Site icon Vistara News

Fake Marks Card | ಪದವಿಗೆ ದಾಖಲಾಗಲು‌ ಅಡ್ಡ ದಾರಿ; ಬೆಂಗಳೂರು ಉತ್ತರ ವಿವಿಯಲ್ಲಿ ನಕಲಿ ವಿದ್ಯಾರ್ಥಿಗಳು

fake marks card

ಕೋಲಾರ: ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಲ್ಲಿ ಪ್ರಶ್ನೆ ಪತ್ರಿಕೆಗಳ ಸೋರಿಕೆ ಪ್ರಕರಣ ಬಳಿಕ ಈಗ ನಕಲಿ ಅಂಕಪಟ್ಟಿ ನೀಡಿ ವಿದ್ಯಾರ್ಥಿಗಳು ದಾಖಲಾಗಿರುವ (Fake Marks Card) ಪ್ರಕರಣವು ಬೆಳಕಿಗೆ ಬಂದಿದೆ. ಬೆಂಗಳೂರು ವಿವಿ‌ಯ ದಾಖಲಾತಿ ಪರಿಶೀಲನೆ ವೇಳೆ ಎಂಟು ವಿದ್ಯಾರ್ಥಿಗಳು ನಕಲಿ ಅಂಕಪಟ್ಟಿ ನೀಡಿರುವುದು ಪತ್ತೆಯಾಗಿದೆ.

ಪದವಿ ಪಡೆಯಲು ನಕಲಿ ದಾಖಲೆಗಳನ್ನು ನೀಡಿ‌ ವಿದ್ಯಾರ್ಥಿಗಳು ಅಡ್ಡ ದಾರಿ ಹಿಡಿದರೇ ಎಂಬ ಅನುಮಾನ ಶುರುವಾಗಿದೆ. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಮೂಲ ಅಂಕಪಟ್ಟಿ ಪರಿಶೀಲನೆ ವೇಳೆ ನಕಲಿ ಅಂಕಪಟ್ಟಿ ನೀಡಿರುವುದು ತಿಳಿದು ಬಂದಿದೆ. ಸುಮಾರು‌ ಎಂಟು‌ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಈಗ ತೂಗುಕತ್ತಿ ಇದೆ.

ದೇವನಹಳ್ಳಿ, ಬಾಗೇಪಲ್ಲಿ,‌ ಚಿಕ್ಕಬಳ್ಳಾಪುರ, ಹೊಸಕೋಟೆ ಸೇರಿದಂತೆ ನೆರೆ ರಾಜ್ಯಗಳಿಂದಲೂ ನಕಲಿ ಅಂಕಪಟ್ಟಿ ನೀಡಿರುವುದು ಬಯಲಾಗಿದೆ. ಜತೆಗೆ ಮತ್ತಷ್ಟು ನಕಲಿ ವಿದ್ಯಾರ್ಥಿಗಳು ಇರುವ ಸಾಧ್ಯತೆ ಇದ್ದು, ವ್ಯಾಸಂಗ ‌ಮಾಡಿದ ಮೂಲ ಕಾಲೇಜು, ಶಾಲೆಗಳಲ್ಲಿ ಮೂಲ ದಾಖಲೆಗಳ ಪರಿಶೀಲನೆಗೆ ಉತ್ತರ ವಿವಿ ಕುಲಪತಿ ನಿರಂಜನ್ ವಾನಳ್ಳಿ ಆದೇಶಿಸಿದ್ದಾರೆ.

ಇದನ್ನೂ ಓದಿ | Modi Visit | ಸಿದ್ಧವಾಯ್ತು ಕೆಂಪೇಗೌಡ ಪೇಟ; ಮೋದಿಗೆ ತೊಡಿಸಲಿರುವ ಇದರ ವಿಶೇಷತೆ ಏನಿದೆ?

Exit mobile version