Site icon Vistara News

Elephant attack | ಚಿಕ್ಕಮಗಳೂರಲ್ಲಿ ಆಪರೇಷನ್‌ ಎಲಿಫೆಂಟ್‌ಗೆ ತಗುಲುವ ವೆಚ್ಚ ಎಷ್ಟು ಗೊತ್ತಾ?

Elephant attack ಕಾಡಾನೆ ಸೆರೆಗೆ ತಗುಲುವ ವೆಚ್ಚ

ಚಿಕ್ಕಮಗಳೂರು: ಕಾಫಿ ನಾಡು ಚಿಕ್ಕಮಗಳೂರಿನಲ್ಲಿ ಉಪಟಳ ನೀಡುತ್ತಿರುವ ಪುಂಡ ಕಾಡಾನೆಗಳ (Elephant attack) ಸೆರೆ ಕಾರ್ಯಾಚರಣೆ ಮುಂದುವರಿದಿದೆ. ಪುಂಡಾನೆಗಳ ಸೆರೆಗೆ ಆಗಮಿಸಿರುವ ಸಾಕು ಆನೆಗಳ ಖರ್ಚು ವೆಚ್ಚ ಮಾತ್ರ ಎಂಥವರನ್ನೂ ಮೂಕರನ್ನಾಗಿಸುತ್ತದೆ.

ಸಾಕಾನೆ ಸಹಾಯದಿಂದ ಪುಂಡಾನೆಯನ್ನು ಸೆರೆಯಿಡಿದ ಕ್ಷಣ

ಅರಣ್ಯ ಇಲಾಖೆ ಒಂದು ಆನೆಗೆ ಮಾಡುತ್ತಿರುವ ಹಣದ ಖರ್ಚನ್ನು ಕೇಳಿ ಸ್ಥಳೀಯರೇ ಆಶ್ಚರ್ಯ ಪಟ್ಟಿದ್ದಾರೆ. ಕಾರ್ಯಾಚರಣೆಗೆ ಬಳಸಿಕೊಳ್ಳಲಾಗುತ್ತಿರುವ ಒಂದು ಆನೆಗೆ ಬರೋಬ್ಬರಿ 25 ಲಕ್ಷ ರೂಪಾಯಿಯನ್ನು ಅರಣ್ಯ ಇಲಾಖೆ ಖರ್ಚು ಮಾಡುತ್ತಿದೆ. ಮೂಡಿಗೆರೆಯ ಕುಂದೂರಿಗೆ ಆರು ಸಾಕು ಆನೆಗಳು ಆಗಮಿಸಿದ್ದು, ಒಂದೂವರೆ ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತಿದೆ.

ಇವುಗಳ ಸಾಗಾಟ ಹಾಗೂ ವಾಹನಗಳ ಖರ್ಚು ವೆಚ್ಚವನ್ನು ಸೇರಿಸಿದರೆ ಎರಡು ಕೋಟಿಗೂ ಹೆಚ್ಚು ಹಣ ಖರ್ಚಾಗುತ್ತಿದೆ. ಇನ್ನು ಕಾರ್ಯಾಚರಣೆಯ ದಿನಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಹಣದ ಖರ್ಚು ದುಪ್ಪಟ್ಟಾಗಲಿದೆ.

ಚಿಕ್ಕಮಗಳೂರು ಅರಣ್ಯ ಇಲಾಖೆ ಮಾಹಿತಿಯ ಮೂಲಗಳ ಪ್ರಕಾರ ಕಳೆದ ಬಾರಿಯ ಕಾಡಾನೆಗಳ ಸೆರೆ ಕಾರ್ಯಾಚರಣೆಗೆ 2 ಕೋಟಿ 75 ಲಕ್ಷ ರೂಪಾಯಿ ಖರ್ಚಾಗಿದೆ ಎನ್ನಲಾಗುತ್ತಿದೆ. ಆದರೆ, ಈ ಬಾರಿ ಮೂರು ಪುಂಡ ಆನೆಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆಯನ್ನು ನಡೆಸುತ್ತಿದೆ. ಈ ಬಾರಿ ಎಷ್ಟು ದಿನ ಕಾರ್ಯಾಚರಣೆ ನಡೆಯಲಿದೆ ಎಂಬುದರ ಮೇಲೆ ಎಷ್ಟು ಕೋಟಿ ಹಣ ವ್ಯಯವಾಗಲಿದೆ ಎಂಬುದು ತಿಳಿಯಲಿದೆ.

ಇದನ್ನೂ ಓದಿ | Elephant attack | ಚಿಕ್ಕಮಗಳೂರಲ್ಲಿ ಆಪರೇಷನ್‌ ಎಲಿಫೆಂಟ್; ಮೂರರಲ್ಲಿ ಒಂದು ಕಾಡಾನೆ ಸೆರೆ‌

Exit mobile version