Site icon Vistara News

Essay Competition | ಕಾಲೇಜು ವಿದ್ಯಾರ್ಥಿಗಳಿಗಾಗಿ ಉತ್ಥಾನ ಪ್ರಬಂಧ ಸ್ಪರ್ಧೆ

colleges

ಬೆಂಗಳೂರು: ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂಭ್ರಮದ ಪ್ರಯುಕ್ತ ಉತ್ಥಾನ ಮಾಸಪತ್ರಿಕೆಯು ಕಾಲೇಜು ವಿದ್ಯಾರ್ಥಿಗಳಿಗಾಗಿ “ಭವಿಷ್ಯದಲ್ಲಿ ನಾನೇನಾಗಬೇಕು? ಉದ್ಯೋಗದಾತನಾಗಲೇ? ಉದ್ಯೋಗಿಯಾಗಲೇ” ಎಂಬ ವಿಷಯದ ಕುರಿತು ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯನ್ನು (Essay Competition) ಏರ್ಪಡಿಸಿದೆ.

ವಿಷಯ ಚೌಕಟ್ಟು ಹೀಗಿರಲಿ

ಒಬ್ಬ ವಿದ್ಯಾರ್ಥಿಯಾಗಿ ನಾನೇಕೆ ಕಾಲೇಜು ಶಿಕ್ಷಣ ಪಡೆಯುತ್ತಿರುವೆ? ಶಿಕ್ಷಣ ಪೂರೈಸಿ ನಾನು ಏನಾಗಬೇಕು? ವಿದ್ಯಾವಂತರಿಗೆ ಎಲ್ಲಿದೆ ಉದ್ಯೋಗಾವಕಾಶಗಳು? ಹೇಗೋ ಒಂದು ಉದ್ಯೋಗ ಹಿಡಿದು ಸುರಕ್ಷಿತ ವಲಯಕ್ಕೆ (comfort zone) ದಾಟಿಕೊಳ್ಳುವುದು ನನ್ನ ಗುರಿಯೇ? ಅಥವಾ ಸ್ವಲ್ಪ ಕಠಿಣ ಅನ್ನಿಸಿದರೂ ಸರಿ ನಾಲ್ಕು ಜನರಿಗೆ ಕೆಲಸ ಕೊಡುವ ಉದ್ಯೋಗದಾತನಾಗಲೇ? ಯಾವ ದಾರಿಯಲ್ಲಿ ನಿಜವಾದ ಭವಿಷ್ಯವಿದೆ? ಸಾರ್ಥಕತೆ ಇದೆ? ಹೊಸ ದಾರಿಯಲ್ಲಿ ಭವಿಷ್ಯ ಹುಡುಕಲು ಹೊರಟವರಿಗೆ ಎದುರಾಗುವ ಸವಾಲುಗಳೇನು? ಅದಕ್ಕೆ ಬೇಕಾದ ಮಾನಸಿಕ ಸಿದ್ಧತೆ ಹೇಗಿರಬೇಕು? ನಮ್ಮ ಸುತ್ತಮುತ್ತ ಉದ್ಯೋಗದಾತರಾದವರ ಉದಾಹರಣೆ ಇದೆಯೇ? ಅವರ ಅನುಭವಗಳು ಹೇಳುವ ಪಾಠಗಳೇನು? ಇದು ಈ ವರ್ಷದ ಉತ್ಥಾನ ಪ್ರಬಂಧ ಸ್ಪರ್ಧೆಯ ವಿಷಯದ ಚೌಕಟ್ಟು. ಈ ವಿಷಯದ ಕುರಿತಾಗಿ ವಿದ್ಯಾರ್ಥಿಗಳು ತಮ್ಮ ವಿಚಾರ ಸರಣಿಯನ್ನು ಪ್ರಬಂಧ ರೂಪದಲ್ಲಿ ಬರೆದು ಕಳುಹಿಸಬೇಕು.

ಸ್ಪರ್ಧೆಯ ನಿಯಮಗಳು:

ಸ್ಪರ್ಧೆಯಲ್ಲಿ ಪದವಿ, ಯಾ ತತ್ಸಮಾನ ಮತ್ತು ಸ್ನಾತಕೋತ್ತರ ಕಾಲೇಜು ವಿದ್ಯಾರ್ಥಿಗಳು ಮಾತ್ರ ಭಾಗವಹಿಸಬಹುದು. ಪ್ರಬಂಧವು ಕನ್ನಡ ಭಾಷೆಯಲ್ಲಿರಬೇಕು. ೧೫೦೦ ಪದಗಳು ಮೀರದಂತೆ ಇರಲಿ. ಸ್ಪರ್ಧೆಗೆ ಕಳುಹಿಸುವ ಪ್ರಬಂಧ ವಿದ್ಯಾರ್ಥಿಯ ಸ್ವಂತ ರಚನೆಯಾಗಿರಬೇಕು. ಈವರೆಗೆ ಎಲ್ಲಿಯೂ ಯಾವ ರೀತಿಯಲ್ಲೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು. ಕಳುಹಿಸುವ ಪ್ರಬಂಧವನ್ನು ಕಾಲೇಜು/ವಿಭಾಗ ಮುಖ್ಯಸ್ಥರಿಂದ ದೃಢೀಕರಿಸಬೇಕು.

