆಗೆ ಎತ್ತಿ ಹಾಕಿ ತಮ್ಮ ಕೆಲಸ ಮುಗಿಸಿ ಹೋಗಿದ್ದಾರೆ. ಬಿಲ್ ಮಾಡಿಸಿಕೊಳ್ಳುವ ನೆಪ ಮಾಡಿ ಈ ಕಾಮಗಾರಿಯನ್ನು ಮಾಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಈಗ ಈ ರಸ್ತೆಯಲ್ಲಿ ಶಾಲಾ ಮಕ್ಕಳು, ವೃದ್ಧರು ಹಾಗೂ ಸಾರ್ವಜನಿಕರು ಓಡಾಡುವ ಪರಿಸ್ಥಿತಿಯಲ್ಲಿ ಇಲ್ಲ. ರಸ್ತೆಯು ಸಂಪೂರ್ಣವಾಗಿ ದೂಳಿಂದ ಕೂಡಿದ್ದು, ಉಸಿರಾಡಲು ಸಹ ಸಾಧ್ಯವಾಗುತ್ತಿಲ್ಲ. ರಸ್ತೆಯ ಪಕ್ಕದ ಊರಿನಲ್ಲಿ ಮರಳಿನ ಸ್ಟಾಕ್‌ಯಾರ್ಡ್ ಮಾಡಲಾಗಿದೆ. ಇದೇ ರಸ್ತೆಯಲ್ಲಿ ಶರಾವತಿ ನದಿಯ ಮರಳನ್ನು ಲಾರಿಯ ಮೂಲಕ ಪ್ರತಿನಿತ್ಯ ತೆಗೆದುಕೊಂಡು ಹೋಗಲಾಗುತ್ತಿದೆ. ಇದು 10-15 ವರ್ಷಗಳಿಂದ ನಡೆಯುತ್ತಾ ಬಂದಿದೆ ಎಂದು ಹೇಳಿದರು.

ಇದನ್ನೂ ಓದಿ: Congress Guarantee: ಯುವಕರಿಗೆ ಕಾಂಗ್ರೆಸ್‌ನ 4 ನೇ ಗ್ಯಾರಂಟಿ: ಪದವೀಧರರಿಗೆ ʼಯುವ ನಿಧಿʼ; ಮಾಸಿಕ 3 ಸಾವಿರ ರೂ.

ಸಾರ್ವಜನಿಕರಿಗೆ ಆಗುವ ತೊಂದರೆ ಬಗ್ಗೆ ಯಾವೊಬ್ಬ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಇದರ ಬಗ್ಗೆ ಗಮನಹರಿಸುತ್ತಿಲ್ಲ. ಇದರ ಬಗ್ಗೆ ಸಾಕಷ್ಟು ಸಲ ಜನಪ್ರತಿನಿಧಿಗಳಿಗೆ ಮನವಿಯನ್ನು ಮಾಡಿದ್ದರೂ ಯಾವ ಪ್ರಯೋಜನವಾಗಿಲ್ಲ. ಆದ್ದರಿಂದ ಅನಿವಾರ್ಯವಾಗಿ ಊರಿನ ಗ್ರಾಮಸ್ಥರು ಎಲ್ಲರೂ ತೀರ್ಮಾನ ಮಾಡಿ ಚುನಾವಣೆ ಬಹಿಷ್ಕಾರ ಮಾಡುವುದೊಂದೇ ದಾರಿಯಾಗಿದೆ. ಆದ್ದರಿಂದ ನಮ್ಮ ಬೇಡಿಕೆಗಳು ಈಡೇರಿಸುವವರೆಗೂ ಯಾವ ಜನಪ್ರತಿನಿಧಿಗಳು ನಮ್ಮೂರಿಗೆ ಮತ ಕೇಳಲು ಬರಬಾರದಾಗಿ ಕೇಳಿಕೊಳ್ಳುತ್ತೇವೆ. ಒಂದು ವಾರದ ಒಳಗೆ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸದಿದ್ದಲ್ಲಿ ಮುಂದೆ ವಿಭಿನ್ನ ಪ್ರತಿಭಟನೆ ನಡೆಸುವುದಲ್ಲದೆ, ಉಪವಾಸ ಸತ್ಯಾಗ್ರಹವನ್ನು ಮಾಡುತ್ತೇವೆಂದು ಈ ಮೂಲಕ ಮನವಿಯಲ್ಲಿ ಎಚ್ಚರಿಸಿದ್ದಾರೆ. ಈ ಸಂದರ್ಭದಲ್ಲಿ ಗ್ರಾಮ ಆಡಳಿತಾಧಿಕಾರಿ ರೇಣುಕಯ್ಯ ಹಾಗೂ ಗ್ರಾಮಸ್ಥರು ಉಪಸ್ಥತರಿದ್ದರು.

ಇದನ್ನೂ ಓದಿ: Karnataka Elections : ಮಂಡ್ಯ ಭಾಗದಲ್ಲಿ ಹತ್ತಾರು ಮುಖಂಡರು ಸದ್ಯವೇ ಬಿಜೆಪಿಗೆ ಬರ್ತಾರೆ ಎಂದ ನಳಿನ್‌ ಕುಮಾರ್‌ ಕಟೀಲ್‌

Exit mobile version