Site icon Vistara News

2ನೇ ಮಗನ ಮದುವೆ ಮಾಡಲು, ಮೊದಲ ಮಗನನ್ನು ಕೊಂದ ತಂದೆ; ಹತ್ಯೆ ಬಳಿಕ ಕಥೆ ಕಟ್ಟಿ ಹೇಳಿದ್ದ!

murder accused

ಬೆಳಗಾವಿ: ಎರಡನೇ ಮಗನ ಮದುವೆ ಮಾಡಲು, ಮೊದಲ ಮಗ ಅಡ್ಡಿಯಾಗುತ್ತಿದ್ದಾನೆ ಎಂಬ ಕಾರಣಕ್ಕೆ ಆತನನ್ನು ಹೆತ್ತ ತಂದೆಯೇ ಹತ್ಯೆ ಮಾಡಿದ್ದಾನೆ (Father Killed his Son). ಮೇ ತಿಂಗಳಲ್ಲಿ ಈ ಹತ್ಯೆ ನಡೆದಿತ್ತು. ಈಗ ಹತ್ಯೆ ಮಾಡಿದ್ದು ಹುಡುಗನ ತಂದೆ ಎಂಬ ವಿಷಯ ಹೊರಬಿದ್ದಿದೆ. ತಪ್ಪು ಒಪ್ಪಿಕೊಂಡ ಅಪ್ಪನನ್ನು ಪೊಲೀಸರು ಬಂಧಿಸಿದ್ದಾರೆ. ಹುಕ್ಕೇರಿ ತಾಲೂಕಿನಲ್ಲಿ ಈ ಕ್ರೂರ ಕೃತ್ಯ ನಡೆದಿದ್ದು, ರಾಜಕುಮಾರ್​ ಮಗದುಮ್ ಆರೋಪಿ.

ರಾಜಕುಮಾರ್​​ನ ಮೊದಲ ಮಗ ನಿಖಿಲ್ (24) ಮಾನಸಿಕ ಅಸ್ವಸ್ಥನಾಗಿದ್ದ (Mentally Challenged). ಹುಟ್ಟಿದಾಗಿನಿಂದಲೂ ಹೀಗೆ ಇದ್ದ. ವಯಸ್ಸಿಗೆ ಬಂದರೂ ಅವನಿಗೆ ಮದುವೆ ಮಾಡಲು ಸಾಧ್ಯವಿಲ್ಲ. ಇನ್ನು ಇವನು ಮನೆಯಲ್ಲಿದ್ದರೆ ಎರಡನೇ ಮಗನಿಗೂ ಮದುವೆ ಮಾಡಲು ಸಾಧ್ಯವಿಲ್ಲ. ಮಾನಸಿಕ ಅಸ್ವಸ್ಥ ಇದ್ದ ಮನೆಗೆ ಯಾರೂ ಹೆಣ್ಣು ಕೊಡುವುದಿಲ್ಲ ಎಂದು ಭಾವಿಸಿದ್ದ ರಾಜಕುಮಾರ್​ ಮಗದುಮ್​ ನಿಖಿಲ್​​ನನ್ನು ಹತ್ಯೆ ಮಾಡಿದ್ದಾನೆ. ಮೇ 31ರಂದು ಮಗ ನಿಖಿಲ್​ನನ್ನು ಕರೆದುಕೊಂಡು ಹೋದ ರಾಜಕುಮಾರ್​, ಆತನಿಗೆ ಮೊದಲು ವಿಷ ನೀಡಿದ್ದ. ಬಳಿಕ ಗಿಡವೊಂದಕ್ಕೆ ತಲೆಯನ್ನು ಜಜ್ಜಿ ಕೊಲೆ ಮಾಡಿದ್ದ. ವಾಪಸ್ ಬಂದು, ‘ನಿಖಿಲ್ ಬೆಳಗಾವಿ ಬಸ್​ ನಿಲ್ದಾಣದಲ್ಲಿ ಕಾಣೆಯಾದ’ ಎಂದು ಕಥೆ ಕಟ್ಟಿದ್ದ.

ಇದನ್ನೂ ಓದಿ: ಸದಾ ಕಿರುಕುಳ, ಊಟವೂ ಇಲ್ಲ; ಪತಿ ಕೊಡುವ ಹಿಂಸೆಯಿಂದ ನೊಂದು ಟೆಕ್ಕಿ ಆತ್ಮಹತ್ಯೆ

ಬಳಿಕ ನಿಖಿಲ್ ಶವ ಪತ್ತೆಯಾಗಿತ್ತು. ತನಿಖೆ ಆರಂಭಿಸಿದ ಪೊಲೀಸರು ನಿಖಿಲ್ ಚಿಕ್ಕಪ್ಪ ಸಂತೋಷ್ ಮಗದುಮ್​​ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದರು. ಈ ವೇಳೆ ಕೊಲೆಯನ್ನು ಅಣ್ಣನೇ ಮಾಡಿದ್ದಾಗಿ ಸಂತೋಷ್ ಮಗದುಮ್​ ಪೊಲೀಸರಿಗೆ ದೂರು ನೀಡಿದ್ದರು. ಅದರ ಅನ್ವಯ ರಾಜಕುಮಾರ್ ಮಗದುಮ್​​ನನ್ನು ಕರೆತಂದು ವಿಚಾರಣೆ ನಡೆಸಲು ಶುರು ಮಾಡಿದಾಗ ಆತ ಒಂದೊಂದೇ ವಿಷಯ ಬಾಯ್ಬಿಟ್ಟಿದ್ದಾನೆ. ಮಗನನ್ನು ಕೊಂದಿದ್ದು, ತಾನು ಯಾಕೆ ಕೊಂದೆ ಎಂಬಲ್ಲಿಂದ ಹಿಡಿದು ಎಲ್ಲ ವಿವರಗಳನ್ನೂ ಬಿಟ್ಟಿಚ್ಚಿದ್ದಾನೆ.

Exit mobile version