Site icon Vistara News

Fire Accident: ಗ್ಯಾರೇಜಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸುಟ್ಟು ಕರಕಲಾದ ಬೈಕ್‌ಗಳು; ಲಕ್ಷಾಂತರ ರೂ. ನಷ್ಟ

Fire accident ‌ Bike Garage yallapura

#image_title

ಯಲ್ಲಾಪುರ: ಪಟ್ಟಣದ ಕೆ.ಬಿ ರಸ್ತೆಯಲ್ಲಿರುವ ಪುನೀತ್ ಗ್ಯಾರೇಜಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ (Fire Accident), ಬೈಕ್‌ಗಳು ಸುಟ್ಟು ಕರಕಲಾಗಿರುವ ಘಟನೆ ನಡೆದಿದೆ.

#image_title

ಮಯೂರು ಕೂದಳೆ ಮಾಲೀಕತ್ವದ ಈ ಅಂಗಡಿಯನ್ನು ರಾಘು ಎಂಬುವವರು ಬಾಡಿಗೆ ಆಧಾರದಲ್ಲಿ ಪುನೀತ್ ಎಂಬ ಹೆಸರಿನಲ್ಲಿ ಗ್ಯಾರೇಜ್ ನಡೆಸುತ್ತಿದ್ದರು. ರಾಘು ಅವರಿಗೆ ಲಕ್ಷಾಂತರ ರೂ. ‌ನಷ್ಟವಾಗಿದೆ. ಅದೃಷ್ವವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಅಗ್ನಿಶಾಮಕ ದಳದವರು ತಕ್ಷಣ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದಾಗಿ ಬೆಂಕಿಗೆ ಆಹುತಿಯಾದ ಅಂಗಡಿಗೆ ಅಂಟಿಕೊಂಡಂತಿರುವ ಅಕ್ಕ ಪಕ್ಕದ ಮನೆ, ಅಂಗಡಿಗಳಿಗೆ ಬೆಂಕಿ ಹರಡಿ ಹೆಚ್ಚಿನ ಅನಾಹುತ ಆಗುವುದು ತಪ್ಪಿಸಿದಂತಾಗಿದೆ.

ಇದನ್ನೂ ಓದಿ: IND VS AUS: ಜಡೇಜಾ ಬೆರಳಿಗೆ ಹಚ್ಚಿಕೊಂಡಿದ್ದೇನು?; ಸ್ಪಷ್ಟೀಕರಣ ನೀಡಿದ ಬಿಸಿಸಿಐ

Exit mobile version