ದಾವಣಗೆರೆ: ಇವರು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿಮಾನಿ. ಅವರಂತೆಯೇ ಬದುಕಬೇಕು ಎಂಬ ಕನಸುಹೊತ್ತಿದ್ದರು. ಕಡೆಗೆ ಸಾವಿನಲ್ಲೂ ಅವರದ್ದೇ ಮಾರ್ಗ ಹಿಡಿದು ಕಣ್ಣು ದಾನ (Eye Donation) ಮಾಡುವ ಮೂಲಕ ಸಾರ್ಥಕತೆ ಮರೆದಿದ್ದಾರೆ.
ದಾವಣಗೆರೆಯ ಎಸ್.ಎಂ.ಕೃಷ್ಣ ನಗರದ ನಿವಾಸಿ ಮಾರ್ಕೆಟ್ ರವಿ (31) ಬುಧವಾರ ಬೆಳಗ್ಗೆ ಹೃದಯಾಘಾತದಿಂದ ಮೃತಪಟ್ಟಿದ್ದರು. ಮಾರ್ಕೆಟ್‌ನಲ್ಲಿ ತರಕಾರಿ ಮಾರಾಟ ಮಾಡುತ್ತಿದ್ದ ರವಿಗೆ ಪುನೀತ್ ರಾಜಕುಮಾರ್ ಎಂದರೆ ಪಂಚಪ್ರಾಣ. ಪುನೀತ್ ಅಗಲಿಯ ಬಳಿಕ ತಾನು ಕೂಡ ಅವರಂತೆ ನೇತ್ರದಾನ ಮಾಡುವುದಾಗಿ ಕುಟುಂಬದವರೊಂದಿಗೆ ಹೇಳಿಕೊಂಡಿದ್ದ.
ಬಾಳಿ ಬದುಕಾಬೇಕಾದ ರವಿ ಚಿಕ್ಕ ವಯಸ್ಸಿಗೆ ಹೃದಯಾಘಾತದಿಂದ ಮೃತಪಟ್ಟಿದ್ದು, ಸಾವಿನ ನಂತರ ಕಣ್ಣು ದಾನ ಮಾಡುವುದೇ ಅವರ ಕೊನೆಯ ಆಸೆಯಾಗಿತ್ತು. ಅದರಂತೆಯೇ ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ರವಿ ಕುಟುಂಬಸ್ಥರು ಅಗಲಿಕೆಯ ನೋವಿನಲ್ಲೂ ರವಿಯ ಕಣ್ಣುಗಳನ್ನು ದಾನ ಮಾಡಿದ್ದಾರೆ. ಜಿಲ್ಲಾಸ್ಪತ್ರೆಯ ಮುಂಭಾಗ ರವಿ ಸ್ನೇಹಿತರು ಹಾಗೂ ಕುಟುಂಬಸ್ಥರು ಜಮಾಯಿಸಿದ್ದ ಚಿತ್ರಣ ಕಂಡು ಬಂತು.
ಇದನ್ನೂ ಓದಿ | Charity Begins at Home | ದಾನವೇ ಧರ್ಮದ ಮೂಲ, ವರ್ಷದಲ್ಲಿ ಭಾರತೀಯರು ಮಾಡಿದ ದಾನ ಎಷ್ಟು ಸಾವಿರ ಕೋಟಿ ರೂ.?