Site icon Vistara News

ಮಾಜಿ ಸಿಎಂ ಕುಮಾರಸ್ವಾಮಿ ಮೊಮ್ಮಗನಿಗೆ ಹ್ಯಾಪಿ ಬರ್ತ್‌ಡೇ, ಹೇಗಿತ್ತು ಜನ್ಮದಿನದ ಸೆಲೆಬ್ರೇಷನ್‌?

Birthday

ಬೆಂಗಳೂರು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಮರಿಮೊಮ್ಮಗ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮೊಮ್ಮಗ ಹಾಗೂ ನಟ ನಿಖಿಲ್‌ ಕುಮಾರಸ್ವಾಮಿ ಪುತ್ರನ ಮೊದಲ ವರ್ಷದ ಜನ್ಮದಿನವನ್ನು ಶನಿವಾರ ಆಚರಿಸಲಾಗಿದೆ. ಕುಮಾರಸ್ವಾಮಿ, ಅವರ ಪತ್ನಿ ಅನಿತಾ ಕುಮಾರಸ್ವಾಮಿ, ನಿಖಿಲ್‌ ಹಾಗೂ ರೇವತಿ ದಂಪತಿಯು ಮನೆಯಲ್ಲಿಯೇ ಸರಳವಾಗಿ ಜನ್ಮದಿನ ಆಚರಿಸಿದ್ದಾರೆ.

“ನಮ್ಮ ಅಕ್ಕರೆಯ ಮೊಮ್ಮಗ ಹಾಗೂ ನಿಖಿಲ್‌ ಕುಮಾರಸ್ವಾಮಿ ಮತ್ತು ಶ್ರೀಮತಿ ರೇವತಿ ದಂಪತಿಯ ಸುಪುತ್ರ ಚಿ.ಅವ್ಯಾನ್ ದೇವ್ ಮೊದಲ ಹುಟ್ಟುಹಬ್ಬವನ್ನು ಇಂದು ಸರಳವಾಗಿ ನಮ್ಮ ನಿವಾಸದಲ್ಲಿ ಆಚರಿಸಿದೆವು. ಕಂದನನ್ನು ಆಶೀರ್ವದಿಸಿ, ಹಾರೈಸಿದ ಎಲ್ಲರಿಗೂ ನನ್ನ ಕೃತಜ್ಞತೆಗಳು” ಎಂದು ಕುಮಾರಸ್ವಾಮಿ ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ | Modi Birthday | ಮೋದಿ ಜನ್ಮದಿನದ ಹಿನ್ನೆಲೆ ಆಯೋಜಿಸಿದ್ದ ರಕ್ತದಾನ ಶಿಬಿರ ವಿಶ್ವದಾಖಲೆ!

Exit mobile version