Site icon Vistara News

Elephant Attack | ಸಕಲೇಶಪುರದಲ್ಲಿ ಒಂಟಿ ಸಲಗ ದಾಳಿ; ಅರಣ್ಯಾಧಿಕಾರಿಗಳ ವಿರುದ್ಧ ಸ್ಥಳೀಯರ ಆಕ್ರೋಶ

railway track elephant ಸಕಲೇಶಪುರದಲ್ಲಿ ಆನೆ ದಾಳಿ

ಹಾಸನ: ರಾಜ್ಯದ ವಿವಿಧ ಕಡೆ ಗಜಪಡೆಗಳ ಹಾವಳಿ (Elephant Attack) ಮುಂದುವರಿದಿದೆ. ಈ ನಡುವೆ ಸಕಲೇಶಪುರ ತಾಲೂಕಿನ, ಹಲಸುಲಿಗೆ ಗ್ರಾಮದಲ್ಲಿ ಒಂಟಿ ಸಲಗವೊಂದರ ಗಲಾಟೆ ಆರಂಭವಾಗಿದ್ದು, ಸುತ್ತಮುತ್ತಲ ಗ್ರಾಮಸ್ಥರನ್ನು ಭೀತಿಗೊಳಿಸಿದೆ.

ಹಲಸುಲಿಗೆ ಗ್ರಾಮದಲ್ಲಿ ಬರುವ ರೈಲ್ವೆ ಹಳಿಯೊಂದನ್ನು ಒಂಟಿ ಸಲಗವು ದಾಟಿ ಬಂದಿದೆ. ರಸ್ತೆಯಲ್ಲಿ ನಡೆದು ಬಂದು ರೈಲ್ವೆ ಹಳಿ ದಾಟಿ ಕಾಫಿ ತೋಟದೊಳಗೆ ಪ್ರವೇಶಿಸಿದೆ. ಮತ್ತೊಂದೆಡೆ ಅಡ್ಡ ಬಂದ ಜಾನುವಾರುಗಳನ್ನು ಅಟ್ಟಾಡಿಸಿದೆ. ಆನೆಯೊಂದು ಬಂದಿದೆ ಎಂದು ತಿಳಿದುಬರುತ್ತಿದ್ದಂತೆ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ದಿಕ್ಕಾಪಾಲಾಗಿ ಓಡಿದ್ದಾರೆ.

ಸಕಲೇಶಪುರ ತಾಲೂಕಿನ, ಬಾಳ್ಳುಪೇಟೆ ಹೋಬಳಿ ನಿಡನೂರು ಗ್ರಾಮದ ಕಾಫಿ ತೋಟದಲ್ಲಿ ಹತ್ತಾರು ಪುರುಷ ಹಾಗೂ ಮಹಿಳಾ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಹೆದ್ದಾರಿ ದಾಟಿದ ಆನೆಯು ಕಾಫಿ ತೋಟದೊಳಗೆ ಪ್ರವೇಶ ಮಾಡಿದೆ. ಇದನ್ನು ನೋಡುತ್ತಿದ್ದಂತೆ ಕಾರ್ಮಿಕರು ತಮ್ಮ ಕೆಲಸವನ್ನು ಅರ್ಧಕ್ಕೇ ಬಿಟ್ಟು ಅಲ್ಲಿಂದ ಓಡಿದ್ದಾರೆ.

ಈ ವೇಳೆ ಸಾರ್ವಜನಿಕರೂ ಸೇರಿದಂತೆ ಕಾರ್ಮಿಕರು ಆನೆಯನ್ನು ಓಡಿಸುವ ಸಂಬಂಧ ಕಿರುಚಾಡಿದ್ದಾರೆ. ಆಗ ಅಲ್ಲೇ ಸುತ್ತಮುತ್ತಲು ಇದ್ದ ಜಾನುವಾರುಗಳ ಕಡೆಗೆ ಒಂಟಿ ಸಲಗವು ನುಗ್ಗಿದೆ. ಸೋಲಾರ್ ತಂತಿ ಬೇಲಿ ಹಾಕಿದ್ದ ಕಾರಣ ಎಲ್ಲೂ ಹೋಗಲಾಗದೆ ಗೀಳಿಡುತ್ತಾ ಜಾನುವಾರುಗಳನ್ನು ಅಟ್ಟಾಡಿಸಿದೆ. ಇದರಿಂದ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಷ್ಟೇ ಬಾರಿ ಮನವಿ ಮಾಡಿದರೂ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ | Karnataka Election | ಗುಜರಾತ್‌ನಂತೆ ಕರ್ನಾಟಕದಲ್ಲಿ ಹಿರಿಯರಿಗೆ ಕೊಕ್‌ ಕೊಡುವ ಸುದ್ದಿ ಇದೆ: ಬೈರತಿ ಬಸವರಾಜ್

Exit mobile version