ಚಿಕ್ಕಮಗಳೂರು: ನಿರ್ಗತಿಕರು, ಭಿಕ್ಷುಕರು ಹಣಕ್ಕಾಗಿ ಅಂಗಲಾಚುವುದನ್ನು ನೋಡಿರುತ್ತೇವೆ. ಆದರೆ, ನಗರದಲ್ಲಿ ಹೈಟೆಕ್ ಹಣ ವಸೂಲಿ ದಂಧೆಯೊಂದು ಬೆಳಕಿಗೆ ಬಂದಿದೆ. ಯುವತಿಯರ ಗುಂಪೊಂದು ಸ್ಟೈಲಾಗಿ ಡ್ರೆಸ್ ಮಾಡಿಕೊಂಡು ಬಂದು ಸಾರ್ವಜನಿಕರನ್ನು ಹಣಕ್ಕಾಗಿ ಪೀಡಿಸುತ್ತಿತ್ತು. ಸ್ಥಳೀಯರೊಬ್ಬರು ಪ್ರಶ್ನಿಸಿದ ಹಿನ್ನೆಲೆಯಲ್ಲಿ ಆಟೋ ಹತ್ತಿ ಈ ಗ್ಯಾಂಗ್ ಎಸ್ಕೇಪ್ ಆಗಿದೆ.
ರಾಜಸ್ಥಾನದಿಂದ ಬಂದ ಐವರು ಯುವತಿಯರ ತಂಡವು ಮನೆ-ಅಂಗಡಿಗಳಿಗೆ ಹೋಗಿ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದರು. ಯಾರಾದರೂ 10, 20 ರೂಪಾಯಿ ಕೊಟ್ಟರೆ ಇವರು ಮುಟ್ಟಲ್ಲ, 100, 200 ರೂಪಾಯಿಯನ್ನೇ ಕೊಡಬೇಕು. ಹೀಗಾಗಿ ಸ್ಥಳೀಯ ನಿವಾಸಿಯೊಬ್ಬರು, ನೀವು ಎಲ್ಲಿಂದ ಬಂದಿದ್ದೀರಿ? ಯಾವ ಉದ್ದೇಶಕ್ಕಾಗಿ ಹಣ ಕೇಳುತ್ತಿದ್ದೀರಿ? ಜನರನ್ನು ಮೋಸ ಮಾಡಿ ದುಡ್ಡು ವಸೂಲಿ ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಏನೂ ಹೇಳದೆ ಯುವತಿಯರು ಆಟೋ ಹತ್ತಿ ಎಸ್ಕೇಪ್ ಆಗಿದ್ದಾರೆ.
ಇದನ್ನೂ ಓದಿ | Murder Attempt: ಕುಟುಂಬಗಳ ನಡುವೆ ಆಸ್ತಿ ಜಗಳ; ಮಚ್ಚಿನಿಂದ ಅಟ್ಟಾಡಿಸಿ ಹೊಡೆದು ನಾಲ್ವರ ಮೇಲೆ ಹಲ್ಲೆ
ಒಂದೇ ರೀತಿಯ ಟಿ ಶರ್ಟ್, ಜೀನ್ಸ್ ಪ್ಯಾಂಟ್ ಹಾಕಿಕೊಂಡಿದ್ದ ಐವರು ಯುವತಿಯರು, ಪ್ರಕೃತಿ ವಿಕೋಪದಿಂದ ಮನೆ-ಆಸ್ತಿ ಕಳೆದುಕೊಂಡಿದ್ದೇವೆಂದು ಅನುಕಂಪ ಹುಟ್ಟಿಸಿ ಜನರಿಂದ ಹಣ ವಸೂಲಿ ಮಾಡುತ್ತಿದ್ದರು. ಮನೆ ಬಿದ್ದು ಹೋಗಿದೆ, ಹಾಕಲು ಬಟ್ಟೆ ಇಲ್ಲ ಎಂದು ಹಣಕ್ಕಾಗಿ ಇವರು ಡಿಮ್ಯಾಂಡ್ ಇಡುತ್ತಿದ್ದರು.