ಹಾಸನ: ಆನೆಗಳು ಕಾಡಿನ ಬದಿಯ ತೋಟಗಳಿಗೆ ಲಗ್ಗೆ ಇಡುವುದು ಈಗ ಸಾಮಾನ್ಯವಾಗಿದೆ. ಇಲ್ಲಿನ ಕಾಫಿ ತೋಟವೊಂದಕ್ಕೆ ಒಂಟಿ ಸಲಗ ಬಂದಿರುವುದು ಮೊಬೈಲ್‌ನಲ್ಲಿ ತುಂಬ ರೋಚಕವಾಗಿ ದಾಖಲಾಗಿದೆ.
ಸಕಲೇಶಪುರ ತಾಲೂಕಿನ ಹಾಲೇ ಬೇಲೂರು ಗ್ರಾಮದ ಕಾಫಿ ತೋಟದಲ್ಲಿ ಕಾಡಾನೆ ಸಂಚರಿಸುತ್ತಿತ್ತು. ಸ್ಥಳಿಯರು ಕಾಡಾನೆ ಓಡಾಟದ ವಿಡಿಯೊ ಮಾಡಲು ಕಾಫಿ ತೋಟದಲ್ಲಿ ಮೊಬೈಲ್ ಇಟ್ಟಿದ್ದರು. ಅದರಲ್ಲಿ ಆನೆಯ ಆಗಮನದ ದೃಶ್ಯ ಅದ್ಭುತವಾಗಿ ಸೆರೆಯಾಗಿದೆ.
ಮೊಬೈಲ್‌ನ್ನು ದಾರಿಯಲ್ಲಿ ದೂರದ ದೃಶ್ಯವೂ ಸೆರೆಯಾಗುವಂತೆ ಸ್ವಲ್ಪ ಓರೆಯಾಗಿ ಇಡಲಾಗಿತ್ತು. ಇದರಲ್ಲಿ ಆನೆ ದೂರದಿಂದಲೇ ಗಂಭೀರ ಹೆಜ್ಜೆಗಳನ್ನು ಇಟ್ಟುಕೊಂಡು ಬರುವುದು, ಹತ್ತಿರ ಬಂದಾಗ ಕಾಣುವ ದೈತ್ಯ ದೇಹ ಅತ್ಯಂತ ಸೂಕ್ಷ್ಮವಾಗಿ ಸೆರೆಯಾಗಿದೆ. ಅದಕ್ಕಿಂತಲೂ ಇಂಟ್ರೆಸ್ಟಿಂಗ್ ಅಂದರೆ ಆನೆ ಆ ಮೊಬೈಲ್ ಇಟ್ಟ ಜಾಗದ ವರೆಗಷ್ಟೇ ಬಂದು ಹಿಂದಿರುಗುತ್ತದೆ ಮತ್ತು ಮೊಬೈಲ್‌ನ ಮೇಲೆ ಸೊಂಡಿಲಿನಿಂದ ಮುತ್ತಿಟ್ಟು ಮರಳುತ್ತದೆ! ಬಹುಶಃ ಅದು ತೋಟದ ಒಂದು ಕೊನೆಯಾಗಿರುವ ಸಾಧ್ಯತೆ ಇದೆ. ಅದಕ್ಕೆ ಕಟ್ಟಲಾದ ಗೋಡೆಗೆ ಒರಗಿಸಿ ಮೊಬೈಲನ್ನು ಇಟ್ಟಿರುವ ಸಾಧ್ಯತೆ ಕಂಡುಬರುತ್ತಿದೆ. ನಿಜವೆಂದರೆ, ಒಟ್ಟಾರೆ ಸೆರೆಯಾಗಿರುವ ದೃಶ್ಯ ಒಂದು ಸಿನಿಮಾದ ಚಿತ್ರೀಕರಣದ ಹಾಗೆ ಕಾಣುವುದಂತೂ ನಿಜ.
ಇದನ್ನೂ ಓದಿ | ಕಾಡಿನಿಂದ ನಡುರಸ್ತೆಗೆ ಬಂದ ಗಜರಾಜ