Site icon Vistara News

Fire Accident | ತ್ಯಾಗಿ ಸರ್ಕಲ್ ಪ್ಯಾಲೇಸ್ ಮಾಲ್‌ನಲ್ಲಿ ಅಗ್ನಿ ಅವಘಡ : ಗಾಜಿನ ಸಾಮಗ್ರಿಗಳು ಬೆಂಕಿಗಾಹುತಿ

Fire Accident

ಬೆಂಗಳೂರು : ಮಧ್ಯರಾತ್ರಿ 12.30ರ ಸುಮಾರಿಗೆ ಶಿವಾಜಿನಗರದ ತ್ಯಾಗಿ ಸರ್ಕಲ್ ಪ್ಯಾಲೇಸ್ ಮಾಲ್‌ನಲ್ಲಿ ಅಗ್ನಿ ಅವಘಡ (Fire Accident) ಸಂಭವಿಸಿದೆ. ಪ್ಯಾಲೇಸ್ ಮಾಲ್‌ನಲ್ಲಿ 40-50 ಅಂಗಡಿಗಳು ಇದ್ದು, ಮೊದಲಿಗೆ ಮಾಲ್‌ನಲ್ಲಿದ್ದ ಅಲ್ಫಲಾಹ್ (ALFFALAH) ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ. ಸರಿಯಾದ ಸಮಯಕ್ಕೆ ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿದ್ದರಿಂದ ಭಾರಿ ಅನಾಹುತ ತಪ್ಪಿದೆ. ಕೆಲವು ಅಂಗಡಿಗಳಲ್ಲಿ ಜನರು ಮಲಗಿದ್ದರೂ ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.…

ಪ್ಯಾಲೇಸ್ ಮಾಲ್‌ನಲ್ಲಿ ಬಟ್ಟೆ ಅಂಗಡಿ, ಜ್ಯುವೆಲರಿ, ಗಿಫ್ಟ್ ಸೆಂಟರ್ ಹೆಚ್ಚಾಗಿ ಇದ್ದು, ಸುಮಾರು 50ಕ್ಕೂ ಹೆಚ್ಚು ಮಳಿಗೆ ಇರುವ ಪ್ಯಾಲೇಸ್ ಮಹಲ್ ಇದಾಗಿದೆ. ಮೊದಲು ಬೆಂಕಿ ಕಾಣಿಸಿಕೊಂಡಾಗ ಗಾಜಿನ ಸಾಮಗ್ರಿಗಳೆಲ್ಲವೂ ಬೆಂಕಿಗಾಹುತಿ ಆಗಿವೆ. ಗಾಜುಗಳು ಒಡೆದ ಶಬ್ದಕ್ಕೆ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ನಂತರ ಸ್ಥಳೀಯರು ಅಗ್ನಿ ಶಾಮಕಕ್ಕೆ ಕರೆ ಮಾಡಿದ್ದಾರೆ.

ಇದನ್ನೂ ಓದಿ | Egyptian Church Fire | ಈಜಿಪ್ಟ್​ ಚರ್ಚ್​​​ನಲ್ಲಿ ಭೀಕರ ಅಗ್ನಿದುರಂತ; 41 ಮಂದಿ ದುರ್ಮರಣ

ಶಿವಾಜಿನಗರ ಹಾಗೂ ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿದ್ದಾರೆ. ನಂತರ ಪ್ಯಾಲೇಸ್ ಮಹಲ್‌ನ ಸುತ್ತಲೂ ನೆರೆದಿದ್ದ ಜನರನ್ನು ದೂರ ಕಳುಹಿಸಿ ನಿಯಂತ್ರಣ ಮಾಡಿದ್ದಾರೆ. ಶಾರ್ಟ್‌ ಸರ್ಕ್ಯುಟ್ ನಿಂದ ಅಗ್ನಿ ಅವಘಡ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ. ಎರಡು ಅಗ್ನಿಶಾಮಕ ದಳದ ವಾಹನದಿಂದ ಕಾರ್ಯಚರಣೆ ಆಗಿದ್ದು, ಈಗಲೂ ಪ್ಯಾಲೇಸ್ ಮಾಲ್‌ನಲ್ಲಿ ಹೊಗೆ ತುಂಬಿಕೊಂಡಿದೆ. ಹಲಸೂರು ಎಸಿಪಿ ಕುಮಾರ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ | ಮಧ್ಯಪ್ರದೇಶದ ಖಾಸಗಿ ಆಸ್ಪತ್ರೆಯಲ್ಲಿ ಅಗ್ನಿ ದುರಂತ; 10 ರೋಗಿಗಳ ದುರ್ಮರಣ

Exit mobile version