Site icon Vistara News

Emergency Alert : ಏಕಕಾಲಕ್ಕೆ ರಿಂಗ್ ಆದ ಪ್ಯಾನ್ ಇಂಡಿಯಾ ಅಲರ್ಟ್ ಕ್ಯಾಂಪೇನ್

Emergency Alert

ಬೆಂಗಳೂರು: ಪ್ಯಾನ್-ಇಂಡಿಯಾ ತುರ್ತು ಎಚ್ಚರಿಕೆ ವ್ಯವಸ್ಥೆಯನ್ನು ಪರೀಕ್ಷಿಸಲು ಗುರುವಾರ (ಅ.12) ಕ್ಯಾಂಪೇನ್‌ ನಡೆಸಲಾಯಿತು. ನೈಸರ್ಗಿಕ ವಿಕೋಪಗಳಂಥ ಪರಿಸ್ಥಿತಿಯಲ್ಲಿ ನಾಗರಿಕರಿಗೆ ಎಚ್ಚರಿಕೆ ನೀಡುವ ವ್ಯವಸ್ಥೆಯನ್ನು ಜಾರಿ ಮಾಡಲಾಗುತ್ತಿದೆ. ಅದರ ಭಾಗವಾಗಿ ಈ ಫ್ಲ್ಯಾಶ್ ಅಲರ್ಟ್‌ಗಳನ್ನು ಕಳುಹಿಸಲಾಗಿದೆ.

ಎಮರ್ಜೆನ್ಸಿ ಅಲರ್ಟ್- ಎಕ್ಸ್‌ಟ್ರೀಮ್ (Emergency Alert : Extreme!) ಎಂಬ ಸಂದೇಶವೇನಾದರೂ ನಿಮ್ಮ ಮೊಬೈಲ್‌ಗೆ ಬಂದಿದ್ದರೆ ನೀವು ಭಯ ಪಡಬೇಕಾಗಿಲ್ಲ. ಈ ಸಂದೇಶವನ್ನು ಪ್ರಾಯೋಗಿಕವಾಗಿ ಕೇಂದ್ರ ಟೆಲಿಕಾಂ ಸಚಿವಾಲಯ (telecom department) ಕಳುಹಿಸಿದೆ. ಈ ಅಲರ್ಟ್‌ ಸುಮಾರು 11:35 ಕ್ಕೆ ಫ್ಲ್ಯಾಶ್ ಸಂದೇಶ (Flash Alerts) ಮತ್ತು ಆಂಡ್ರಾಯ್ಡ್ ಮತ್ತು ಐಫೋನ್‌ಗಳಿಗೆ ತುರ್ತು ಧ್ವನಿಯೊಂದಿಗೆ ಬಂದಿದೆ. ಆಯಾ ಪ್ರಾದೇಶಿಕ ಭಾಷೆಗೆ ಅನುಗುಣವಾಗಿ ಇಂಗ್ಲೀಷ್‌ನೊಂದಿಗೆ ಎರಡು ಬಾರಿ ಈ ಸಂದೇಶವನ್ನು ಕಳುಹಿಸಲಾಗಿದೆ.

ಸಂದೇಶದಲ್ಲಿ ಏನಿತ್ತು?

