ಕೋಲಾರ: ಮಾನವ-ಕಾಡುಪ್ರಾಣಿಗಳ ಸಂಘರ್ಷಗಳ ಪ್ರಕರಣಗಳು ದಿನೇ ದಿನೆ ಹೆಚ್ಚುತ್ತಿವೆ. ಕಾಡಿನಿಂದ ಅನೇಕ ಪ್ರಾಣಿಗಳು ನಾಡಿನತ್ತ ಬರುತ್ತಿದ್ದು, ಜನ-ಜಾನುವಾರುಗಳ ಮೇಲೆ ದಾಳಿ ನಡೆಸಿ ಆತಂಕವನ್ನು ಹುಟ್ಟುಹಾಕುತ್ತಿವೆ. ಇನ್ನು ಗಜಪಡೆಗಳೂ ಸಹ ರಾಜ್ಯದ ಅಲ್ಲಲ್ಲಿ ದಾಳಿ (Elephant Attack) ನಡೆಸುವ ಮೂಲಕ ಸಾಕಷ್ಟು ಬೆಳೆ ಹಾಗೂ ಪ್ರಾಣ ಹಾನಿಗಳಿಗೆ ಕಾರಣವಾಗುತ್ತಿವೆ. ಈಗ ಚಿತ್ತೂರು ಜಿಲ್ಲೆ ಗಡಿ ಭಾಗದಲ್ಲಿ ಕಾಡಾನೆಗಳ ಹಿಂಡೇ ಪ್ರತ್ಯಕ್ಷವಾಗಿದ್ದು, ಎಲ್ಲರ ಆತಂಕಕ್ಕೆ ಕಾರಣವಾಗಿವೆ.
ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಪಲಮನೇರುವಿನಲ್ಲಿ ಮತ್ತೆ ಆನೆಗಳ ಗುಂಪು ರಸ್ತೆಯಲ್ಲಿ ಕಾಣಿಸಿಕೊಂಡಿವೆ. 22 ಆನೆಗಳ ಹಿಂಡು ಮೊಸಲಿಮಡುಗು ಗ್ರಾಮದ ಬಳಿ ಗುಡಿಯಾಟ್ಟಂ ರಸ್ತೆಗೆ ಬುಧವಾರ (ಡಿ. ೧೪) ಬೆಳಗ್ಗೆ ನುಗ್ಗಿವೆ. ರಸ್ತೆಯಲ್ಲಿಯೇ ಈ ಗಜಪಡೆಗಳು ನಿಂತಿದ್ದರಿಂದ ಗಂಟೆಗಟ್ಟಲೇ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಈ ಹಿನ್ನೆಲೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಇನ್ನು ವಿಷಯ ತಿಳಿದ ಅರಣ್ಯಾಧಿಕಾರಿಗಳು ಸ್ಥಳಕ್ಕೆ ದಾವಿಸಿದ್ದು, ಆನೆಗಳ ಹಿಂಡನ್ನು ಕಾಡಿಗೆ ಓಡಿಸಲು ಹರಸಾಹಸ ಪಡುತ್ತಿದ್ದಾರೆ. ಅಕ್ಕಪಕ್ಕದ ಗ್ರಾಮಸ್ಥರಲ್ಲಿಯೂ ಇದು ಆತಂಕ ಮೂಡಿಸಿದ್ದು, ಆನೆಗಳು ಎಲ್ಲಿ ತಮ್ಮ ಗ್ರಾಮಗಳಿಗೆ ನುಗ್ಗಿಬಿಟ್ಟರೆ ಎಂಬ ಭಯ ಕಾಡುತ್ತಿದೆ.
ಇದನ್ನೂ ಓದಿ | Shahrukh Khan | ʻಪಠಾಣ್ʼನಲ್ಲಿ ಶಾರುಖ್ ಸಂಭಾವನೆ 100 ಕೋಟಿ ರೂ: ದೀಪಿಕಾ ಪಡುಕೋಣೆ ಪಡೆದಿದ್ದೆಷ್ಟು?