ಹಾಸನ: ಜಿಲ್ಲೆಯ ಸಕಲೇಶಪುರ ತಾಲೂಕಿನ ಕಿರಿಹಳ್ಳಿ ಗ್ರಾಮದ ಕಾಫಿ ತೋಟದೊಳಗೆ ಕಾಡಾನೆಯೊಂದು ಮರಿ (Elephant Calf) ಹಾಕಿದೆ. ಈ ವೇಳೆ ಗಜಪಡೆಗಳು ಗೀಳಿಟ್ಟಿದ್ದು, ನಾಗರಿಕರಿಗೆ ಈ ವಿಷಯ ತಿಳಿದಿದೆ.
ಮಾಗಡಿ ಎಸ್ಟೇಟ್‌ನ ಕಾಫಿ ತೋಟಕ್ಕೆ ಬಂದಿರುವ ಕಾಡಾನೆಗಳ ಹಿಂಡು ಮರಿ ಆನೆ ಸುತ್ತ ರಕ್ಷಣೆಗಾಗಿ ನಿಂತಿವೆ. ವಿಷಯ ತಿಳಿದ ಅರಣ್ಯ ಅಧಿಕಾರಿಗಳು ತೋಟದ ಬಳಿಗೆ ಬಂದು ವೀಕ್ಷಣೆ ಮಾಡಿದ್ದು, ಕಾಫಿ ತೋಟದೊಳಗೆ ಯಾರೂ ಹೋಗದಂತೆ ಸೂಚನೆ ನೀಡಿದ್ದಾರೆ.
ಆನೆಯು ಮರಿ ಹಾಕಿದ ಸಂದರ್ಭದಲ್ಲಿ ಸೂಕ್ಷ್ಮವಾಗಿ ವರ್ತಿಸುತ್ತವೆ. ಅವುಗಳು ರಕ್ಷಣೆಗಾಗಿ ಗುಂಪಾಗಿ ಹೋಗುತ್ತವೆ. ಈ ವೇಳೆ ಯಾರಾದರೂ ಅಡ್ಡಬಂದರೆ ದಾಳಿ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ ಕಾಫಿ ತೋಟದೊಳಗೆ ಯಾರೂ ಸಹ ಹೋಗಬಾರದು ಎಂದು ಅರಣ್ಯ ಇಲಾಖೆ ಸಿಬ್ಬಂದಿ ಸೂಚನೆಯನ್ನು ನೀಡಿದ್ದಾರೆ.
ಆದರೆ, ಕಳೆದ ಹಲವಾರು ತಿಂಗಳುಗಳಿಂದ ತೋಟ ಸೇರಿದಂತೆ ತಾಲೂಕಿನ ವಿವಿಧ ಕಡೆ ಕಾಡಾನೆಗಳ ದಾಳಿಯಿಂದ ಬೇಸತ್ತಿರುವ ರೈತರು ಹಾಗೂ ಕಾಫಿ ಬೆಳೆಗಾರರು ಇದಕ್ಕೆ ಶಾಶ್ವತ ಪರಿಹಾರವನ್ನು ಕಂಡುಕೊಡುವಂತೆ ಮನವಿ ಮಾಡುತ್ತಿದ್ದಾರೆ. ಅಲ್ಲದೆ, ಹಾಸನ ಜಿಲ್ಲೆಯಲ್ಲಿ ಕಾಡಾನೆ ಸಂತತಿ ಹೆಚ್ಚುತ್ತಿರುವುದಕ್ಕೆ ತೀವ್ರ ಕಳವಳವನ್ನು ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ | Ahimsa Chetan : ಬಿಜೆಪಿಯವರದ್ದು ಹಿಂದು ಅಜೆಂಡಾ; ಧರ್ಮದ ಪರ ಇದ್ದೇನೆನ್ನುವುದೇ ಭಯೋತ್ಪಾದನೆ: ಅಹಿಂಸಾ ಚೇತನ್