Site icon Vistara News

Electric Shock : ಲೈನ್‌ ದುರಸ್ತಿ ವೇಳೆ ವಿದ್ಯುತ್‌ ಪ್ರವಹಿಸಿ ಇಬ್ಬರು ಗುತ್ತಿಗೆ ನೌಕರರು ಸಾವು!

Death due to electric shock in Maluru

ಬೆಂಗಳೂರು ಗ್ರಾಮಾಂತರ/ಚಿಕ್ಕೋಡಿ: ಬೆಂಗಳೂರು ಗ್ರಾಮಾಂತರದ ಹೊಸಕೋಟೆ ತಾಲೂಕಿನ ಮಾಲೂರು ರಸ್ತೆಯ ವಿಜಯನಗರ ಗೇಟ್ ಬಳಿ ವಿದ್ಯುತ್‌ ಪ್ರವಹಿಸಿ (Electric Shock) ಗುತ್ತಿಗೆ ನೌಕರನೊಬ್ಬ ಮೃತಪಟ್ಟಿದ್ದಾನೆ. ಕೋಲಾರ ಮೂಲದ ಅನಿಲ್ (35) ಮೃತ ದುರ್ದೈವಿ.

ಚೆನ್ನೈ ಸೂಪರ್ ಎಕ್ಸ್‌ಪ್ರೆಸ್‌ ಕಾಮಗಾರಿ ಹಿನ್ನೆಲೆ ವಿದ್ಯುತ್ ಕಂಬ ಬದಲಿಸುವಾಗ ಈ ದುರ್ಘಟನೆ ನಡೆದಿದೆ. ಅನಿಲ್‌ ವಿದ್ಯುತ್‌ ಕಂಬ ಏರಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ದಿಢೀರ್‌ ವಿದ್ಯುತ್‌ ಪ್ರವಹಿಸಿದೆ. ಪರಿಣಾಮ ವಿದ್ಯುತ್‌ ಕಂಬದಲ್ಲೇ ಸುಟ್ಟು ಕರಕಲಾಗಿದ್ದಾರೆ.

ಸ್ಥಳಕ್ಕೆ ಹೊಸಕೋಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಕೆಳಗೆ ಇಳಿಸಿ ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಿದ್ದಾರೆ.

ಇದನ್ನೂ ಓದಿ; Students Drown: ಗೋ ಕಟ್ಟೆಯಲ್ಲಿ ಮುಳುಗಿ ನಾಲ್ವರ ಸಾವು; ರೀಲ್ಸ್‌ ಹುಚ್ಚಿಗೆ ನಡೆಯಿತು ದುರಂತ

ಹೆಸ್ಕಾಂ ಗುತ್ತಿಗೆ ನೌಕರ ಸಾವು

ದುರಸ್ತಿ ಕಾರ್ಯ ವೇಳೆ ವಿದ್ಯುತ್ ಪ್ರವಹಿಸಿ ಕಂಬದ ಮೇಲೆಯೇ ಹೆಸ್ಕಾಂ ಗುತ್ತಿಗೆ ನೌಕರ ಮೃತಪಟ್ಟಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ಹೊಸಪೇಟೆ ಗಲ್ಲಿಯಲ್ಲಿ ನಡೆದಿದೆ. ಸಿದ್ದರಾಮ ಕುಪವಾಡೆ (38) ಮೃತ ದುರ್ದೈವಿ

ಸಿದ್ದರಾಮ ಕುಪವಾಡೆ ಚಿಕ್ಕೋಡಿಯ ದಫೇದರ್‌ಕೋಡಿ ನಿವಾಸಿ ಆಗಿದ್ದಾರೆ. ಹೊಸಪೇಟೆ ಗಲ್ಲಿ ಹೊರವಲಯದ ಕೃಷಿ ಜಮೀನು ಬಳಿ ದುರಸ್ತಿ ಕಾರ್ಯಕ್ಕಾಗಿ ಸಿದ್ದರಾಮ ಕುಪವಾಡೆ ವಿದ್ಯುತ್ ಕಂಬ ಏರಿದ್ದರು. ಇಬ್ಬರು ನೌಕರರು ಕೆಳಗೆ ಇದ್ದರು. ಸಿದ್ದರಾಮ ವಿದ್ಯುತ್ ಕಂಬವೇರಿ ದುರಸ್ತಿ ಕಾರ್ಯ ಮಾಡುತ್ತಿದ್ದರು. ಈ ವೇಳೆ ಏಕಾಏಕಿ ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದಾರೆ.

ವಿದ್ಯುತ್ ಕಂಬದ ಮೇಲೆ ಮೃತದೇಹವು ನೇತಾಡುತ್ತಿದೆ. ಸ್ಥಳಕ್ಕೆ ಹೆಸ್ಕಾಂ ಅಧಿಕಾರಿಗಳು ಹಾಗೂ ಚಿಕ್ಕೋಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version