Site icon Vistara News

Elephant Arjuna : ನೆರವೇರಿದ ಸಾಕಾನೆ ಅರ್ಜುನನ 11ನೇ ಕಾರ್ಯ; ಬಿಕ್ಕಿ ಬಿಕ್ಕಿ ಅತ್ತ ಮಾವುತರು

Mysore arjun death in hasana

ಹಾಸನ: ಸಾಕಾನೆ ಅರ್ಜುನನ ಕಳೆದುಕೊಂಡು 11 ದಿನಗಳು ಕಳೆದರೂ (Elephant Arjuna) ಮಾವುತರ ದುಃಖ ಮಾತ್ರ ಹಾಗೇ ಇದೆ. ಅರಣ್ಯ ಇಲಾಖೆಯ ಕಾಡಾನೆ ಸೆರೆ ಕಾರ್ಯಾಚರಣೆಯಲ್ಲಿ ಸಾಕಾನೆ ಅರ್ಜುನ ಸಾವನ್ನಪ್ಪಿತ್ತು. ಮಾವುತರು, ಕಾವಾಡಿಗರು, ಅರಣ್ಯ ಇಲಾಖೆ ಹಾಗೂ ಯಸಳೂರು ಸುತ್ತಮುತ್ತಲ ಗ್ರಾಮಸ್ಥರು 11ನೇ ದಿನದ ತಿಥಿ ‌ಕಾರ್ಯವನ್ನು ನೆರವೇರಿಸಿದರು. ಬೆಳಗ್ಗೆಯಿಂದಲೂ ಸಮಾಧಿ ಸ್ಥಳಕ್ಕೆ ನೂರಾರು ಸಂಖ್ಯೆಯಲ್ಲಿ ಜನರು ಬಂದು, ಪುರೋಹಿತರ ನೇತೃತ್ವದಲ್ಲಿ ಪೂಜೆಯನ್ನು ಮಾಡಿ ಎಡೆ ಇಟ್ಟರು.‌ ಬಂದಿದ್ದ ಜನರಿಗೆ ಊಟದ ವ್ಯವಸ್ಥೆಯನ್ನೂ ಮಾಡಲಾಗಿತ್ತು.

ಶುಕ್ರವಾರ ಮಧ್ಯಾಹ್ನದ ಬಳಿಕ ಸಾಕಾನೆ ಅರ್ಜುನನ ಮಾವುತ ವಿನು ಹಾಗೂ ಅವರ ಕುಟುಂಬ ವರ್ಗ ಬಂದು ಪೂಜೆ ಮಾಡಿದರು. ಅರ್ಜುನಿಗೆ ಇಷ್ಟವಾದ ಕಬ್ಬು, ಬೆಲ್ಲ, ಹುಲ್ಲು, ಭತ್ತ, ಅನ್ನದ ಮುದ್ದೆಯನ್ನು ಎಡೆ ರೂಪದಲ್ಲಿ ಅರ್ಪಿಸಿದರು. ಪೂಜೆ ಬಳಿಕ ಅರ್ಜುನನ ಸಮಾಧಿ ಬಳಿ ಮಾವುತ ವಿನು ಕಣ್ಣೀರು ಹಾಕಿ, ಎದ್ದೇಳು ಅರ್ಜುನ ಎಂದು ರೋದಿಸಿದರು. ವಿನು ಕುಟುಂಬಸ್ಥರು ಕೂಡ ಅರ್ಜುನನ ನೆನೆದು ಬಿಕ್ಕಿ ಬಿಕ್ಕಿ ಅಳುತ್ತಿದ್ದರು.

ಇದನ್ನೂ ಓದಿ: Road Accident : ಬಸ್‌ ಡಿಕ್ಕಿಯಾಗಿ ಆಟೋದಲ್ಲಿದ್ದವರು ಅಪ್ಪಚ್ಚಿ; ಬೈಕ್‌ ಆ್ಯಕ್ಸಿಡೆಂಟ್‌ನಲ್ಲಿ ಅಪ್ರಾಪ್ತರಿಬ್ಬರು ಸಾವು!

