Site icon Vistara News

Elephant trapped | ಗುಂಡ್ಲುಪೇಟೆ ಭಾಗದಲ್ಲಿ ಉಪಟಳ ನೀಡಿ ಜನರ ನಿದ್ದೆಗೆಡಿಸುತ್ತಿದ್ದ ಕಾಡಾನೆ ಸೆರೆ

ಚಾಮರಾಜನಗರ: ಇಲ್ಲಿನ ಬಂಡೀಪುರ ಜಿ.ಎಸ್.ಬೆಟ್ಟ ವಲಯದ ಕಡೈಕೋಟೆ ಎಂಬಲ್ಲಿ ರೇಡಿಯೋ ಕಾಲರ್ ಅಳವಡಿಸಿದ್ದ ಕಾಡಾನೆಯನ್ನು ಸೆರೆ (Elephant trapped) ಹಿಡಿಯಲಾಗಿದೆ. ಗುಂಡ್ಲುಪೇಟೆಯ ಗೋಪಾಲಸ್ವಾಮಿ ಬೆಟ್ಟ ವಲಯದ ಸುತ್ತಮುತ್ತ ಉಪಟಳ ನೀಡುತ್ತಿತ್ತು.

ರೈತ ಜಮೀನುಗಳಿಗೆ ನುಗ್ಗಿ ಬೆಳೆ ಹಾನಿ ಮಾಡುತ್ತಿತ್ತು. ಇದರಿಂದಾಗಿ ಬೆಳೆ ಬೆಳೆಯಲು ರೈತನಿಗೆ ವರುಷವಾದರೆ ಆನೆಯು ನಿಮಿಷದಲ್ಲಿಯೇ ಹಾಳು ಮಾಡುತ್ತಿತ್ತು. ಇದರಿಂದಾಗಿ ಪುಂಡಾನೆಯನ್ನು ಸೆರೆ ಹಿಡಿಯುವಂತೆ ರೈತರು ಒತ್ತಾಯಿಸಿದ್ದರು.

ಹೀಗಾಗಿ ಕಾರ್ಯಾಚರಣೆಗಿಳಿದ ಅರಣ್ಯಾಧಿಕಾರಿಗಳು ಸಾಕಾನೆಗಳಾದ ಅಭಿಮನ್ಯು, ಮಹೇಂದ್ರ, ಗಣೇಶ, ಭೀಮ ಸಹಾಯದಿಂದ ಅರಿವಳಿಕೆ ಚುಚ್ಚುಮದ್ದು ನೀಡಿ ಪುಂಡಾಣೆಯನ್ನು ಸೆರೆ ಹಿಡಿಯಲಾಗಿದೆ.

ಸೆರೆ ಹಿಡಿದ ಕಾಡಾನೆಯನ್ನು ಐನೂರು ಮಾರಿಗುಡಿ ಸಾಕಾನೆಗಳ ಶಿಬಿರಕ್ಕೆ ರವಾನೆ ಮಾಡಲಾಯಿತು.

ಇದನ್ನೂ ಓದಿ | Sadashiva Commission Protest | ಸರ್ಕಾರದ ಏಕಮುಖ ಶಿಫಾರಸಿಗೆ ವಿರೋಧ; ರಾಜಧಾನಿಯಲ್ಲಿ ಅರೆಬೆತ್ತಲೆ ಪ್ರತಿಭಟನೆ

Exit mobile version