Site icon Vistara News

Electric shock: ಕಾಡಿಗೆ ತಗುಲಿದ್ದ ಬೆಂಕಿ ನಂದಿಸಲು ಹೋಗಿ ವಿದ್ಯುತ್‌ ಆಘಾತದಿಂದ ಮೃತಪಟ್ಟ ಫಾರೆಸ್ಟ್‌ ವಾಚರ್‌

Forest watcher yallapura

#image_title

ಯಲ್ಲಾಪುರ: ಕಾಡಿಗೆ ತಗುಲಿದ್ದ ಬೆಂಕಿ ನಂದಿಸಲು ಹೋಗಿ ವಿದ್ಯುತ್‌ ಆಘಾತದಿಂದ (Electric shock) ಫಾರೆಸ್ಟ್‌ ವಾಚರ್‌ ಒಬ್ಬರು ಮೃತಪಟ್ಟಿರುವ ಘಟನೆ ತಾಲೂಕಿನ ತೆಲಂಗಾರದಲ್ಲಿ ನಡೆದಿದೆ.

ಜೂಜೆ ಸಿದ್ದಿ ಮೃತರು. ಭಾನುವಾರ (ಫೆ.೨೬) ಸಂಜೆ 7.30ರ ಸುಮಾರಿಗೆ ಕಾಡಿನಲ್ಲಿ ಹೈಟೆನ್ಷನ್‌ ವಿದ್ಯುತ್‌ ಲೈನ್‌ ಕಡಿದು ಬಿದ್ದ ಕಾರಣ ಬೆಂಕಿ ಕಾಣಿಸಿಕೊಂಡಿತ್ತು. ಕಾಲಿನಿಂದ ಬೆಂಕಿಯನ್ನು ನಂದಿಸುತ್ತಿದ್ದ ವೇಳೆ, ತಿಳಿಯದೇ ವಿದ್ಯುತ್‌ ಲೈನ್‌ ಮೇಲೆ ಕಾಲಿಟ್ಟ ಕಾರಣ ದೇಹದಲ್ಲಿ ವಿದ್ಯುತ್‌ ಪ್ರವಹಿಸಿ ಸ್ಥಳದಲ್ಲೇ ಮೃತಪಟ್ಟಿರುತ್ತಾರೆ ಎಂದು ತಿಳಿದುಬಂದಿದೆ. ಮೃತದೇಹವನ್ನು ತಾಲೂಕು ಆಸ್ಪತ್ರೆಗೆ ಸೋಮವಾರ (ಫೆ.೨೭) ತರಲಾಗಿದ್ದು, ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.

ಇದನ್ನೂ ಓದಿ: T20 Cricket : 10 ರನ್​ಗೆ ಆಲ್ಔಟ್​, 2 ಎಸೆತಗಳಲ್ಲಿ ಮ್ಯಾಚ್​ ಫಿನಿಶ್​; ಟಿ20 ಕ್ರಿಕೆಟ್​ನಲ್ಲಿ ಹೊಸ ದಾಖಲೆ

Exit mobile version