ಸ್ಮಾರಕಕ್ಕೆ ಒತ್ತಾಯ

ಅರ್ಜುನನ ಸಮಾಧಿ ಸ್ಥಳಕ್ಕೆ ನಿತ್ಯವೂ ನೂರಾರು ಸಂಖ್ಯೆಯಲ್ಲಿ ಜನರು ಬಂದು ಹೋಗುತ್ತಿದದಾರೆ. ಅರ್ಜುನನನ್ನು ಅಂತ್ಯ ಸಂಸ್ಕಾರ ಮಾಡಿದ ಸ್ಥಳದಲ್ಲಿ ಹಾಗೂ ಬಳ್ಳೆಯಲ್ಲಿ ಸರ್ಕಾರ ಈಗಾಗಲೇ ಸ್ಮಾರಕವನ್ನು ಮಾಡುವುದಾಗಿ ಹೇಳಿದೆ. ಶೀಘ್ರ ಸ್ಮಾರಕವನ್ನು ಮಾಡಬೇಕೆಂದು ಸ್ಥಳೀಯರು ಹಾಗೂ ಮಾವುತರು ಒತ್ತಾಯ ಮಾಡಿದರು. ಇದರ ಜತೆಗೆ ಅಂತ್ಯಸಂಸ್ಕಾರದ ಜಾಗವನ್ನು ರಕ್ಷಣೆ ಮಾಡಬೇಕು. ಇಲ್ಲಿಗೆ ಬರುವವರಿಗೆ ಸರಿಯಾದ ರಸ್ತೆಯನ್ನು ವ್ಯವಸ್ಥಿತವಾಗಿ ಮಾಡಬೇಕು ಎಂದರು.

ಸಮಾಧಿಗೆ ಹಾಕಿದ್ದ ತಂತಿಬೇಲಿ ಧ್ವಂಸ ಮಾಡಿದ ಕಾಡಾನೆ!

ಇನ್ನೂ ತಡ ರಾತ್ರಿ ಅರ್ಜುನ ಸಮಾಧಿ ಸ್ಥಳಕ್ಕೆ ಕಾಡಾನೆ ಬಂದು, ಸುತ್ತಲೂ ಹಾಕಿದ್ದ ತಂತಿಬೇಲಿಯನ್ನು ದ್ವಂಸ ಮಾಡಿದೆ. ಕಂಬ ಹಾಗೂ ತಂತಿಯನ್ನು ತುಳಿದು ಹಾಕಿ, ಸಮಾಧಿಯ ಹತ್ತಿರಕ್ಕೂ ಬಂದು ಓಡಾಡಿದೆ.

ಏನಿದು ಘಟನೆ?

ಎಂಟು ಬಾರಿ ಚಾಮುಂಡೇಶ್ವರಿ ದೇವಿಯನ್ನು ತನ್ನ ಭುಜದ ಮೇಲೆ ಹೊತ್ತು ಮೆರೆಸಿ ಜಗತ್ತಿಗೆ ದರ್ಶನ ಮಾಡಿಸಿದ ಸಾಹಸಿಗ. ಇಂಥ ಪ್ರಚಂಡ ತಾಕತ್ತಿನ ಸಾಕಾನೆ ಅರ್ಜುನ (Elephant Arjuna) ಹಾಸನ ಜಿಲ್ಲೆಯ (Hasana News) ಸಕಲೇಶಪುರ ತಾಲೂಕಿನ ಯಸಳೂರು ಕಾಡಿನಲ್ಲಿ ಪುಂಡಾನೆಯೊಂದನ್ನು ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಡಿಸೆಂಬರ್ 4 ರಂದು ಜೀವ ತೆತ್ತಿದ್ದ.

ಅರ್ಜುನನಿಗೆ 60 ವರ್ಷದ ದಾಟಿದ ಕಾರಣಕ್ಕೆ ಮೈಸೂರು ದಸರಾ (Mysore Dasara) ಅಂಬಾರಿ ಹೊರುವ ಗೌರವದಿಂದ ನಿವೃತ್ತಿ ಹೊಂದಿ ಕಾಡಿನಲ್ಲಿ ಗೌರವಯುತ ಜೀವನವನ್ನು ಸಾಗಿಸುತ್ತಿದ್ದ. ಆದರೆ ಕಾಡಾನೆ ಮತ್ತು ವ್ಯವಸ್ಥೆಯ ಹೊಡೆತಕ್ಕೆ ಸಿಲುಕಿ ಸಹಾಯಕನಾಗಿ ದುರಂತ ನಾಯಕನಂತೆ (Tragic Hero) ಉಸಿರುಚೆಲ್ಲಿದ್ದ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version