Site icon Vistara News

Facebook Post: ರಾಜ್ಯದ ಸಾಲ, ಗ್ಯಾರಂಟಿ ಬಗ್ಗೆ ಪೋಸ್ಟ್‌ ಮಾಡಿದ್ದ ಸರ್ಕಾರಿ ಶಿಕ್ಷಕ ಅಮಾನತು

teacher suspended on Facebook post

ಚಿತ್ರದುರ್ಗ: ರಾಜ್ಯ ಸರ್ಕಾರ ಹಾಗೂ ಹಿಂದಿನ ಮುಖ್ಯಮಂತ್ರಿಗಳ ವಿರುದ್ಧವಾಗಿ ಫೇಸ್‌ಬುಕ್‌ನಲ್ಲಿ ಅವಹೇಳನಕಾರಿಯಾಗಿ ಪೋಸ್ಟ್‌ (Facebook Post) ಹಂಚಿಕೊಂಡಿದ್ದ ಆರೋಪದ ಮೇಲೆ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರನ್ನು ಅಮಾನತು (Teacher suspended) ಮಾಡಿ ಆದೇಶ ಹೊರಡಿಸಲಾಗಿದೆ. ಅಲ್ಲದೆ, ಈಗಿನ ಸರ್ಕಾರದ 5 ಗ್ಯಾರಂಟಿಗಳ (Congress Guarantee) ಬಗ್ಗೆಯೂ ಅವಹೇಳನ ಮಾಡಲಾಗಿತ್ತು.

ಜಿಲ್ಲೆಯ ಕಾನುಬೇನಹಳ್ಳಿ ಸರ್ಕಾರಿ ಶಾಲೆ ಶಿಕ್ಷಕ ಶಾಂತಮೂರ್ತಿ ಅಮಾನತಿಗೆ ಒಳಗಾದವರು. ಅವರು ತಮ್ಮ ಫೇಸ್‌ಬುಕ್‌ ಪೋಸ್ಟ್‌ ಮೂಲಕ ಹಿಂದಿನ ಮುಖ್ಯಮಂತ್ರಿಗಳ ಯೋಜನೆ, ಮಾಡಿದ ಸಾಲಗಳ ಬಗ್ಗೆ ಟೀಕೆ ಮಾಡಿದ್ದರು. ಇದು ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಕ್ರಮ ಕೈಗೊಂಡಿದೆ.

ಅಮಾನತು ಮಾಡಿರುವ ಆದೇಶ

ಇದನ್ನೂ ಓದಿ: Karnataka CM: ಕರ್ನಾಟಕ ಜನರ ತೀರ್ಪು ದೇಶಕ್ಕೇ ಹೊಸ ಆಶಾಕಿರಣ; ಬೆಂಗಳೂರಿನಲ್ಲಿ ಮೆಹಬೂಬಾ ಮುಫ್ತಿ ಹೇಳಿಕೆ

ಚಿತ್ರದುರ್ಗ ಡಿಡಿಪಐ ನಿರ್ದೇಶನ ಮೇರೆಗೆ ಹೊಸದುರ್ಗ ಬಿಇಒ ಎಲ್. ಜಯಪ್ಪ ಅವರು ಶಿಕ್ಷಕ ಶಾಂತಮೂರ್ತಿಯನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಪೋಸ್ಟ್‌ನಲ್ಲಿ ಏನಿತ್ತು?

ಈ ಹಿಂದೆ ಮುಖ್ಯಮಂತ್ರಿಗಳಾಗಿದ್ದ ಎಸ್‌.ಎಂ. ಕೃಷ್ಣ, ಧರಂ ಸಿಂಗ್‌, ಎಚ್‌.ಡಿ. ಕುಮಾರಸ್ವಾಮಿ, ಸದಾನಂದ ಗೌಡ, ಜಗದೀಶ್‌ ಶೆಟ್ಟರ್‌, ಸಿದ್ದರಾಮಯ್ಯ ಅವರ ಅವಧಿಯ ಸಾಲದ ಬಗ್ಗೆ ಬರೆದುಕೊಂಡಿದ್ದರು. ಇನ್ನು ಸಿದ್ದರಾಮಯ್ಯ ಅವರು 2,42,000 ಕೋಟಿ ರೂಪಾಯಿ ಸಾಲ ಮಾಡಿದ್ದು, ಬಿಟ್ಟಿ ಭಾಗ್ಯ ಕೊಡದೆ ಮತ್ತಿನ್ನೇನು ಎಂದು ಬರೆದುಕೊಂಡಿದ್ದ ಪೋಸ್ಟ್‌ ಅನ್ನು ಇವರು ಹಂಚಿಕೊಂಡಿದ್ದರು. ಈ ಮೂಲಕ ಸಿದ್ದರಾಮಯ್ಯ ಅವರ ಗ್ಯಾರಂಟಿ ಯೋಜನೆಗಳನ್ನು ಟೀಕಿಸಲಾಗಿತ್ತು.

ಇದನ್ನೂ ಓದಿ: BS Yediyurappa: ಕಾಂಗ್ರೆಸ್‌ ಗ್ಯಾರಂಟಿ ಜಾರಿ ಬಗ್ಗೆ ನನಗೆ ಗ್ಯಾರಂಟಿ ಇದೆ: ಬಿ.ಎಸ್‌. ಯಡಿಯೂರಪ್ಪ

ಸರ್ಕಾರಿ ನಿಯಮ ಉಲ್ಲಂಘಿಸಿದ್ದಕ್ಕೆ ಕ್ರಮ

ಸರ್ಕಾರಿ ಶಾಲೆ ಶಿಕ್ಷಕನಾಗಿ ಹೀಗೆ ಸರ್ಕಾರದ ವಿರುದ್ಧ ಹೇಳಿಕೆ ನೀಡುವುದು, ಬರೆಯುವುದನ್ನು ನಿಯಮಾನುಸಾರ ಮಾಡುವಂತಿಲ್ಲ. ಈ ಹಿನ್ನೆಲೆಯಲ್ಲಿ ನಿಯಮ ಉಲ್ಲಂಘಿಸಿದ್ದಕ್ಕೆ ಅವರನ್ನು ಅಮಾನತು ಮಾಡಿ ಕ್ರಮ ಕೈಗೊಳ್ಳಲಾಗಿದೆ.

Exit mobile version