Site icon Vistara News

Ind vs Pak: ಪಾಕ್‌ ಎದುರು ಭಾರತ ಜಯಭೇರಿ; ವಿವಿಧೆಡೆ ಪಟಾಕಿ ಸಿಡಿಸಿ ಅಭಿಮಾನಿಗಳ ಸಂಭ್ರಮಾಚರಣೆ

Yadgir celebration

ಬೆಂಗಳೂರು: ಅಹಮದಾಬಾದ್‌ನಲ್ಲಿ ಶನಿವಾರ ನಡೆದ ಏಕದಿನ ವಿಶ್ವಕಪ್‌ ಪಂದ್ಯದಲ್ಲಿ ಪಾಕಿಸ್ತಾನದ ಎದುರು ಭಾರತ ತಂಡ (Ind vs Pak) ಜಯಭೇರಿ ಮೊಳಗಿಸಿದ ಹಿನ್ನೆಲೆಯಲ್ಲಿ ಯಾದಗಿರಿ, ರಾಯಚೂರು, ವಿಜಯಪುರ ಸೇರಿ ರಾಜ್ಯದ ಹಲವೆಡೆ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ವಿಜಯೋತ್ಸವ ಆಚರಿಸಿದರು.

ಭಾರತ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ (Ind vs Pak) ವಿರುದ್ಧದ ವಿಶ್ವ ಕಪ್​ (ICC World Cup 2023) ಪಂದ್ಯದಲ್ಲಿ 7 ವಿಕೆಟ್​ಗಳ ಭರ್ಜರಿ ಗೆಲುವು ದಾಖಲಿಸಿದೆ. ಹೀಗಾಗಿ ಅಭಿಮಾನಿಗಳು ಸಂಭ್ರಮಾಚರಣೆ ನಡೆಸಿದ್ದಾರೆ.

ಯಾದಗಿರಿಯ ಮಹಾತ್ಮ ಗಾಂಧಿ ಸರ್ಕಲ್, ಮೈಲಾಪುರ ಅಗಸಿ ಸೇರಿ ವಿವಿಧೆಡೆ ಯುವಕರು ಪಟಾಕಿ ಸಿಡಿಸಿ, ಭಾರತದ ಪರ ಜೈಕಾರ ಕೂಗಿ ಸಂಭ್ರಮಿಸಿದರು.

ವಿಜಯಪುರದ ಗೋಳಗುಮ್ಮಟ ಏರಿಯಾದಲ್ಲಿ ಪಟಾಕಿ ಸಿಡಿಸಿ ಯುವಕರು ಸಂಭ್ರಮಿಸಿದರು.

ರಾಯಚೂರು ನಗರದಲ್ಲಿ ಸಾವರ್ಕರ್ ಅಸೋಸಿಯೇಷನ್ ಕಡೆಯಿಂದ ಪಂದ್ಯ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ಭಾರತದ ಗೆಲುವಿನ ಬಳಿಕ ಅಭಿಮಾನಿಗಳು ಕುಣಿದು ಕುಪ್ಪಳಿಸಿದರು.

ಇದನ್ನೂ ಓದಿ | Ind vs Pak : ಮೋದಿ ಊರಲ್ಲಿ ಟೀಮ್ ಇಂಡಿಯಾ ಎದುರು ಪಾಕಿಸ್ತಾನಕ್ಕೆ ಮುಖಭಂಗ!

ರಾಯಚೂರಿನಲ್ಲಿ ಅಭಿಮಾನಿಗಳಿಂದ ಪಂದ್ಯ ವೀಕ್ಷಣೆ’

Exit mobile version