Site icon Vistara News

Elephant attack | ನಿಲ್ಲದ ಕಾಡಾನೆ ಹಾವಳಿ; ಆಹಾರ ಅರಸಿ ನಾಡಿಗೆ ಬರುತ್ತಿರುವ ಗಜಪಡೆ

ಹಾಸನ: ಇಲ್ಲಿನ ಸಕಲೇಶಪುರ ತಾಲೂಕಿನ ಗುಮ್ಮನಹಳ್ಳಿ ಗ್ರಾಮದಲ್ಲಿ ಒಂಟಿ ಸಲಗ (Elephant attack ) ಪ್ರತ್ಯಕ್ಷವಾಗಿದ್ದು, ಹಗಲು ರಾತ್ರಿ ಎನ್ನದೆ ಜನರು ಆತಂಕದಲ್ಲಿ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕೂರುವಂತಾಗಿದೆ.

ಮನೆಯಲ್ಲಿ ಇರಲು ಆಗದೆ ಹೊರಗೆ ಓಡಾಡಲು ಆಗದಂತಹ ಪರಿಸ್ಥಿತಿ ನಿರ್ಮಾಣ ಆಗಿದೆ.

ರಾತ್ರಿ ವೇಳೆ ಗ್ರಾಮಕ್ಕೆ ಎಂಟ್ರಿ ಕೊಡುತ್ತಿರುವ ಕಾಡಾನೆ

ಈಗಾಗಲೇ ಅರಣ್ಯ ಇಲಾಖೆಯ ಟಾಸ್ಕ್ ಫೋರ್ಸ್ ‌ಸಿಬ್ಬಂದಿ ಕಾಡಾನೆಯನ್ನು ಹಿಂಬಾಲಿಸಿ ಗ್ರಾಮಸ್ಥರು ಮನೆಯಿಂದ ಹೊರಬಾರದಂತೆ ಎಚ್ಚರಿಕೆ ನೀಡಿದ್ದಾರೆ. ಹೊಳಲು ಗ್ರಾಮದ ಸಮೀಪ ಕಾಫಿ ತೋಟದೊಳಗೆ ಕಾಡಾನೆಗಳ ಹಿಂಡು ಬೀಡುಬಿಟ್ಟಿವೆ. ರಾತ್ರಿ ವೇಳೆ ಮನೆಯಿಂದ ಹೊರಬಾರದಂತೆ ಹಾಗೂ ಹಗಲು ವೇಳೆ ಎಚ್ಚರಿಕೆಯಿಂದ ಓಡಾಡುವಂತೆ ಸೂಚನೆ ನೀಡಿದ್ದಾರೆ.

ಇನ್ನೊಂದೆಡೆ ಆಹಾರ ಅರಸಿ ದೊಡ್ಡದೀಣೆ ಗ್ರಾಮಕ್ಕೆ ಒಂಟಿ ಸಲಗವು ಬಂದಿದ್ದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕಾಡಾನೆ ಕಂಡು ಗ್ರಾಮಸ್ಥರು ಭಯಭೀತರಾಗಿದ್ದಾರೆ.

ಇದನ್ನೂ ಓದಿ | Elephant attack | ಅಡ್ಡ ರಸ್ತೆಯಲ್ಲಿ ಬಂದರೆ ಎದುರೇ ನಿಂತಿತ್ತು ಒಂಟಿ ಸಲಗ, ಸ್ಕೂಟರ್‌ ಬಿಟ್ಟು ಓಡಿದ ಯುವಕ!

Exit mobile version