ಸ್ಪರ್ಧಿಗಳು ತಮ್ಮ ಹೆಸರು, ಪರಿಚಯ, ಮೊಬೈಲ್ ನಂಬರ್, ಕಾಲೇಜಿನ ಹೆಸರು, ವಿಳಾಸ ಇತ್ಯಾದಿಗಳನ್ನು ಪ್ರತ್ಯೇಕ ಹಾಳೆಯಲ್ಲಿ ಬರೆದು ಲಗತ್ತಿಸಬೇಕು. ಜತೆಗೆ ಭಾವಚಿತ್ರವೂ ಇರಬೇಕು. ಪ್ರಬಂಧವನ್ನು ಪೋಸ್ಟ್ ಮೂಲಕ ಅಥವಾ ಇಮೇಲ್ ಮೂಲಕ ಕಳುಹಿಸಬೇಕು. ಇಮೇಲ್ ಮೂಲಕ ಕಳುಹಿಸುವವರು ನುಡಿ ಅಥವಾ ಯೂನಿಕೋಡ್ ತಂತ್ರಾಂಶದಲ್ಲಿ ಸಿದ್ಧಪಡಿಸಿ (ಪಿಡಿಎಫ್ ಮತ್ತು word file) utthanacompetition@gmail.com ಈ ವಿಳಾಸಕ್ಕೆ ಇ-ಮೇಲ್ ಮೂಲಕ ಕಳುಹಿಸಬೇಕು.

ಬಹುಮಾನಿತ ಪ್ರಬಂಧಗಳನ್ನು ಯಾವುದೇ ರೂಪದಲ್ಲಿ, ಯಾವಾಗ ಬೇಕಾದರೂ ಬಳಸಿಕೊಳ್ಳುವ ಹಕ್ಕನ್ನು ಉತ್ಥಾನವು ಕಾಯ್ದಿರಿಸಿಕೊಂಡಿದೆ. ಸ್ಪರ್ಧೆಯಲ್ಲಿ ಭಾಗವಹಿಸಿದ ಪ್ರಬಂಧವನ್ನು ಹಿಂದಿರುಗಿಸುವ ವ್ಯವಸ್ಥೆ ಇರುವುದಿಲ್ಲ. ಪೋಸ್ಟ್ ಮೂಲಕ ಕಳುಹಿಸುವವರು ಪ್ರಬಂಧವನ್ನು ಹಾಳೆಯ ಒಂದೆ ಮಗ್ಗುಲಲ್ಲಿ ಸ್ಫುಟವಾಗಿ ಬರೆದಿರಬೇಕು. ಹಾಳೆಗಳನ್ನು ಚಿತ್ರಗಳಿಂದ, ಬಣ್ಣಗಳಿಂದ ಅಲಂಕರಿಸುವುದು ಬೇಡ.

ತೀರ್ಪುಗಾರರ ಮೌಲ್ಯನಿರ್ಣಯದ ನಂತರ ಫಲಿತಾಂಶವನ್ನು ಉತ್ಥಾನದಲ್ಲಿ ಪ್ರಕಟಿಸಲಾಗುವುದು. ಅದಕ್ಕೆ ಪೂರ್ವದಲ್ಲಿ ಯಾವುದೇ ಪತ್ರ ವ್ಯವಹಾರ ಸಾಧ್ಯವಾಗದು. ಸ್ಪರ್ಧೆಗೆ ಸಂಬಂಧಿಸಿದ ಎಲ್ಲ ವಿಚಾರಗಳಲ್ಲೂ ವ್ಯವಸ್ಥಾಪಕರದ್ದೇ ಅಂತಿಮ ತೀರ್ಮಾನವಾಗಿರಲಿದೆ. ಪ್ರಬಂಧ ತಲುಪಿಸಲು ೨೦೨೨ರ ಅಕ್ಟೋಬರ್ ೨೦ ಕೊನೆಯ ದಿನಾಂಕವಾಗಿದೆ.

ಬಹುಮಾನಗಳ ವಿವರ

ಮೊದಲ ಬಹುಮಾನ: ರೂ. ೧೦,೦೦೦ /-
ಎರಡನೆಯ ಬಹುಮಾನ: ರೂ. ೭,೦೦೦ /-
ಮೂರನೆಯ ಬಹುಮಾನ: ರೂ. ೫,೦೦೦/-
ಹತ್ತು ಮೆಚ್ಚುಗೆಯ ಬಹುಮಾನಗಳು: ತಲಾ ರೂ. ೨,೦೦೦/-

ಪ್ರಬಂಧವನ್ನು ಕಳುಹಿಸಬೇಕಾದ ವಿಳಾಸ

ಸಂಪಾದಕರು,
‘ಉತ್ಥಾನ’ ವಾರ್ಷಿಕ ಪ್ರಬಂಧ ಸ್ಪರ್ಧೆ – ೨೦೨೨
‘ಕೇಶವ ಶಿಲ್ಪ’, ಕೆಂಪೇಗೌಡನಗರ ಮುಖ್ಯರಸ್ತೆ,
ಕೆಂಪೇಗೌಡನಗರ, ಬೆಂಗಳೂರು – ೫೬೦ ೦೦೪
ದೂರವಾಣಿ: ೦೮೦ – ೨೬೬೦ ೪೬೭೩ / ೭೭೯೫೪ ೪೧೮೯೪
ಇ-ಮೇಲ್: utthanacompetition@gmail.com

Exit mobile version