ಸೊರಬ: ಪಟ್ಟಣದ ಹೊಸಪೇಟೆ ಬಡಾವಣೆಯ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಕ್ಕೆ (TAPCMS) ಸೋಮವಾರ ಎರಡನೇ ಅವಧಿಗೆ ನಡೆದ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯ (New President-Vice President Election) ಚುನಾವಣೆಯಲ್ಲಿ ಕಾಂಗ್ರೆಸ್ (Congress) ಬೆಂಬಲಿತರಾದ ಟಿ.ಬಿ. ರಾಜೇಂದ್ರ ನಾಯ್ಕ್ ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಾಗಿ ಎನ್.ಬಿ. ಹಿರಿಯಣ್ಣ ಕಲ್ಲಂಬಿ ಅವಿರೋಧವಾಗಿ ಆಯ್ಕೆಯಾದರು.
ಈ ಹಿಂದೆ ಬಿಜೆಪಿ ಬೆಂಬಲಿತರಾದ ಕೀರ್ತಿರಾಜ್ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಶಿವಮೂರ್ತಿ ಗೌಡ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಎರಡನೇ ಅವಧಿಗೆ ಚುನಾವಣೆ ನಡೆಯಿತು.
15 ಸದಸ್ಯರ ಬಲವುಳ್ಳ ಸಹಕಾರ ಸಂಘದಲ್ಲಿ 12 ಜನ ಸದಸ್ಯರು ಚುನಾವಣೆಯ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದು, ಸದಸ್ಯರಾದ ಶಿವಮೂರ್ತಿ ಗೌಡ, ಬಿ. ನಾಗರಾಜ ಗೌಡ ಹಾಗೂ ಜಿ. ವೀರಭದ್ರಪ್ಪ ಗೈರಾಗಿದ್ದರು. ಚುನಾವಣಾಧಿಕಾರಿಯಾಗಿ ಸಹಕಾರ ಅಭಿವೃದ್ಧಿ ಅಧಿಕಾರಿ ಟಿ.ಬಿ. ಪ್ರಕಾಶ್ ಕಾರ್ಯನಿರ್ವಹಿಸಿದರು. ಟಿಎಪಿಸಿಎಂಸಿಯ ಕಾರ್ಯದರ್ಶಿ ಕೃಷ್ಣ ಸಹಕರಿಸಿದರು.
ಇದನ್ನೂ ಓದಿ: DP Manu: ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ಸ್‌ನಲ್ಲಿ ಮಿಂಚಿದ ಕನ್ನಡಿಗ ಮನು; ಯಾರಿವರು? ಇವರ ಹಿನ್ನೆಲೆ, ಸಾಧನೆ ಏನೇನು?
ನೂತನ ಅಧ್ಯಕ್ಷ ಟಿ.ಬಿ. ರಾಜೇಂದ್ರ ನಾಯ್ಕ್ ಮಾತನಾಡಿ, ಕ್ಷೇತ್ರದ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಸಹಕಾರದಿಂದ ಅಧ್ಯಕ್ಷನಾಗಿ ಆಯ್ಕೆಯಾಗಿದ್ದೇನೆ. ಪಕ್ಷದ ಸೂಚನೆಯಂತೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ನನಗೆ ಸರ್ವ ಸದಸ್ಯರು ಸಹ ಸಹಕಾರ ನೀಡಿದ್ದಾರೆ. ಸಂಘದ ಸರ್ವತೋಮುಖ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದರು.
ನೂತನ ಉಪಾಧ್ಯಕ್ಷ ಎನ್.ಬಿ. ಹಿರಿಯಣ್ಣ ಕಲ್ಲಂಬಿ ಮಾತನಾಡಿ, ಬದಲಾದ ರಾಜಕೀಯ ಸನ್ನಿವೇಶದಲ್ಲಿ ತಮಗೆ ಉಪಾಧ್ಯಕ್ಷ ಸ್ಥಾನ ಲಭಿಸಿದೆ. ತಮಗೆ ದೊರೆತಿರುವ ಉಪಾಧ್ಯಕ್ಷ ಹುದ್ದೆಗೆ ಚ್ಯುತಿ ಬಾರದ ಹಾಗೆ ಎಲ್ಲ ಸದಸ್ಯರ ಸಲಹೆ ಸಹಕಾರದೊಂದಿಗೆ ಕಾರ್ಯನಿರ್ವಹಿಸುತ್ತೇನೆ ಎಂದರು.
ಇದನ್ನೂ ಓದಿ: Koppala News: ಗಂಗಾವತಿ; 2 ಲಕ್ಷ ರೂ ಕಳ್ಳತನ: 24 ಗಂಟೆಯಲ್ಲಿ ಆರೋಪಿಯ ಬಂಧನ
ಈ ವೇಳೆ ಸದಸ್ಯರಾದ ಕೀರ್ತಿರಾಜ್, ಯೂಸೂಫ್ ಸಾಬ್, ಎಲ್.ಜಿ. ರಾಜಶೇಖರ್, ಎಚ್.ಕೆ. ಜಯಶೀಲಗೌಡ, ಎಚ್. ರಾಜಪ್ಪ, ಹನುಮಂತಪ್ಪ, ಕೆ.ವೈ. ಸುರೇಶ್, ಚಿತ್ರಮ್ಮ, ಸೌಭಾಗ್ಯ, ಭೈರಪ್ಪ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ಬಿ. ಅಣ್ಣಪ್ಪ ಹಾಲಘಟ್ಟ, ತಾಪಂ ಮಾಜಿ ಅಧ್ಯಕ್ಷ ಎಚ್. ಗಣಪತಿ, ಮುಖಂಡರಾದ ತಬಲಿ ಬಂಗಾರಪ್ಪ, ಕೆ.ಪಿ. ರುದ್ರಗೌಡ, ಸುರೇಶ್ ಹಾವಣ್ಣನವರ್, ಕೆ.ವಿ. ಗೌಡ, ಸುರೇಶ್ ಬಿಳವಾಣಿ, ಶಿವಪ್ಪ ಉದ್ರಿ, ವಿಶ್ವನಾಥ ಕೊಡಕಣಿ, ಯು. ಫಯಾಜ್ ಅಹ್ಮದ್, ಶಿವಪ್ಪ ಯಡಗೊಪ್ಪ, ಮೆಹಬೂಬ್ ಸೇರಿದಂತೆ ಇತರರಿದ್ದರು.