Site icon Vistara News

Elephant death: ವಿದ್ಯುತ್ ತಂತಿ ತಗುಲಿ ಮೂರು ಕಾಡಾನೆಗಳ ದಾರುಣ ಸಾವು; ಕಣ್ಣಂಚಲ್ಲಿ ನೀರು ತರಿಸಿದ ತಬ್ಬಲಿ ಮರಿಗಳ ಗೋಳಾಟ

Three wild elephants die of electrocution

Three wild elephants die of electrocution

ತಮಿಳುನಾಡು/ಚಿಕ್ಕಮಗಳೂರು: ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದಿದ್ದ ಮೂರು ಕಾಡಾನೆಗಳು ವಿದ್ಯುತ್ ತಂತಿ ತಗುಲಿ ದಾರುಣವಾಗಿ (Elephant death) ಮೃತಪಟ್ಟ ಘಟನೆ ಧರ್ಮಪುರಿಯ ಮಾರಂಡಳ್ಳಿ ಸಮೀಪ ನಡೆದಿದೆ.

ಕಾಡು ಪ್ರಾಣಿಗಳು ಬರದಂತೆ ಕೃಷಿ ತೋಟದ ಸುತ್ತಲೂ ವಿದ್ಯುತ್ ತಂತಿ ಹಾಕಲಾಗಿತ್ತು. ಕಳೆದ ಕೆಲ ದಿನಗಳಿಂದ ಕಾಡಂಚಿನ ಗ್ರಾಮದಲ್ಲಿ ಕಾಡಾನೆಗಳು ಬೀಡು ಬಿಟ್ಟಿದ್ದವು. ಐದು ಕಾಡಾನೆಗಳ ಗುಂಪು ಆಹಾರ ಅರಸಿಕೊಂಡು ಸಂಚಾರ ಮಾಡುತ್ತಿದ್ದವು. ಈ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ಮೂರು ಕಾಡಾನೆಗಳು ತೋಟದಲ್ಲಿ ಮೃತಪಟ್ಟಿವೆ.

ಅಕ್ರಮವಾಗಿ ವಿದ್ಯುತ್ ತಂತಿ ಹಾಕಿದ್ದ ಕಾರಣದಿಂದಾಗಿ ಭೀಕಕೊಟ್ಟೈ ಗ್ರಾಮದ ರೈತ ಮುರುಗೇಶ್ (55) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಇತ್ತ ಗುಂಪಿನಲ್ಲಿದ್ದ ಮತ್ತೆರಡು ಆನೆ ಮರಿಗಳ ಆಕ್ರಂದನ ಎಂತಹವರಿಗೂ ಕರಳು ಹಿಂಡುವಂತೆ ಮಾಡಿತ್ತು. ಕಾಡಾನೆಗಳ ಮೃತದೇಹದ ಬಳಿಯೇ ಸುತ್ತಾಡುತ್ತಿರುವುದು ಕಂಡು ಬಂತು.

ತಬ್ಬಲಿಯಾದ ಎರಡು ಮರಿಯಾನೆಗಳು ಅತ್ತಿಂದಿತ್ತ ಓಡಾಡುತ್ತಾ ಉಸಿರುಚೆಲ್ಲಿ ಬಿದ್ದಿದ್ದ ತಾಯಿಯಾನೆ ಮುಂದೆ ಗೋಳಾಡುತ್ತಿದ್ದವು. ವಿದ್ಯುತ್ ಶಾಕ್‌ನಿಂದ ಕೆಸರುಗದ್ದೆಯಲ್ಲಿ ಬಿದ್ದು ಒದ್ದಾಡಿ ಪ್ರಾಣ ಬಿಟ್ಟಿರುವ ಆನೆಗಳನ್ನು ಮರಿಯಾನೆ ಎಬ್ಬಿಸಲು ಪ್ರಯತ್ನಿಸುವ ದೃಶ್ಯವಂತೂ ಎಂಥವರಿಗೂ ಕಣ್ಣೀರು ತರಿಸುವಂತಿತ್ತು.

ಇದನ್ನೂ ಓದಿ: ಶಿವಮೊಗ್ಗದ ಬ್ರಹ್ಮ-ವಿಷ್ಣು-ಮಹೇಶ್ವರ ದೇವಸ್ಥಾನದ ರಥಕ್ಕೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ ಕಿಡಿಗೇಡಿಗಳು; ತೀವ್ರ ಖಂಡನೆ

ಭದ್ರ ಅಭಯಾರಣ್ಯದ ಅಂಚಿನ ಗ್ರಾಮಗಳಲ್ಲಿ ಕಾಡಾನೆ ಭೀತಿ

ಚಿಕ್ಕಮಗಳೂರಿನ ಭದ್ರ ಅಭಯಾರಣ್ಯದ ಅಂಚಿನ ಗ್ರಾಮಗಳಲ್ಲಿ ಕಾಡಾನೆ ಭೀತಿ ಹೆಚ್ಚಾಗಿದೆ. ಅಭಯಾರಣ್ಯದಿಂದ ವಲಸೆ ಬಂದಿರುವ ಕಾಡಾನೆಗಳ ಹಿಂಡು ಕಂಡು ಗ್ರಾಮಸ್ಥರು ಆತಂಕದಲ್ಲಿದ್ದಾರೆ. ಲಿಂಗದಹಳ್ಳಿಯ ಮಸ್ಕಲ್ ಮರಡಿಯ ಕಾಫಿ ತೋಟಗಳಲ್ಲಿ ಕಾಡಾನೆಗಳು ಬೀಡು ಬಿಟ್ಟಿವೆ. ಕಾಫಿ, ಕಾಳು ಮೆಣಸು, ಏಲಕ್ಕಿ ಬೆಳೆಗಳ ಹಾನಿ ಮಾಡಿದ್ದು, ಅಭಯಾರಣ್ಯದಿಂದ ಹೊರಬರದಂತೆ ಕ್ರಮವಹಿಸಲು ಸ್ಥಳೀಯರು ಅರಣ್ಯಾಧಿಕಾರಿಗಳಿಗೆ ಆಗ್ರಹಿಸಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version