ಬೆಂಗಳೂರು: ಸಿಇಟಿ ಪರೀಕ್ಷೆ ಬರೆದು ಎಂಜಿನಿಯರಿಂಗ್ ಕಾಲೇಜು (Engineering Admission) ಪ್ರವೇಶ ಪಡೆಯಬೇಕು ಎಂದು ಕಾಯುತ್ತಿದ್ದ ಹಲವು ವಿದ್ಯಾರ್ಥಿಗಳಿಗೆ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಎಡವಟ್ಟಿನಿಂದ ಆಘಾತ ಉಂಟಾಗಿದೆ. ಫೀಸ್ ಕಟ್ಟಿದ್ದರೂ ಆಯ್ಕೆಯ ಕಾಲೇಜು ಸಿಗದ ಹಿನ್ನೆಲೆಯಲ್ಲಿ ಕೆಇಎ ವಿರುದ್ಧ ವಿದ್ಯಾರ್ಥಿಗಳು ಅಸಮಾಧಾನ ಹೊರಹಾಕಿದ್ದಾರೆ.
2023ನೇ ಸಾಲಿನಲ್ಲಿ ಎಂಜಿನಿಯರಿಂಗ್ ಪ್ರವೇಶಾತಿಗೆ ತಮ್ಮಿಷ್ಟದ ಕಾಲೇಜನ್ನು ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಂಡಿದ್ದರು. ಜತೆಗೆ ಅದರ ಫೀಸ್ ಸಹ ಕಟ್ಟಿದ್ದರು. ಆದರೆ ಇದೀಗ ಪರೀಕ್ಷಾ ಮಂಡಳಿಯ ಯಡವಟ್ಟು, ತಾಂತ್ರಿಕ ದೋಷದಿಂದ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ.
ವಿದ್ಯಾರ್ತಿಗಳು ಎರಡನೇ ರೌಂಡ್‌ನಲ್ಲಿ ಆಯ್ಕೆಯಾಗಿದ್ದ ಸೀಟ್ ಹೋಲ್ಡ್ ಮಾಡಿ, ನಾಲ್ಕನೇ ಸುತ್ತಿನ ಆಯ್ಕೆಗೆ ಫೀಸ್ ಕಟ್ಟಿದ್ದರು. ಆದರೆ ಈಗ ಕಟ್ಟಿದ್ದ ಫೀಸ್ ಹಣ ವಿದ್ಯಾರ್ಥಿಗಳಿಗೆ ವಾಪಸ್ ಬಂದಿದೆ. ಅತ್ತ ಸೀಟ್ ಲಿಸ್ಟ್ನಿಂದ ಸೀಟ್ ಕೂಡ ಹೆಸರು ಮಾಯವಾಗಿದ್ದು, ಇದರಿಂದ ಸುಮಾರು 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ
ಈ ಸಮಸ್ಯೆಯಿಂದ ವಿದ್ಯಾರ್ಥಿಗಳು, ಪೋಷಕರು ಯಾವ ರೀತಿ ಕಾಲೇಜು ಆಯ್ಕೆ ಮಾಡಿಕೊಳ್ಳಬೇಕು ಎಂಬ ಗೊಂದಲಕ್ಕೆ ಒಳಗಾಗಿದ್ದಾರೆ. ಆನ್‌ಲೈನ್‌ನಲ್ಲಿ ಹುಡುಕಿ ಸುಸ್ತಾದ ಪೋಷಕರು, ಶುಕ್ರವಾರ ಮಲ್ಲೇಶ್ವರಂನ ಕೆಇಎ ಕಚೇರಿಗೆ ನುಗ್ಗಿ ಗಲಾಟೆ ಮಾಡಿದರು. ಈ ವೇಳೆ ಆಕ್ರೋಶ ಹೊರಹಾಕಿದ ಪೋಷಕರು, ಬೆಳಗ್ಗೆಯಿಂದ ಕಾದು ಕುಳಿತರು ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಕಿಡಿಕಾರಿದರು.
ಇದನ್ನೂ ಓದಿ | IISc Bangalore: ದೇಶದ 91 ವಿವಿಗಳಲ್ಲಿ ಐಐಎಸ್‌ಸಿ ಬೆಂಗಳೂರು ಟಾಪ್; ಮತ್ಯಾವ ವಿವಿಗೆ ಸ್ಥಾನ?
ಒಟ್ಟಿನಲ್ಲಿ ಕೆಇಎ ಬೇಜವಾಬ್ದಾರಿಯಿಂದಲೋ ಅಥವಾ ವೆಬ್‌ಸೈಟ್ ಅವಾಂತರದಿಂದಲೋ ವಿದ್ಯಾರ್ಥಿಗಳು ಬುಕ್ ಮಾಡಿದ್ದ ಸೀಟ್‌ಗಳು ರದ್ದಾಗಿವೆ. ಹೀಗಾಗಿ ಏನು ಮಾಡಬೇಕು ಎಂಬ ಗೊಂದಲದಲ್ಲಿ ಕಾದು ಸುಸ್ತಾಗಿದ್ದಾರೆ.