ಬೆಂಗಳೂರು: ತಮಿಳುನಾಡು ಸರ್ಕಾರದ ʼಶ್ರೇಷ್ಠ ಅನುವಾದಕರು ಪ್ರಶಸ್ತಿʼ ಪುರಸ್ಕೃತರಾದ ಲೇಖಕಿ ಡಾ. ತಮಿಳ್ ಸೆಲ್ವಿ ಅವರಿಗೆ ಶ್ರೀ ವಿ. ಸೋಮಣ್ಣ ಪ್ರತಿಷ್ಠಾನದಿಂದ ಸನ್ಮಾನ (V Somanna Pratistana) ಹಾಗೂ 2023ರ ಕ್ಯಾಲೆಂಡರ್ ಅನಾವರಣ ಸಮಾರಂಭವನ್ನು ಜನವರಿ 1ರಂದು ಬೆಳಗ್ಗೆ 9 ಗಂಟೆಗೆ ಬೆಂಗಳೂರಿನ ವಿಜಯನಗರದ 2ನೇ ಮುಖ್ಯರಸ್ತೆಯ ವಸತಿ ಸಚಿವ ವಿ. ಸೋಮಣ್ಣ ಅವರ ಗೃಹ ಕಚೇರಿಯಲ್ಲಿ ಆಯೋಜಿಸಲಾಗಿದೆ.
2023ರ ಕ್ಯಾಲೆಂಡರ್ ಅನ್ನು ವಸತಿ ಹಾಗೂ ಮೂಲ ಸೌಕರ್ಯ ಸಚಿವ ವಿ. ಸೋಮಣ್ಣ ಅವರು ಅನಾವರಣ ಮಾಡಲಿದ್ದಾರೆ. ತಮಿಳುನಾಡು ಸರ್ಕಾರದ ಶ್ರೇಷ್ಠ ಅನುವಾದಕರು ಪ್ರಶಸ್ತಿ ಪಡೆದಿರುವ ಮದ್ರಾಸ್ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ನಿರ್ದೇಶಕಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ ತಮಿಳುನಾಡು ರಾಜ್ಯ ಘಟಕದ ಅಧ್ಯಕ್ಷೆ, ಉಭಯ ಭಾಷಾ ಲೇಖಕಿ ಡಾ. ತಮಿಳ್ ಸೆಲ್ವಿ ಅವರಿಗೆ ಸನ್ಮಾನ ಮಾಡಲಾಗುತ್ತದೆ.
ಖ್ಯಾತ ವಿಮರ್ಶಕ, ಬಿ.ಎಂ.ಶ್ರೀ.ಪ್ರತಿಷ್ಠಾನದ ಅಧ್ಯಕ್ಷ ಡಾ. ಬೈರಮಂಗಲ ರಾಮೇಗೌಡ ಅಭಿನಂದನಾ ನುಡಿಗಳನ್ನಾಡಲಿದ್ದಾರೆ. ಶ್ರೀ ವಿ. ಸೋಮಣ್ಣ ಪ್ರತಿಷ್ಠಾನದ ಅಧ್ಯಕ್ಷೆ ಶೈಲಜ ಸೋಮಣ್ಣ, ಕಾರ್ಯಾಧ್ಯಕ್ಷ ಡಾ. ಅರುಣ್ ಸೋಮಣ್ಣ, ಕೋಶಾಧ್ಯಕ್ಷ ಡಾ. ಬಿ.ಎಸ್. ನವೀನ್, ಪ್ರಧಾನ ಕಾರ್ಯದರ್ಶಿ ಪಾಲನೇತ್ರ, ಕಾರ್ಯದರ್ಶಿ ಬಿ.ಎಸ್.ದಿವ್ಯ ಅವಿನಾಶ್ ಸೇರಿ ಹಲವು ಗಣ್ಯರು ಉಪಸ್ಥಿತರಿರುತ್ತಾರೆ.
ಇದನ್ನೂ ಓದಿ | New Year 2023 | ಹೊಸ ವರ್ಷಾಚರಣೆಗೆ ನಂದಿ ಗಿರಿಧಾಮ, ಮುತ್ತತ್ತಿ, ಬಲಮುರಿ ಸೇರಿ ಇನ್ನಷ್ಟು ಕಡೆ ಪ್ರವೇಶ ನಿರ್ಬಂಧ