Site icon Vistara News

Elephant attack | ಮುಂದುವರಿದ ಕಾಡಾನೆಗಳ ಉಪಟಳ; ಶೆಡ್‌ಗೆ ನುಗ್ಗಿ ಹಸುವಿನ ಮೇಲೆ ದಾಳಿ ಮಾಡಿದ ಗಜಪಡೆ

ಚಾಮರಾಜನಗರ: ಕಾಡಿನಿಂದ ನಾಡಿಗೆ ಕಾಡುಪ್ರಾಣಿಗಳು ಬರುತ್ತಿದ್ದು ಜನರ ನಿದ್ದೆಗೆಡಿಸಿದೆ. ಇಲ್ಲಿನ ಹೊನ್ನಳ್ಳಿ ಎಲಚಟ್ಟಿಯಲ್ಲಿ ಕಾಡಾನೆಗಳ ಹಿಂಡು (Elephant attack) ಗ್ರಾಮಕ್ಕೆ ನುಗ್ಗಿದ್ದು, ಹಸುವೊಂದನ್ನು ಬಲಿ ಪಡೆದಿದೆ.

ರೈತ ಚಿಕ್ಕಮಾದೇಗೌಡ ಎಂಬುವವರ ತೋಟಕ್ಕೆ ಆನೆಗಳು ನುಗ್ಗಿದ್ದು, ಬಳಿಕ ಶೆಡ್‌ವೊಂದನ್ನು ಉರುಳಿಸಿದೆ. ಶೆಡ್‌ಗೆ ನುಗ್ಗಿ ಹಸುವಿನ ಮೇಲೆ ದಾಳಿ ಮಾಡಿದ್ದು, ಹಸು ಸ್ಥಳದಲ್ಲಿಯೇ ಅಸುನೀಗಿದೆ. ಕಾಡಾನೆಗಳ ಉಪಟಳ ತಪ್ಪಿಸುವಂತೆ ರೈತರು ಆಗ್ರಹಿಸಿದ್ದು, ಜೀವ ಭಯದಿಂದಾಗಿ ಮನೆಯಿಂದ ಹೊರಗೆ ಬರಲು ಹಿಂದೇಟು ಹಾಕುವಂತಾಗಿದೆ.

ಇದನ್ನೂ ಓದಿ | ಅಖಾಡಕ್ಕಿಳಿದು ಕಬಡ್ಡಿ ಮೈದಾನದಲ್ಲಿ ತೊಡೆ ತಟ್ಟಿದ ನಿಖಿಲ್ ಕುಮಾರಸ್ವಾಮಿ; ಶಿಳ್ಳೆ, ಚಪ್ಪಾಳೆಗಳ ಸುರಿಮಳೆ

Exit mobile version