Site icon Vistara News

Fasal Bima Yojana | ವಿಮಾ ಕಂಪನಿಗಳ ವಿರುದ್ಧ ತಿರುಗಿಬಿದ್ದ ಮಾವು ಬೆಳೆಗಾರರು; ನಾಳೆ ಶ್ರೀನಿವಾಸಪುರ ಬಂದ್‌ಗೆ ಕರೆ

ಕೋಲಾರ: ವಿಮಾ ಕಂಪನಿಗಳಿಂದ ತೋಟಗಾರಿಕೆ ಬೆಳೆಗಾರರಿಗೆ ಬೆಳೆ ವಿಮೆ ಹಣ ನೀಡುವಲ್ಲಿ ಅನ್ಯಾಯವಾಗುತ್ತಿರುವ ಹಿನ್ನೆಲೆಯಲ್ಲಿ ಡಿಸೆಂಬರ್‌ 8ರಂದು ಶ್ರೀನಿವಾಸಪುರ ತಾಲೂಕು ಬಂದ್‌ಗೆ ಕರೆ ನೀಡಲಾಗಿದೆ. ಶ್ರೀನಿವಾಸಪುರದಲ್ಲಿ ಸಭೆ ಸೇರಿದ ಮಾವು ಬೆಳೆಗಾರರು ಬೃಹತ್ ಪ್ರತಿಭಟನೆಯ (Fasal Bima Yojana) ಮೂಲಕ ಬಂದ್‌ಗೆ ಕರೆ ನೀಡಿದ್ದಾರೆ.

ಶ್ರೀನಿವಾಸಪುರ ತಾಲೂಕಿನ ಮಾವು ಬೆಳೆಗಾರರು ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಮಾವು ಬೆಳೆಗಾರರ ಸಂಯುಕ್ತ ಹೋರಾಟ ಸಮಿತಿ ವತಿಯಿಂದ ಬಂದ್‌ಗೆ ಕರೆ ನೀಡಲಾಗಿದೆ. ಫಸಲ್ ಬಿಮಾ ಯೋಜನೆಯಡಿ ಖಾಸಗಿ ಕಂಪನಿಗಳಿಗೆ ವಿಮೆ ಹಣ ಕಟ್ಟಿರುವ ರೈತರಿಗೆ ಸರಿಯಾಗಿ ಪರಿಹಾರ ಸಿಗುತ್ತಿಲ್ಲ. ಕೇಂದ್ರ ಸರ್ಕಾರದ ಫಸಲ್ ಬಿಮಾ ಯೋಜನೆ ಕೆಲ ಖಾಸಗಿ ವಿಮಾ ಕಂಪನಿಗಳು ಹಿಡಿತದಲ್ಲಿದೆ. ಇನ್ಶುರೆನ್ಸ್ ಕಟ್ಟಿದ ರೈತರಿಗೆ ೦% ತೋರಿಸಿ ಅನ್ಯಾಯ ಮಾಡುತ್ತಿದ್ದಾರೆ. ಸರ್ಕಾರಗಳೇ ನೇರವಾಗಿ ವಿಮೆ ಕಟ್ಟಿಸಿಕೊಂಡು ನಷ್ಟ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ.

೬೦೬೫ ಎಕರೆ ಪ್ರದೇಶದಲ್ಲಿ ವಿಮೆ ಕಟ್ಟಲಾಗಿದೆ. ಆದರೆ, ಇದುವರೆಗೂ ೧,೫೦೦ ಎಕರೆಯಷ್ಟು ಜಾಗಕ್ಕೆ ಬೆಳೆ ನಷ್ಟದ ವಿಮೆ ಬಂದಿಲ್ಲ ಎಂಬುದು ಮಾವು ಬೆಳೆಗಾರರ ಒತ್ತಾಯವಾಗಿದೆ. ಹೀಗಾಗಿ ಡಿ.೮ ರಂದು ಶ್ರೀನಿವಾಸಪುರ ಬಂದ್ ಮಾಡಿ ರೈತರಿಗೆ ನ್ಯಾಯ ಒದಗಿಸುವಂತೆ ಮಾವು ಬೆಳೆಗಾರರು ಒತ್ತಾಯ ಮಾಡಿದ್ದಾರೆ. ಅದರಂತೆ ಮಾವು ಬೆಳೆಗಾರರು ಮತ್ತು ವಿವಿಧ ರೈತಪರ, ಕನ್ನಡಪರ, ದಲಿತಪರ ಹಾಗೂ ಎಲ್ಲ ಜನಪರ ಸಂಘಟನೆಗಳ ಮುಖಂಡರು ಬಂದ್‌ಗೆ ಬೆಂಬಲ ಸೂಚಿಸಿದ್ದಾರೆ.

ಇದನ್ನೂ ಓದಿ | Suicide Case | ಕೃಷಿ ಹೊಂಡದಲ್ಲಿ ಯುವಕನ ಶವ; 1 ದಿನ ಕಳೆದರೂ ಮೃತದೇಹ ಮೇಲೆತ್ತಲು ಪೊಲೀಸರ ಮೀನಮೇಷ

Exit mobile version