Site icon Vistara News

Elephant Attack: ಗ್ರಾಮದ ತುಂಬೆಲ್ಲಾ ಒಂಟಿ ಸಲಗ ಬಿಂದಾಸ್‌ ರೌಂಡ್ಸ್; ಹೊರಗೆ ಸುಳಿಯದ ಗ್ರಾಮಸ್ಥರು

Wild elephant again spotted in Chikmagalur

Wild elephant again spotted in Chikmagalur

ಚಿಕ್ಕಮಗಳೂರು: ರಾಜ್ಯದ ವಿವಿಧ ಕಡೆ ಆನೆಗಳ ಹಾವಳಿ (Elephant Attack) ಮುಂದುವರಿದಿದೆ. ಕಳಸ ತಾಲೂಕಿನ ಹೊರನಾಡಿನ ಮುಂಡುಗನಮನೆ ಗ್ರಾಮದಲ್ಲಿ ಒಂಟಿ ಸಲಗವೊಂದು ಕಳೆದ ಎರಡು ದಿನಗಳಿಂದ ಬಿಂದಾಸ್‌ ಆಗಿ ಓಡಾಗುತ್ತಿದೆ. ಬುಧವಾರ ಹಲವು ಕಡೆ ಸುತ್ತಾಡಿದ್ದ ಅದು ಗುರುವಾರ ಬೆಳಗ್ಗೆ ಕಾಡಿನಿಂದ ನಾಡಿನತ್ತ ನಡೆದುಕೊಂಡು ಬರುತ್ತಿರುವುದನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.

ಒಂಟಿ ಸಲಗನ ಓಡಾಟದಿಂದ ಭಯಗೊಂಡ ಜನರು ಮನೆಯೊಳಗೇ ಬಂದಿ ಆಗಿದ್ದಾರೆ. ಬುಧವಾರವೂ ಮರೆಸೀಕೆರೆ ಗ್ರಾಮದಲ್ಲಿ ಒಂಟಿ ಸಲಗ ಎಲ್ಲೆಂದರಲ್ಲಿ ಓಡಾಡಿ ಭೀತಿ ಹುಟ್ಟಿಸಿತ್ತು. ತೋಟದ ಕಾಫಿ ಕಣದಲ್ಲಿ ಕಾಡಾನೆ ಓಡಾಟ ನಡೆಸಿದ ದೃಶ್ಯವೆಲ್ಲ ಸಿಸಿ ಟಿವಿಯಲ್ಲಿ ಸೆರೆಯಾಗಿತ್ತು. ಅದೇ ಒಂಟಿ ಸಲಗ ಮುಂದುಗನಮನೆ ಗ್ರಾಮಕ್ಕೆ ಬಂದಿರಬಹುದೆಂದು ಅಂದಾಜಿಸಲಾಗಿದೆ.

ಆಲ್ದೂರು ಸಮೀಪದ ಗಿರೀಶ್ ಎಂಬುವವರ ಕಾಫಿ ತೋಟದ ಕಣದಲ್ಲಿ ಆಹಾರಕ್ಕಾಗಿ ಗೋಡೌನ್ ಸುತ್ತ ಕಾಡಾನೆ ಓಡಾಡಿತ್ತು. ಜತೆಗೆ ಕೂಗಳತೆ ದೂರದಲ್ಲಿದ್ದ ಮನೆಯ ಮುಂಭಾಗದಲ್ಲಿದ್ದ ತುಳಸಿ ಕಟ್ಟೆಯನ್ನು ಹೊಡೆದು ಹಾಕಿತ್ತು. ಅಷ್ಟು ಮಾತ್ರವಲ್ಲದೆ ನಡೆದುಕೊಂಡು ಹೋಗುತ್ತಿದ್ದ ಕೂಲಿ ಕಾರ್ಮಿಕ ಮಹಿಳೆಯ ಮೇಲೆ ದಾಳಿ ಮಾಡಲು ಹೋಗಿತ್ತು. ಅದೃಷ್ಟವಶಾತ್‌ ಕೂದಲೆಳೆ ಅಂತರದಲ್ಲಿ ಪಾರಾಗಿದ್ದರು. ಸಣ್ಣ ಪುಟ್ಟ ಗಾಯಗೊಂಡಿದ್ದ ಮಹಿಳೆಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಒಂಟಿ ಸಲಗದ ದಾಂಧಲೆ ಸಿಸಿ ಕ್ಯಾಮೆರಾದಲ್ಲಿ ಸೆರೆ

ಇದನ್ನೂ ಓದಿ: Sukesh Chandrasekhar: ವಂಚಕ ಸುಕೇಶ್ ಚಂದ್ರಶೇಖರ್‌ ಜೈಲಿನ ಕೋಣೆ ಮೇಲೆ ದಾಳಿ: ಐಷಾರಾಮಿ ವಸ್ತುಗಳು ಪತ್ತೆ, ಸಿಸಿಟಿವಿ ದೃಶ್ಯಾವಳಿ ವೈರಲ್

ಇತ್ತ ನಿತ್ಯ ಕಾಡಾನೆ ಹಾವಳಿಯಿಂದ ಕಂಗೆಟ್ಟಿರುವ ಜನರು ಕಾಡಾನೆಯನ್ನು ಹಿಡಿದು ಕಾಡಿಗಟ್ಟಬೇಕೆಂದು ಆಕ್ರೋಶ ಹೊರಹಾಕಿದ್ದಾರೆ. ಅರಣ್ಯ ಅಧಿಕಾರಿಗಳ ಆಮೆ ಗತಿಗೆ ಗ್ರಾಮಸ್ಥರು ಅಸಮಾಧಾನ ಹೊರಹಾಕಿದ್ದಾರೆ.

ಚಿಕ್ಕಮಗಳೂರಿನ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version