Site icon Vistara News

Farmer Martyrs Day: ಕೇಂದ್ರದಲ್ಲಿ ಬಿಜೆಪಿ ಕಿತ್ತೊಗೆಯಲು ನಿರ್ಧಾರ: ಬಡಗಲಪುರ ನಾಗೇಂದ್ರ

Farmer Leader Badagalapura Nagendra

ಧಾರವಾಡ: ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಮಾತಿಗೆ ತಪ್ಪಿದೆ. ಕನಿಷ್ಠ ಬೆಂಬಲ ಬೆಲೆ ನಿರ್ಧಾರ ಮಾಡಲು ರೈತ ಹೋರಾಟಗಾರನ್ನು (Farmer Martyrs Day) ಸೇರಿಸಿ ಒಂದು ಕಮಿಟಿ ಮಾಡುತ್ತೇವೆ ಎಂದು ಹೇಳಿದ್ದರು. ಆದರೆ, ಅವರ ಪರವಾಗಿ ಇರುವವರ ಸಮಿತಿ ಮಾಡಿದ್ದಾರೆ. ವಿದ್ಯುತ್‌ಚ್ಛಕ್ತಿ ಕಾಯ್ದೆಯನ್ನು ರೈತ ಮುಖಂಡರ ಜತೆ ಚರ್ಚೆ ಮಾಡದೆ ಜಾರಿಗೆ ತರಲು ಹೊರಟಿದ್ದು, ಕಾರ್ಪೋರೇಟ್ ಪರ ನೀತಿಗಳನ್ನು ರೂಪಿಸುತ್ತಿದ್ದಾರೆ. ಹೀಗಾಗಿ ನಾವು ಬಿಜೆಪಿಯನ್ನು ಕಿತ್ತೊಗೆಯಬೇಕು ಎಂದು ಶಪತ ಮಾಡಿದ್ದೇವೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.

43ನೇ ರೈತ ಹುತಾತ್ಮ ದಿನಾಚರಣೆ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದಿಂದ ನಗರದ ರಪಾಟಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಆಯೋಜಿಸಿದ್ದ ರೈತ ಸಮಾವೇಶದಲ್ಲಿ ಮಾತನಾಡಿ, ಇವತ್ತು ಪ್ರಮುಖವಾಗಿ 17 ನಿರ್ಣಯಗಳನ್ನು ಮಾಡಿದ್ದೇವೆ. ಮುಂದಿನ‌ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ನಿರ್ಣಯ ಮಾಡಲಾಗಿದೆ. ಅವರು ಮತ್ತೆ ಅಧಿಕಾರಕ್ಕೆ ಬರಬಾರದು. ಇದು ಬೇರೆ ಪಕ್ಷಗಳಿಗೂ ಎಚ್ಚರಿಕೆಯಾಗಿದೆ. ಹಾಗಂತ ಎಲ್ಲಾ ವಿರೋಧ ಪಕ್ಷಗಳು ಸಾಚಾ ಅಲ್ಲ ಎಂದು ತಿಳಿಸಿದರು.

ಇದನ್ನೂ ಓದಿ | Assembly Session : ಎಚ್.ಡಿ. ಕುಮಾರಸ್ವಾಮಿ ಸುಳ್ಳು ಹೇಳಿದ್ರು; ಮೋದಿಗೆ ಪ್ಯಾಪ್ಯುಲಾರಿಟಿ ಇದೆ: ಸಿಎಂ ಸಿದ್ದರಾಮಯ್ಯ

ವಿರೋಧ ಪಕ್ಷಗಳ ಮುಂದೆ ಕೂಡ ನಮ್ಮ ಬೇಡಿಕೆಗಳನ್ನು ಇಟ್ಟಿದ್ದೆವು. ಅಧಿಕಾರಕ್ಕೆ ಬರುವುದು ರಾಜಕೀಯ ಪಕ್ಷಷಗಳ ಅಜೆಂಡಾ ಆಗಬಾರದು. ಜನರ ಮುಂದೆ ಏನು ಅಜೆಂಡಾ ಇಡುತ್ತೀರಿ ವಿಪಕ್ಷಗಳನ್ನು ಎಂದು ಕೇಳಿದ್ದೆವು ಎಂದ ಅವರು, ದುಡಿಯುವ ವರ್ಗವೇ ಒಂದು ಪರ್ಯಾಯ ರಾಜಕೀಯ ಶಕ್ತಿಯಾಗಬೇಕು. ಕಳಸಾ-ಬಂಡೂರಿ ನಾಲ್ಕು‌ ಜಿಲ್ಲೆಗಳ 14 ತಾಲೂಕುಗಳಿಗೆ ಅನುಕೂಲವಾಗುವ ಯೋಜನೆ. ಅದು ರಾಜಕೀಯಕ್ಕೆ ಬಳಕೆಯಾಗುತ್ತಿದೆ ಎಂದು ಬೇಸರ ಹೊರಹಾಕಿದರು.

ಹೊಸ ರಾಜ್ಯ ಸರ್ಕಾರ ನಮ್ಮೆಲ್ಲ ಬೇಡಿಕೆಗಳನ್ನು ಸಂಪೂರ್ಣವಾಗಿ ಈಡೇರಿಸುವ ಭರವಸೆ ಇಲ್ಲ. ಆದರೆ, ಈ ಸರ್ಕಾರ ಭೂ ಸುಧಾರಣಾ ಕಾಯ್ದೆ, ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಕೂಡಲೇ ವಾಪಸ್ ಪಡೆಯಬೇಕು. ಕೃಷಿ ‌ಬೆಲೆ ಆಯೋಗ ಮಾಡಿದ್ದಾರೆ, ಅದಕ್ಕೆ ಅನುದಾನ ನೀಡಬೇಕು. ಸ್ವಾಮಿನಾಥನ್ ವರದಿ ಪ್ರಕಾರ ಶೇ.50 ಕೊಡಬೇಕು. ಎಲ್ಲಾ ವರ್ಗಕ್ಕೂ ವೇತನ ಆಯೋಗಗಳಿವೆ. ಹೀಗಾಗಿ ರೈತ ವರ್ಗಕ್ಕೂ ಆದಾಯ ಖಾತ್ರಿ ಕೊಡಬೇಕು. ಇದಕ್ಕಾಗಿ ರೈತರ ವೇತನ ಆಯೋಗ ಮಾಡಬೇಕು ಎಂದು ಒತ್ತಾಯಿಸಿದರು.

ಕಳಸಾ-ಬಂಡೂರಿ ಯೋಜನೆಗಿರುವ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಬೇಕು. ಈ ಕುಡಿಯುವ ನೀರಿನ ಯೋಜನೆಯನ್ನು ‌ಜಾರಿಗೆ ತರಲೇಬೇಕು. ರೈತರ ಭೂಮಿಯನ್ನು ಕಸಿದುಕೊಳ್ಳುತ್ತಿದ್ದಾರೆ, ಹೀಗಾಗಿ ಭೂ ಸುಧಾರಣೆ ಕಾಯ್ದೆ ಬದಲಿಸಬೇಕು. ರೈತರು, ಗ್ರಾಮೀಣ ಜನರು, ಯುವಕರು ದುಡಿಯುವ ಜನರ ಪರ ಹೋರಾಟ ಮಾಡಲು ತೀರ್ಮಾನ ಮಾಡಬೇಕು ಎಂದು ಹೇಳಿದರು.

ಗೋ ಹತ್ಯೆ ನಿಷೇಧ ಕಾಯ್ದೆ ವಾಪಸ್ ಪಡೆಯುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಿಜೆಪಿಯವರು ಕಾನೂನು ತಂದು ಅನಾನುಕೂಲ ಮಾಡಿದರು. ಇದು ಭಾವನಾತ್ಮಕ ವಿಚಾರ ಒಂದೇ ಅಲ್ಲ, ಇಲ್ಲಿ‌ ಹೈನೋದ್ಯ ಇದೆ, ಚರ್ಮೋದ್ಯಮ ಇದೆ. ಇದು ಎಲ್ಲಾ ರಾಷ್ಟ್ರ ಮತ್ತು ರಾಜ್ಯಗಳಿಗೆ ಆದಾಯ ತರುತ್ತದೆ. ಉತ್ತರ ಪ್ರದೇಶದಲ್ಲಿ ಈ ಕಾಯ್ದೆ ಜಾರಿಗೆ ತಂದಿದ್ದಾರೆ. ರೈತರಿಗಿಂತ ಹಸುಗಳ‌ ಮೇಲೆ ಇವರಿಗೆ ಪ್ರೀತಿ ಯಾಕೆ? ಯಾರು ದುಡಿಯುವ ಹಸು, ಹಾಲು ಕೊಡುವ ಹಸುವನ್ನು ಮಾರಲ್ಲ ಎಂದು ತಿಳಿಸಿದರು.

ಇದನ್ನೂ ಓದಿ | Assembly Session : ಮೋದಿ 118 ಲಕ್ಷ ಕೋಟಿ ರೂ. ಸಾಲ ಮಾಡಿದ್ದಾರೆ: ಸಿಎಂ ಸಿದ್ದರಾಮಯ್ಯ

ಗೋಶಾಲೆಯಲ್ಲಿ ನಮ್ಮ‌ ಹಸುಗಳನ್ನು ಬಿಟ್ಟರೆ ನಾವೇ ಮೇವು ಕೊಡಬೇಕು. ಯೋಗ್ಯವಾದ ಹಸುಗಳನ್ನು ಇಟ್ಟುಕೊಳ್ಳುತ್ತೇವೆ, ಇಲ್ಲದಿದ್ದರೆ ಮಾರುತ್ತೇವೆ ಎಂದು ಆಕ್ರೋಶ ಹೊರಹಾಕಿದರು.

ಆಳಂದ ಶಾಸಕ ಬಿ.ಆರ್ ಪಾಟೀಲ್ ಹಾಗೂ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಆಂಧ್ರಪ್ರದೇಶದ ಮಾಜಿ ಕೃಷಿ ಸಚಿವ ವಡ್ಡೆ ಶೋಭನಾಧಿಶ್ವರ ರಾವ್, ರಾಜ್ಯದ ಹಿರಿಯ ಮುಖಂಡರು ಸೇರಿ ಸಾವಿರಾರು ಭಾಗಿಯಾಗಿದ್ದರು.

Exit mobile version