ಬೆಂಗಳೂರು: ಕರ್ನಾಟಕ ಪತ್ರಕರ್ತೆಯರ ಸಂಘ ಮತ್ತು ಸಾರಥಿ ಮಾಧ್ಯಮ ಸಂಪನ್ಮೂಲ ಸಂಸ್ಥೆ ಸಹಯೋಗದಲ್ಲಿ ಗೂಗಲ್ ಇಂಡಿಯಾ ಇನಿಷಿಯೇಟಿವ್ ಇಂಡಿಯಾ ಟ್ರೈನಿಂಗ್ ನೆಟ್‌ವರ್ಕ್‌ನ ಡಾಟಾ ಲೀಡ್ಸ್ ವತಿಯಿಂದ ಏಪ್ರಿಲ್ 29 ರಂದು ಬೆಳಗ್ಗೆ 10 ಗಂಟೆಗೆ ನಗರದ ಕಬ್ಬನ್ ಪಾರ್ಕ್‌ನ ಪ್ರೆಸ್ ಕ್ಲಬ್‌ನಲ್ಲಿ ʼಫ್ಯಾಕ್ಟ್ ಚೆಕ್ ಮತ್ತು ಸುಳ್ಳುಸುದ್ದಿ ಪತ್ತೆ ಹಚ್ಚುವಿಕೆʼ (Fact Checking Workshop) ಕುರಿತು ಡಿಜಿಟಲ್ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.
ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಸಂಸ್ಥೆಯ ಕಲೆ, ಮಾನವೀಯ ಮತ್ತು ಸಮಾಜ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಮತ್ತು ಮುಖ್ಯಸ್ಥೆ ಶಿಲ್ಪಾ ಕಲ್ಯಾಣ್ ಅವರು ಭಾಗವಹಿಸಲಿದ್ದು, ಫ್ಯಾಕ್ಟ್ ಚೆಕ್ ಮತ್ತು ಸುಳ್ಳುಸುದ್ದಿ ಪತ್ತೆ ಹಚ್ಚುವಿಕೆ ಬಗ್ಗೆ ಮಾರ್ಗದರ್ಶನ ನೀಡಲಿದ್ದಾರೆ.
ಕಾರ್ಯಾಗಾರದಲ್ಲಿ ಭಾಗವಹಿಸಲು ಆಸಕ್ತಿಯುಳ್ಳವರು ಮೊಬೈಲ್ ಸಂಖ್ಯೆ 9481867455 ಕ್ಕೆ ಮೆಸೇಜ್ ಮಾಡಿ ಹೆಸರು ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್‌ಗಳನ್ನು ಕ್ಲಿಕ್ ಮಾಡಿ ಡಾಟಾ ಲೀಡ್ಸ್ ಮತ್ತು ಸಾರಥಿ ಮಾಧ್ಯಮ ಸಂಪನ್ಮೂಲ ಸಂಸ್ಥೆ.
ಇದನ್ನೂ ಓದಿ | KCET 2023: ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ತೆಗೆದುಕೊಳ್ಳುವವರೂ ಸಿಇಟಿ ಬರೆಯಬೇಕು: ಕೆಇಎ