ಭಾರತ ಸರ್ಕಾರದ ದೂರಸಂಪರ್ಕ ಇಲಾಖೆಯಿಂದ ಸೆಲ್ ಬ್ರಾಡ್‌ಕಾಸ್ಟಿಂಗ್ ಸಿಸ್ಟಮ್ ಮೂಲಕ ಕಳುಹಿಸಲಾದ ಮಾದರಿ ಪರೀಕ್ಷಾ ಸಂದೇಶವಾಗಿದೆ. ನಿಮ್ಮ ಕಡೆಯಿಂದ ಯಾವುದೇ ಪ್ರಕ್ರಿಯೆಯ ಅಗತ್ಯವಿಲ್ಲದ ಕಾರಣ ದಯವಿಟ್ಟು ಈ ಸಂದೇಶವನ್ನು ನಿರ್ಲಕ್ಷಿಸಿ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಜಾರಿಗೊಳಿಸುತ್ತಿರುವ ಪ್ಯಾನ್-ಇಂಡಿಯಾ ತುರ್ತು ಎಚ್ಚರಿಕೆ ವ್ಯವಸ್ಥೆಯನ್ನು ಪರೀಕ್ಷಿಸಲು ಈ ಸಂದೇಶವನ್ನು ಕಳುಹಿಸಲಾಗಿದೆ. ಇದು ಸಾರ್ವಜನಿಕ ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ತುರ್ತು ಸಂದರ್ಭಗಳಲ್ಲಿ ಸಕಾಲಿಕ ಎಚ್ಚರಿಕೆಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ ಎಂಬ ಫ್ಲ್ಯಾಶ್ ಸಂದೇಶದಲ್ಲಿ ಬಂದಿದೆ.

ಭಾರತದಲ್ಲಿನ ಸ್ಮಾರ್ಟ್‌ಫೋನ್ ಬಳಕೆದಾರರು ಜುಲೈ 20, ಆಗಸ್ಟ್ 17 ಮತ್ತು ಸೆಪ್ಟೆಂಬರ್ 15 ರಂದು ಇದೇ ರೀತಿಯ ಪರೀಕ್ಷಾ ಎಚ್ಚರಿಕೆಗಳನ್ನು ಸ್ವೀಕರಿಸಿದ್ದಾರೆ. ಜನರ ಫೋನ್‌ಗಳಲ್ಲಿ ಫ್ಲ್ಯಾಸ್ ನೋಟಿಫಿಕೇಷನ್, ಪ್ರವಾಹ ಅಥವಾ ಭೂಕುಸಿತದಂತಹ ತುರ್ತು ಸಮಯದಲ್ಲಿ ಜನರನ್ನು ಎಚ್ಚರಿಸಲು ಸರ್ಕಾರವು ವಿನ್ಯಾಸಗೊಳಿಸಿದ ವ್ಯವಸ್ಥೆಯ ಭಾಗವಾಗಿದೆ.

ಈ ರೀತಿಯ ಸಂದೇಶವನ್ನು ಪ್ರಯೋಗದ ಭಾಗವಾಗಿ ಕಳುಹಿಸಿದ್ದರಿಂದ ಭಯ ಪಡಬೇಕಾದ್ದ ಅಗತ್ಯವಿಲ್ಲ. ಜನರನ್ನು ಎಚ್ಚರಿಸುವ ವ್ಯವಸ್ಥೆಯನ್ನು ಪರೀಕ್ಷಿಸಲಾಗುತ್ತಿದ್ದು, ಅದರ ಭಾಗವಾಗಿಯೇ ಈ ಅಲರ್ಟ್ ಸಂದೇಶಗಳನ್ನು ಕಳುಹಿಸಲಾಗುತ್ತಿದೆ. ಒಂದೊಮ್ಮೆ ಈ ವ್ಯವಸ್ಥೆ ಸಂಪೂರ್ಣವಾಗಿ ಚಾಲನೆಗೊಳಗಾಗದರೆ, ತುರ್ತು ಸಂದರ್ಭಗಳಲ್ಲಿ ನಾಗರಿಕರನ್ನು ಎಚ್ಚರಿಸಲು ಸರ್ಕಾರವು ಈ ವ್ಯವಸ್ಥೆಯನ್ನು ಬಳಸಿಕೊಳ್ಳುತ್ತದೆ. ವಿಶೇಷವಾಗಿ ನೈಸರ್ಗಿಕ ವಿಕೋಪ ಸಂದರ್ಭಗಳಲ್ಲಿ ಈ ಅಲರ್ಟ್ ಸಿಸ್ಟಮ್ ಹೆಚ್ಚು ಪ್ರಯೋಜನಕಾರಿಯಾಗಿರಲಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version