Site icon Vistara News

Elephant attack | ಆನೆ ತುಳಿತಕ್ಕೆ ಅರಣ್ಯ ವೀಕ್ಷಕ ಬಲಿ; ಕಾಡಾನೆಗಳನ್ನು ಸ್ಥಳಾಂತರಿಸುವಂತೆ ಸ್ಥಳೀಯರ ಒತ್ತಾಯ

elephanth

ರಾಮನಗರ/ಹಾಸನ: ಇಲ್ಲಿನ ಕನಕಪುರ ತಾಲೂಕಿನ ಬಿಳಿಕಲ್ಲು ಅರಣ್ಯ ಪ್ರದೇಶದ ಸುಂಡಘಟ್ಟ ಗ್ರಾಮದಲ್ಲಿ ಆನೆ ತುಳಿತಕ್ಕೆ ಅರಣ್ಯ ವೀಕ್ಷಕ ಬಲಿ (Elephant attack) ಆಗಿರುವ ಘಟನೆ ನಡೆದಿದೆ. ಅದೇ ಗ್ರಾಮದ ಹೊಳಸಾಲಯ್ಯ (60) ಆನೆ ತುಳಿತಕ್ಕೆ ಮೃತಪಟ್ಟ ವ್ಯಕ್ತಿ.

ಆನೆ ದಾಳಿಗೆ ಬಲಿಯಾದ ಹೊಳಸಾಲಯ್ಯ

ಹೊಳಸಾಲಯ್ಯ, ಹೊರಗುತ್ತಿಗೆ ಆಧಾರದ ಮೇಲೆ ಅರಣ್ಯ ವೀಕ್ಷಕನಾಗಿ ಕೆಲಸ ಮಾಡುತ್ತಿದ್ದರು. ಜನನಿಬಿಡ ಪ್ರದೇಶಕ್ಕೆ ಆನೆ ಬಂದಾಗ ಓಡಿಸಲು ಮುಂದಾಗಿದ್ದಾರೆ. ಈ ವೇಳೆ ಆನೆ ದಾಳಿ ನಡೆಸಿದೆ ಎನ್ನಲಾಗಿದೆ. ಆನೆ ತುಳಿತಕ್ಕೆ ಹೊಳಸಾಲಯ್ಯ ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಕನಕಪುರ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಕನಕಪುರ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

ಏಕವಚನದಲ್ಲಿಯೇ ಪರಿಸರವಾದಿಗಳ ಮೇಲೆ ವಾಗ್ದಾಳಿ ನಡೆಸಿದ ಸ್ಥಳೀಯರು

ಪರಿಸರವಾದಿಗಳ ವಿರುದ್ಧ ಹರಿಹಾಯ್ದ ಸ್ಥಳೀಯರು ʻʻಅವನ್ಯಾವನೋ ಪರಿಸರವಾದಿ ಆನೆ ಹಿಡಿಬೇಡಿ ಅಂತ ಹೇಳೋನೋ, ಅವನ್ನ ಹಿಡಿದುಕೊಂಡು ಹೊಡಿತಿವಿ ಹಂಗೇನಾದ್ರು ಮಾಡಿದ್ರೆʼʼ ಎಂದು ಹಾಸನದಲ್ಲಿ ಸ್ಥಳೀಯರು ಅರಣ್ಯಾಧಿಕಾರಿಗಳ ಎದುರು ಸ್ಥಳೀಯರು ಆಕ್ರೋಶ ಹೊರಹಾಕಿದರು.

ಸಿಎಂ ಬಸವರಾಜ್ ಬೊಮ್ಮಯಿ ಸೂಚನೆಯಂತೆ ಹಾಸನ ಹಾಗೂ ಕೊಡಗು ಜಿಲ್ಲೆಯಲ್ಲಿ ಕಾಡಾನೆ vs ಮಾನವ ಸಂಘರ್ಷ‌ ನಿಯಂತ್ರಣ ಅಧ್ಯಯನಕ್ಕೆ ಉನ್ನತ ಮಟ್ಟದ ತಂಡ ಸೋಮವಾರ ಭೇಟಿ ನೀಡಿದೆ. ಬಾಗೆ ಗ್ರಾಮದಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು, ಬಾದಿತ ಪ್ರದೇಶದ ಜನರು, ವಿವಿಧ ಸಂಘ ಸಂಸ್ಥೆಗಳ ಮುಖಂಡರು ಸಭೆಯಲ್ಲಿ ಭಾಗಿಯಾಗಿದ್ದರು.

ಈ ವೇಳೆ ಸಭೆಯಲ್ಲಿ ಕಾಡಾನೆಗಳನ್ನು ಸಂಪೂರ್ಣ ಸ್ಥಳಾಂತರಿಸುವಂತೆ ಒತ್ತಾಯ ಕೇಳಿ ಬಂತು. ಪರಿಸರವಾದಿಗಳ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ ಸ್ಥಳೀಯರು, ನೀವು ಆನೆ ಹಿಡಿದು ರೇಡಿಯೋ ಕಾಲರ್ ಹಾಕುವುದು ಬೇಡ, ಸುಮ್ಮನೆ ಸರ್ಕಾರಕ್ಕೆ ನಷ್ಟ, ದಂಡ ಎಂದು ಕಿಡಿಕಾರಿದರು. ಪರಿಸರವಾದಿಗಳ ಮೇಲೆ ಗರಂ ಆಗಿ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ | Electricution | ವಿದ್ಯುತ್ ಸ್ಪರ್ಶದಿಂದ 75 ಆನೆಗಳ ಸಾವು: ದುರಂತ ತಪ್ಪಿಸಲು ಮಾರ್ಗಸೂಚಿ, ಸರ್ಕಾರಕ್ಕೆ ಹೈಕೋರ್ಟ್‌ ಸೂಚನೆ

Exit mobile version