ಚಾಮರಾಜನಗರ: ಇಲ್ಲಿನ ಗುಂಡ್ಲುಪೇಟೆ ತಾಲೂಕಿನ ಬೆಟ್ಟಮಾದಳ್ಳಿ ಗ್ರಾಮದಲ್ಲಿ ಜನವರಿ 2ರಂದು ರೈತನ ಮೇಲೆ ದಾಳಿ ನಡೆಸಿದ್ದ ಕಾಡಾನೆಯನ್ನು (Elephant attack) ಅರಣ್ಯಾಧಿಕಾರಿಗಳು ಸೆರೆ ಹಿಡಿದಿದ್ದಾರೆ. ಕಾಡಂಚಿನ ಗ್ರಾಮಗಳಲ್ಲಿ ತೀವ್ರ ಉಪಟಳ ನೀಡುತ್ತಿದ್ದ ಪುಂಡಾನೆಯನ್ನು ಅರಣ್ಯಾಧಿಕಾರಿಗಳು ಕಾರ್ಯಾಚರಣೆ ನಡೆಸಿ ಸೆರೆ ಹಿಡಿದಿದ್ದು, ರೈತರು ನಿಟ್ಟುಸಿರು ಬಿಟ್ಟಿದ್ದಾರೆ.
ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತ ದೇವರಾಜ್ ಎಂಬುವವರು ಕಾಡಾನೆ ದಾಳಿಯಿಂದ ಗಂಭೀರ ಗಾಯಗೊಂಡು ಆಸ್ಪತ್ರೆಗೆ ಸೇರಿದ್ದರು. ಆನೆಯು ಜಮೀನಿನಲ್ಲಿ ಬೀಡುಬಿಟ್ಟಿದ್ದರಿಂದ ಅಕ್ಕಪಕ್ಕದ ಜಮೀನಿನ ರೈತರು ಕೆಲಸಕ್ಕೆ ಹೋಗಲು ಭಯಪಡುವಂತಾಗಿತ್ತು. ದಾಳಿ ವಿಚಾರ ತಿಳಿಸಿದರೂ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಆಗಮಿಸಿಲ್ಲ ಎಂದು ರೈತರು ಆಕ್ರೋಶ ಹೊರಹಾಕಿದ್ದರು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಅರಣ್ಯಾಧಿಕಾರಿಗಳು ಜನವರಿ 3ರಂದು ಕಾರ್ಯಾಚರಣೆಗಿಳಿದು ಗುಂಡ್ಲುಪೇಟೆ ತಾಲೂಕಿನ ಬೋಗವಾಳುವಡೆಯನಪುರ ಸಮೀಪದ ಕಲ್ಲ ಹಳ್ಳದಲ್ಲಿ ಆನೆಯನ್ನು ಸೆರೆ ಹಿಡಿದಿದ್ದಾರೆ. ಸಾಕಾನೆಗಳಾದ ಅಭಿಮನ್ಯು ನೇತೃತ್ವದಲ್ಲಿ ಗಣೇಶ, ಗಜೇಂದ್ರ, ಭೀಮ ಆನೆಗಳು ಪುಂಡಾನೆ ಸೆರೆಗೆ ಸಹಕಾರ ನೀಡಿದವು. ಪುಂಡಾನೆಗೆ ಅರಿವಳಿಕೆ ಮದ್ದು ನೀಡಿ ಕ್ರೇನ್ ಮೂಲಕ ಲಾರಿಗೆ ಹತ್ತಿಸಿ ರಾಮಾಪುರ ಆನೆ ಶಿಬಿರಕ್ಕೆ ಸ್ಥಳಾಂತರ ಮಾಡಲಾಗಿದೆ.
ಇದನ್ನೂ ಓದಿ | Manvi MLA | ಕಳಪೆ ಕಾಮಗಾರಿಗೆ ಕಿಡಿ; ಗುತ್ತಿಗೆದಾರನ ಕನ್ನಡಕ ಕಿತ್ತೆಸೆದ ಮಾನ್ವಿ ಶಾಸಕ ರಾಜಾ ವೆಂಕಟಪ್ಪ ನಾಯಕ