ಹಾಸನ: ಮಲೆನಾಡು ಭಾಗದಲ್ಲಿ ಕಾಡಾನೆ ಹಾವಳಿ (Elephant attack) ಮುಂದುವರಿದಿದೆ. ಸಕಲೇಶಪುರ ತಾಲೂಕಿನ ಮೂಗಲಿ ಗ್ರಾಮದಲ್ಲಿ ಸುಮಾರು 20ಕ್ಕೂ ಹೆಚ್ಚು ಕಾಡಾನೆಗಳು ಪ್ರತ್ಯಕ್ಷವಾಗಿದ್ದು, ತೋಟದ ಗೇಟ್ ಮುರಿದು ಲಗ್ಗೆ ಇಟ್ಟಿವೆ. ಗ್ರಾಮದ ಧೀರಾಜ್ ಎಂಬುವವರಿಗೆ ಸೇರಿದ ಕಾಫಿ ತೋಟಕ್ಕೆ ನುಗ್ಗಿ ಕಾಡಾನೆಗಳು ದಾಂಧಲೆ ನಡೆಸಿವೆ.
ಹಗಲು ರಾತ್ರಿ ಎನ್ನದೆ ಜನರು ಆತಂಕದಲ್ಲಿ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕೂರುವಂತಾಗಿದೆ. ಮನೆಯಲ್ಲಿ ಇರಲು ಆಗದೆ ಹೊರಗೆ ಓಡಾಡಲು ಆಗದಂತಹ ಪರಿಸ್ಥಿತಿ ನಿರ್ಮಾಣ ಆಗಿದೆ. ಅರಣ್ಯ ಇಲಾಖೆ ವಿರುದ್ಧ ತೋಟದ ಮಾಲೀಕ ಧೀರಾಜ್ ಆಕ್ರೋಶ ವ್ಯಕ್ತಪಡಿಸಿದ್ದು, ಕಾಡಾನೆಗಳನ್ನು ಕಾಡಿಗೆ ಓಡಿಸುವಂತೆ ಆಗ್ರಹಿಸಿದ್ದಾರೆ.
ಇತ್ತ ವಿರಾಜಪೇಟೆ ತಾಲೂಕಿನ ಸಿದ್ದಾಪುರದಲ್ಲೂ ಕಾಡಾನೆ ಕಾಣಿಸಿಕೊಂಡಿದೆ. ರಾತ್ರಿಯಾಗುತ್ತಿದ್ದಂತೆ ಸಿದ್ದಾಪುರ ಪಟ್ಟಣದಲ್ಲಿ ಕಾಡಾನೆ ಪ್ರತ್ಯಕ್ಷವಾಗಿದ್ದು, ತಡರಾತ್ರಿ ಆನೆ ಕಂಡು ಗ್ರಾಮಸ್ಥರು ವಿಚಲಿತರಾಗಿದ್ದಾರೆ. ಬುಧವಾರ ರಾತ್ರಿ 10:30ಕ್ಕೆ ಸಿದ್ದಾಪುರದಲ್ಲಿ ಕಾಡಾನೆ ಕಾಣಿಸಿಕೊಂಡಿದ್ದು, ಜನರ ಓಡಾಡ ಇಲ್ಲದ ಕಾರಣಕ್ಕೆ ಯಾವುದೇ ಅನಾಹುತವಾಗಿಲ್ಲ.
ಇದನ್ನೂ ಓದಿ: Weather Report: ರಾಜ್ಯವನ್ನು ಇನ್ನೆರಡು ದಿನ ಕಾಡಲಿದೆ ಮೋಚಾ; ಎಲ್ಲೆಲ್ಲಿ ಇರಲಿದೆ ಮಳೆ ಪ್ರಭಾವ?
ಮೈಸೂರು ಮುಖ್ಯ ರಸ್ತೆಯಿಂದ ಕರಡಿಗೋಡು ರಸ್ತೆ ಕಡೆಗೆ ಪುಂಡಾನೆಯೊಂದು ಸಾಗಿದ್ದು, ಪಟ್ಟಣದ ಮಧ್ಯೆ ಆನೆ ಓಡಾಡಿದ ದೃಶ್ಯವನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ,