Site icon Vistara News

Farmer Suicide | ಸಾಲ ಬಾಧೆ ತಾಳಲಾರದೆ ನೇಣಿಗೆ ಶರಣಾದ ರೈತ

farmer suicide

ಬಾಗಲಕೋಟೆ: ಇಲ್ಲಿನ ಇಳಕಲ್ ತಾಲೂಕಿನ ಕರಡಿ ಗ್ರಾಮದಲ್ಲಿ ಸಾಲ ಬಾಧೆಯಿಂದ (Farmer Suicide) ಕಂಗಾಲಾಗಿ ರೈತರೊಬ್ಬರು ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಾಗನಗೌಡ ಮರಿಗೌಡ್ರ (50) ಸಾವಿಗೆ ಶರಣಾದ ರೈತ.

ಕರಡಿ ಗ್ರಾಮದ ರೈತ ನಾಗನಗೌಡ, ಕೃಷಿ ಪತ್ತಿನ ಸಹಕಾರಿ ಸಂಘ, ಕೆನರಾ ಬ್ಯಾಂಕ್ ಹಾಗೂ ಕೈ ಸಾಲ ಮಾಡಿಕೊಂಡಿದ್ದರು. 4 ಎಕರೆ 18 ಗುಂಟೆ ಜಮೀನು ಇದ್ದು, ಕಳೆದ ವರ್ಷ ತೊಗರಿಗೆ ಬೆಂಬಲ ಬೆಲೆ ಘೋಷಣೆ ಮಾಡಿದ್ದರೂ, ಗುಣಮಟ್ಟದ ಕಾರಣ ನೀಡಿ ಖರೀದಿ ಮಾಡಿರಲಿಲ್ಲ. ಬೆಳೆಗೆ ಬೆಲೆ ಸಿಗದ ಕಾರಣ, ಮಾಡಿದ ಸಾಲ ಹಾಗೆಯೇ ಉಳಿದಿತ್ತು.

ಸುಮಾರು 1 ಲಕ್ಷದ 15 ಸಾವಿರ ರೂ. ಸಾಲ ಇತ್ತು ಎನ್ನಲಾಗಿದೆ. ಸಾಲ ತೀರಿಸಲಾಗದೆ, ಇದರಿಂದ ಮನನೊಂದ ನಾಗನಗೌಡ ತಾವು ತೊಟ್ಟಿದ್ದ ಧೋತರದಿಂದಲೇ ಜಮೀನಲ್ಲಿ ಮರಕ್ಕೆ ನೇಣು ಹಾಕಿಕೊಂಡಿದ್ದಾರೆ. ಇಳಕಲ್ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ | Farmer Suicide | ಸಾಲ ಬಾಧೆ ತಾಳಲಾರದೆ ಕೆರೆಗೆ ಹಾರಿ ರೈತ ಆತ್ಮಹತ್ಯೆ

Exit mobile version