Site icon Vistara News

Elephant Attack : ಚಾಮರಾಜನಗರದಲ್ಲಿ ಮತ್ತೆ ಕಾಡಾನೆಗಳ ದಾಳಿ; ಅಪಾರ ಬೆಳೆ ನಷ್ಟ

elephant attack in chamarajnagar

ಚಾಮರಾಜನಗರ: ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಮಿತಿಮೀರುತ್ತಿವೆ. ಆಗಾಗ ದಾಳಿ ನಡೆಸುವ ಮೂಲಕ ಬೆಳೆ ಮತ್ತು ಪ್ರಾಣ ಹಾನಿಗೆ ಕಾರಣವಾಗುತ್ತಿವೆ. ಇದೀಗ ಚಾಮರಾಜನಗರ ತಾಲೂಕಿನ ವಡ್ಗಲ್‌ಪುರ ಸುತ್ತಮುತ್ತ ಕಾಡಾನೆಗಳ ಹಿಂಡು ದಾಳಿ (Elephant Attack) ಮಾಡಿದ್ದು, ಅಪಾರ ಪ್ರಮಾಣದ ಬೆಳೆಗಳಿಗೆ ಹಾನಿಯಾಗಿವೆ.

200ಕ್ಕು ಹೆಚ್ಚು ತೆಂಗಿನ ಗಿಡ, 2000ಕ್ಕೂ ಹೆಚ್ಚು ಬಾಳೆ ಗಿಡಗಳನ್ನು ತುಳಿದು ನಾಶ ಮಾಡಿವೆ. ಈ ಕಾಡಾನೆಗಳ ಹಿಂಡು ಕಳೆದ ಮೂರ್ನಾಲ್ಕು ದಿನಗಳಿಂದ ವಡ್ಗಲ್‌ಪುರ ಸುತ್ತಮುತ್ತ ಅಡ್ಡಾಡುತ್ತಿದ್ದು, ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.

ಕಾಡಂಚಿನಲ್ಲಿ ಸಮರ್ಪಕ ಆನೆ ಕಂದಕ ಹಾಗೂ ಸೋಲಾರ್ ಬೇಲಿ ಇಲ್ಲದ ಕಾರಣ ಅವುಗಳು ನಾಡಿನತ್ತ ಬರುತ್ತಿವೆ. ಕಳೆದ ವಾರವಷ್ಟೇ ಹಸುವೊಂದನ್ನು ತುಳಿದು ಸಾಯಿಸಿದ್ದವು, ಇದರಿಂದ ಜನರ ಜೀವಕ್ಕೂ ಅಪಾಯಕಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಮತ್ತಷ್ಟು ಬೆಳೆ ಹಾನಿಯಾಗುವ ಆತಂಕವಿದ್ದು, ಅರಣ್ಯಾಧಿಕಾರಿಗಳು ಕಾಡಾನೆಗಳ ಉಪಟಳ ತಪ್ಪಿಸಬೇಕು. ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ಇದನ್ನೂ ಓದಿ | BJP Executive Meeting | ಬಿಜೆಪಿ ಕಾರ್ಯಕಾರಿಣಿ ಇಂದು ಅಂತ್ಯ, ಸಂಜೆ ಮೋದಿ ಭಾಷಣವೇ ಹೈಲೈಟ್!

Exit mobile version