Site icon Vistara News

Fasal Bima Yojana | ವಿಮಾ ಕಂಪನಿಗಳ ವಿರುದ್ಧ ಇಂದು ಶ್ರೀನಿವಾಸಪುರ ಬಂದ್; ಶಾಲಾ-ಕಾಲೇಜುಗಳಿಗೆ ರಜೆ

Fasal Bima Yojana

ಕೋಲಾರ: ವಿಮಾ ಕಂಪನಿಗಳಿಂದ ತೋಟಗಾರಿಕೆ ಬೆಳೆಗಾರರಿಗೆ ಬೆಳೆ ವಿಮೆ ಹಣ ನೀಡುವಲ್ಲಿ ಅನ್ಯಾಯವಾಗುತ್ತಿರುವ ಹಿನ್ನೆಲೆಯಲ್ಲಿ ಗುರುವಾರ ಶ್ರೀನಿವಾಸಪುರ ತಾಲೂಕು ಬಂದ್‌ಗೆ ಕರೆ ನೀಡಲಾಗಿದೆ. ಬೆಳಗ್ಗೆಯಿಂದಲೇ ಶ್ರೀನಿವಾಸಪುರದಲ್ಲಿ ಬೃಹತ್ ಪ್ರತಿಭಟನೆಯನ್ನು ಮಾಡಿ ಬಂದ್‌ಗೆ ಸಹಕರಿಸುವಂತೆ ಒತ್ತಾಯಿಸಿ ಪಟ್ಟಣದಲ್ಲಿ ವಿವಿಧ ಸಂಘಟನೆಯವರು ಬೈಕ್ ರ‍್ಯಾಲಿ (Fasal Bima Yojana) ನಡೆಸಿದರು.

ಶ್ರೀನಿವಾಸಪುರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಬಂದ್‌ ಮಾಡಿದ ಹೋರಾಟಗಾರರು

ಮಾವು ಬೆಳೆಗಾರರ ಸಂಯುಕ್ತ ಹೋರಾಟ ಸಮಿತಿ ವತಿಯಿಂದ ಬಂದ್‌ಗೆ ಕರೆ ನೀಡಿದ್ದು, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶ್ರೀನಿವಾಸಪುರ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಬಂದ್ ಮಾಡಲಾಯಿತು. ದೂರದ ಊರಿಗೆ ಹೋಗುವ ಪ್ರಯಾಣಿಕರಿಗೆ ಹಾಗೂ ಶಾಲಾ ವಾಹನ ಸಂಚಾರವಿಲ್ಲದೆ ಪರದಾಡುವಂತಾಗಿದೆ. ಶ್ರೀನಿವಾಸಪುರ ಪಟ್ಟಣದಲ್ಲಿರುವ ಖಾಸಗಿ ಹಾಗೂ ಸರ್ಕಾರಿ ‌ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿತ್ತು.

ಬೀದಿಗಿಳಿದ ರೈತರ ಕೂಗು ಏನು?
ಫಸಲ್ ಬಿಮಾ ಯೋಜನೆಯಡಿ ಖಾಸಗಿ ಕಂಪನಿಗಳಿಗೆ ವಿಮೆ ಹಣ ಕಟ್ಟಿರುವ ರೈತರಿಗೆ ಸರಿಯಾಗಿ ಪರಿಹಾರ ಸಿಗುತ್ತಿಲ್ಲ. ಕೇಂದ್ರ ಸರ್ಕಾರದ ಫಸಲ್ ಬಿಮಾ ಯೋಜನೆ ಕೆಲ ಖಾಸಗಿ ವಿಮಾ ಕಂಪನಿಗಳು ಹಿಡಿತದಲ್ಲಿದೆ. ಇನ್ಶುರೆನ್ಸ್ ಕಟ್ಟಿದ ರೈತರಿಗೆ ೦% ತೋರಿಸಿ ಅನ್ಯಾಯ ಮಾಡುತ್ತಿದ್ದಾರೆ. ಸರ್ಕಾರಗಳೇ ನೇರವಾಗಿ ವಿಮೆ ಕಟ್ಟಿಸಿಕೊಂಡು ನಷ್ಟ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ೬೦೬೫ ಎಕರೆ ಪ್ರದೇಶದಲ್ಲಿ ವಿಮೆ ಕಟ್ಟಲಾಗಿದೆ, ಆದರೆ ಇದುವರೆಗೂ ೧೫೦೦ ಎಕರೆಯಷ್ಟು ಸಹ ಬೆಳೆ ನಷ್ಟದ ವಿಮೆ ಬಂದಿಲ್ಲ ಎಂಬುದು ಮಾವು ಬೆಳೆಗಾರರ ಒತ್ತಾಯ.

ಇದನ್ನೂ ಓದಿ | Gujarat Election results | ಹೀನಾಯ ಸೋಲು: ಕಾಂಗ್ರೆಸ್‌ಗೆ ಅಧಿಕೃತ ವಿರೋಧ ಪಕ್ಷ ಸ್ಥಾನವೂ ಕೈತಪ್ಪುವ ಆತಂಕ

Exit mobile version