Site icon Vistara News

Elephant Attack | ನಾಡಿನಲ್ಲಿ ಒಂಟಿ ಸಲಗ ಬಿಂದಾಸ್‌ ನಡಿಗೆ, ಕಾಡಂಚಿನ ಕೆರೆಯಲ್ಲಿ ಗುಂಪಾಗಿ ಈಜಾಡೋ ಗಜಪಡೆ!

Elephant Attack

ಹಾಸನ: ರಾಜ್ಯದ ವಿವಿಧ ಕಡೆ ಗಜಪಡೆಗಳ ಹಾವಳಿ (Elephant Attack) ಮುಂದುವರಿದಿದೆ. ಸಕಲೇಶಪುರ ತಾಲೂಕಿನ ಕೆಸಗುಲಿ, ಕಲ್ಲಹಳ್ಳಿ, ಮತಿಗಳಲೆ ಗ್ರಾಮಗಳಲ್ಲಿ ಹಿಂಡು ಹಿಂಡಾಗಿ ಕಾಡಾನೆಗಳು ಆಗಮಿಸುತ್ತಿದ್ದು, ಸುತ್ತಮುತ್ತಲ ಗ್ರಾಮಸ್ಥರನ್ನು ಆತಂಕಕ್ಕೆ ತಳ್ಳಿದೆ.

ಮಲೆನಾಡು ಭಾಗದಲ್ಲಿ ಕಾಡಾನೆಗಳ ಉಪಟಳ ತೀವ್ರಗೊಂಡಿದ್ದು, ಜನರಿಗೆ ತೊಂದರೆಯಾಗದಂತೆ ಟಾಸ್ಕ್ ಫೋರ್ಸ್ ಟೀಂ ಹೈಅಲರ್ಟ್ ಆಗಿದ್ದಾರೆ. ಕ್ಷಣ ಕ್ಷಣಕ್ಕೂ ಗ್ರಾಮಸ್ಥರಿಗೆ ಎಚ್ಚರಿಕೆಯಿಂದ ಇರುವಂತೆ ಸಿಬ್ಬಂದಿ ಮಾಹಿತಿ ನೀಡುತ್ತಿದ್ದಾರೆ. ಜನನಿಬಿಡ ಪ್ರದೇಶದಲ್ಲಿ ಒಂಟಿಸಲಗ ಸಂಚರಿಸುತ್ತಿದ್ದು, ಜನರು ಬೆಳಗ್ಗೆ, ರಾತ್ರಿ ಸಮಯದಲ್ಲಿ ಓಡಾಡುವಾಗ ಎಚ್ಚರವಾಗಿರಿ ಎಂದು ಮೈಕ್‌ ಮೂಲಕ ಅನೌನ್ಸ್‌ ಮಾಡುತ್ತಿದ್ದಾರೆ.

ಮತ್ತೊಂದೆಡೆ ಸಕಲೇಶಪುರ ತಾಲೂಕಿನ ಕೆಸಗುಲಿ, ಕಲ್ಲಹಳ್ಳಿ, ಮತಿಗಳಲೆ ಬಳಿ ಕಾಡಾನೆಗಳ ಹಿಂಡು ಪ್ರತ್ಯಕ್ಷವಾಗಿದೆ. ಕುಂಬಾರಹಳ್ಳಿ ಗ್ರಾಮದಲ್ಲಿ ರಾತ್ರಿಯಿಡಿ ಬೆಂಕಿ ಹಾಕಿ ಕಾಡಾನೆ ಚಲನವಲನ ಗಮನಿಸಿ ಟಾಸ್ಕ್ ಫೋರ್ಸ್‌ ‌ಹಾಗೂ ಅರಣ್ಯ ಇಲಾಖೆ ಆರ್‌ಆರ್‌ಟಿ ಸಿಬ್ಬಂದಿ ಮಾಹಿತಿ ನೀಡುತ್ತಿದ್ದಾರೆ.

ಸಕಲೇಶಪುರ ತಾಲೂಕಿನ ಉದೇವಾರ ಗ್ರಾಮದ ದೇವಿರಮ್ಮ ಕೆರೆಯಲ್ಲಿ ನಾಲ್ಕು ಆನೆಗಳು ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಕಳೆದಿದೆ. ಕಾಡಾನೆಗಳು ನೀರಿನಲ್ಲಿ ಈಜಾಡುವ ದೃಶ್ಯ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದೆ. ಕೆರೆಯಲ್ಲಿ ಈಜಾಡಿದ ಬಳಿಕ ನಾಲ್ಕು ಕಾಡಾನೆಗಳು ಕಾಫಿ ತೋಟದೊಳಗೆ ನುಗ್ಗಿವೆ. ಕಾಡಾನೆಗಳ ಹಾವಳಿಯಿಂದ ಮಲೆನಾಡು ಭಾಗದ ಜನರು ಕಂಗಾಲಾಗಿದ್ದಾರೆ. ಕಾಫಿ ತೋಟಗಳಿಗೆ ತೆರಳಲು ಮಾಲೀಕರು ಹಿಂದೇಟು ಹಾಕುತ್ತಿದ್ದು, ಕೂಲಿ ಕಾರ್ಮಿಕರು ಜೀವ ಭಯದಿಂದಾಗಿ ಕಾಫಿ ತೋಟದ ಕೆಲಸಕ್ಕೆ ಗೈರಾಗುತ್ತಿದ್ದಾರೆ.

ಇದನ್ನೂ ಓದಿ | Leopard attack | ಕಾಮೇನಹಳ್ಳಿಯಲ್ಲಿ ನಡುಕ ಹುಟ್ಟಿಸಿದ್ದ ಚಿರತೆ ಕೊನೆಗೂ ಬೋನಿಗೆ ಬಿತ್ತು, ಜನ ನಿಟ್ಟುಸಿರು

Exit mobile version