ದೊಡ್ಡಬಳ್ಳಾಪುರ/ಬೆಂಗಳೂರು : ಇಲ್ಲಿನ ಬಸವೇಶ್ವರ ನಗರದಲ್ಲಿ ಸೆ.16ರ ಬೆಳಗ್ಗೆ ಯುವಕನೊಬ್ಬ ಮನೆ ಮೇಲೆ ಹತ್ತಿ ಡಿಟಿಎಚ್ ಕೇಬಲ್ ಹಾಕುವಾಗ ಕರೆಂಟ್ ಶಾಕ್ (Electric shock) ಹೊಡೆದಿತ್ತು. ಗಂಭೀರ ಗಾಯಗೊಂಡಿದ್ದ ಜಯಕುಮಾರ್ (26) ಚಿಕಿತ್ಸೆ ಫಲಿಸದೇ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸೆ.17ರಂದು ಮೃತಪಟ್ಟಿದ್ದಾರೆ.
ಜಯಕುಮಾರ್ ಡಿಟಿಎಚ್ ಕೇಬಲ್ ಅಳವಡಿಸಲು ಬಂದಿದ್ದ. ಈ ವೇಳೆ ಪಕ್ಕದಲ್ಲಿದ್ದ ವಿದ್ಯುತ್ ತಂತಿ ತಗುಲಿತ್ತು. ಕ್ಷಣಾರ್ಧದಲ್ಲೇ ದೇಹವೆಲ್ಲ ಸುಟ್ಟು ಹೋಗಿತ್ತು. ವಿದ್ಯುತ್ ತಂತಿ ತಗುಲಿ ನರಳಾಡುತ್ತಿದ್ದರೂ, ಭಯದಿಂದ ಜನರು ಸಹಾಯಕ್ಕೆ ಬಂದಿರಲಿಲ್ಲ. ಅಷ್ಟರಲ್ಲಿ ಶೇ. 40 ರಷ್ಟು ಸುಟ್ಟ ಗಾಯಗಳಾಗಿ ನರಳಾಡುತ್ತಿದ್ದ.
ಮನೆ ಮೇಲೆ ಎದ್ದೇಳು ಆಗದೆ ನರಳಾಡುತ್ತಿದ್ದ ಜಯಕುಮಾರ್‌ನನ್ನು ಕೆಲ ಸ್ಥಳೀಯರು ಕೆಳಗಿಸಿ ಆಟೋ ಮೂಲಕ ಆಸ್ಪತ್ರೆಗೆ ರವಾನೆ ಮಾಡಿದ್ದರು. ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಜಯಕುಮಾರ್ ವಿಕ್ಟೋರಿಯಾ ಆಸ್ವತ್ರೆಯಲ್ಲಿ ಮೃತಪಟ್ಟಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಬಸವೇಶ್ವರ ನಗರದಲ್ಲಿ ಈ ಅವಘಡ ನಡೆದಿದೆ.
ಇದನ್ನೂ ಓದಿ : Murder Case : ಪರ ಪುರುಷನ ಮೋಹಿಸಿದವಳ ಕತ್ತು ಸೀಳಿದ ಪತಿ!
ಸಿಲಿಂಡರ್ ಸ್ಫೋಟ; ನಾಲ್ವರಿಗೆ ಗಾಯ, ಓರ್ವ ಗಂಭೀರ
ಬೆಂಗಳೂರಿನ ಮಾರತಹಳ್ಳಿಯ ಮುನೇನಕೊಳಲು ವಸಂತ ಲೇಔಟ್‌ನಲ್ಲಿ ಮನೆಯಲ್ಲಿದ್ದ ಸಿಲಿಂಡರ್ ಲೀಕ್ ಆಗಿ ಅಗ್ನಿಅವಘಡ ಸಂಭವಿಸಿದೆ. ಮನೆಯಲ್ಲಿದ್ದ ನಾಲ್ವರಿಗೆ ಗಾಯಗಳಾಗಿದ್ದು, ಓರ್ವನ ಸ್ಥಿತಿ ಗಂಭೀರವಾಗಿದೆ. ಕಳೆದ ರಾತ್ರಿ ಗ್ಯಾಸ್ ಲೀಕ್ ಆಗಿದ್ದು, ಬೆಳಗ್ಗೆ ಅಡುಗೆ ಮನೆಯ ಲೈಟ್ ಸ್ವಿಚ್ ಆನ್ ಮಾಡಿದಾಗ ಸ್ಫೋಟಗೊಂಡಿದೆ.
ಭಾನುವಾರ ಬೆಳಗ್ಗೆ 6:45 ರ ಸುಮಾರಿಗೆ ನಡೆದಿದ್ದು, ಸೇಲ್ವಾ ನಾಯಕ್ (54), ಸುಧಾ ಬಾಯಿ (34), ನಂದಿತಾ (15),ಮನೋಜ್ (12) ಗಾಯಗೊಂಡಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ಪೊಲೀಸರು ದೌಡಾಯಿಸಿದ್ದು, ಗಾಯಾಳನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