Site icon Vistara News

ಆರ್.ಬ್ರೂಸ್ ಮೆರಿಫೀಲ್ಡ್ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಪಿ.ಬಲರಾಮ್‌ಗೆ ಸನ್ಮಾನ

ಪಿ.ಬಲರಾಮ್‌ಗೆ

ಬೆಂಗಳೂರು: ಅಮೆರಿಕನ್ ಪೆಪ್ಟೈಡ್ ಸೊಸೈಟಿಯಿಂದ ಪ್ರತಿಷ್ಠಿತ ಆರ್.ಬ್ರೂಸ್ ಮೆರಿಫೀಲ್ಡ್ ಪ್ರಶಸ್ತಿ ಪಡೆದ ವಿಜ್ಞಾನಿ ಪಿ. ಬಲರಾಮ್ ಅವರನ್ನು ಪ್ರಯೋಗ ಇನ್‌ಸ್ಟಿಟ್ಯೂಟ್ ಆಫ್ ಎಜುಕೇಶನ್ ರಿಸರ್ಚ್ ಸಂಸ್ಥೆಯಿಂದ ಶನಿವಾರ ಸನ್ಮಾನಿಸಲಾಯಿತು.

ನಗರದ ಆರ್‌ವಿ ಶಿಕ್ಷಕರ ಕಾಲೇಜು ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಜ್ಞಾನಿ ಪಿ. ಬಲರಾಮ್ ಮಾತನಾಡಿ, ನನ್ನದೇ ಸಂಶೋಧನಾ ಅನುಭವವನ್ನು ಸಭಿಕರೊಂದಿಗೆ ಹಂಚಿಕೊಳ್ಳುತ್ತಿರುವುದು ಇದೇ ಮೊದಲು. ಪ್ರಯೋಗ ನಿಜಕ್ಕೂ ಒಂದು ಅತ್ಯುತ್ತಮ ಸಂಸ್ಥೆಯಾಗಿದ್ದು, ವಿಜ್ಞಾನ ಹಾಗೂ ವೈಜ್ಞಾನಿಕ ಅಧ್ಯಯನಗಳ ಬಗ್ಗೆ ಆಸಕ್ತಿ ಇರುವವರನ್ನು ಒಂದೆಡೆ ಸೇರಿಸಿರುವುದು ನಿಜಕ್ಕೂ ಶ್ಲಾಘನೀಯ ಎಂದರು.

ಇದುವರೆಗೆ ಆರ್.ಬ್ರೂಸ್ ಮೆರಿಫೀಲ್ಡ್ ಪ್ರಶಸ್ತಿ ಪ್ರಶಸ್ತಿ ಪ್ರಪಂಚದಲ್ಲಿ 13 ವಿಜ್ಞಾನಿಗಳಿಗೆ ದೊರೆತಿದ್ದು, ಈ ಪ್ರಶಸ್ತಿ ಪಡೆದ ಏಕೈಕ ಭಾರತೀಯ ವಿಜ್ಞಾನಿ ಬಲರಾಮ್‌ ಅವರಾಗಿದ್ದಾರೆ.

ಇದನ್ನೂ ಓದಿ | ರಾಘವೇಂದ್ರ ಸ್ವಾಮಿಗಳ ಪೂರ್ವಾರಾಧನೆ | ರಾಧಿಕಾ ಕಾಖಂಡಿಕಿ ದಾಸವಾಣಿ ಕಾರ್ಯಕ್ರಮ ಯಶಸ್ವಿ

ಕಾರ್ಯಕ್ರಮದ ಅಧ್ಯಕ್ಷ ವಹಿಸಿ ಮಾತನಾಡಿದ ನಿವೃತ್ತ ನ್ಯಾಯಮೂರ್ತಿ ಡಾ.ಎಂ.ಎನ್.ವೆಂಕಟಾಚಲಯ್ಯ ಮಾತನಾಡಿ, ಪ್ರೊಫೆಸರ್ ಬಲರಾಮ್ ನಮ್ಮ ದೇಶದ ಆಸ್ತಿ. ವಿಜ್ಞಾನಿಗಳು ನಮ್ಮ ದೇಶಕ್ಕೆ ಆಧಾರ ಸ್ತಂಭವಾಗಿದ್ದು, ಇಂತಹ ಜ್ಞಾನಿಗಳಿಂದಲೇ ಇಂಡಿಯನ್ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಸೈನ್ಸ್(ಐಐಎಸ್‌ಸಿ) ಪ್ರಪಂಚದಲ್ಲಿ ಮನ್ನಣೆ ಸಿಕ್ಕಿದೆ. ಈ ಹಿಂದಿನ ಕಾಂಗ್ರೆಸ್‌ ಸರ್ಕಾರ ಲೋಕಾಯುಕ್ತ ಸಂಸ್ಥೆಗೆ ಪರ್ಯಾಯವಾಗಿ ಎಸಿಬಿ ರಚಿಸಿ ದೊಡ್ಡ ತಪ್ಪು ಮಾಡಿತ್ತು. ‌‌ಆ ತಪ್ಪುಗಳನ್ನು ಹೈಕೋರ್ಟ್‌ ಸಮರ್ಥವಾಗಿ ಸರಿಪಡಿಸಿದೆ. ಎಸಿಬಿಯನ್ನು ಪುನಃ ಲೋಕಾಯುಕ್ತ ವ್ಯಾಪ್ತಿಗೆ ಕೊಟ್ಟಿರುವುದು ತುಂಬಾ ಒಳ್ಳೆಯ ವಿಷಯ ಎಂದರು. ಕಾರ್ಯಕ್ರಮದಲ್ಲಿ ಎಚ್.ಎನ್.ನಾಗರಾಜ್, ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಇದ್ದರು.

ಅಮೇರಿಕನ್ ಪೆಪ್ಟೈಡ್ ಸೊಸೈಟಿಯಿಂದ ಪ್ರತಿಷ್ಠಿತ ಆರ್.ಬ್ರೂಸ್ ಮೆರಿಫೀಲ್ಡ್ ಪ್ರಶಸ್ತಿ 1997ರಲ್ಲಿ ಆರಂಭವಾಗಿದ್ದು, ಎರಡು ವರ್ಷಕ್ಕೊಮ್ಮೆ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ. ಇದುವರೆಗೆ ಈ ಪ್ರಶಸ್ತಿ ಪ್ರಪಂಚದಲ್ಲಿ 13 ವಿಜ್ಞಾನಿಗಳಿಗೆ ದೊರೆತಿದ್ದು, ನಮ್ಮ ದೇಶದಲ್ಲಿ ವಿಜ್ಞಾನಿ ಬಲರಾಮ ಅವರಿಗೆ ಮಾತ್ರ ಈ ಪ್ರಶಸ್ತಿ ಸಿಕ್ಕಿದೆ.

ಇದನ್ನೂ ಓದಿ | ಅರವಿಂದರ ವಿಚಾರಧಾರೆಯನ್ನು ನಾವೆಲ್ಲ ಪಾಲಿಸಬೇಕಿದೆ: ಕಾ ಶ್ರೀ ನಾಗರಾಜ

Exit mobile version