ಹೊನ್ನಾವರ: ಹೆಸರಾಂತ ರಂಗ ನಟ, ವರ್ಣಾಲಂಕಾರ ಪ್ರವೀಣರಾದ ದಾಮೋದರ ನಾಯ್ಕ (ದಾಮು) ಇವರ ಕಡ್ಲೆಯಲ್ಲಿರುವ ರಂಗ ಭೂಮಿಕಾ ಅಲಂಕಾರ ಸಾಮಗ್ರಿಗಳಿಗೆ ಅಕಸ್ಮಾತ್ ಬೆಂಕಿ ತಗುಲಿ (Fire Accident) 15 ಲಕ್ಷ ರೂಪಾಯಿ ಅಂದಾಜಿನ ಸಾಮಗ್ರಿಗಳು ಪೂರ್ತಿ ಸುಟ್ಟು ಹೋಗಿದ್ದು, ಇನ್ನಷ್ಟು ಸಾಮಗ್ರಿ ಅರ್ಧ ಸುಟ್ಟಿವೆ.
ಜಿಲ್ಲೆಯಲ್ಲಿ ಮಾತ್ರವಲ್ಲ ಹಂಪೆ ಉತ್ಸವ ಮೊದಲಾದ ಕಡೆ ಸಭಾ ವೇದಿಕೆ ಮತ್ತು ಸಭಾಗೃಹದ ಅಲಂಕಾರಕ್ಕೆ ಫೈಬರ್‌ನಿಂದ ತಯಾರಿಸಿದ ಅರಮನೆ, ಕಂಬಗಳು, ಆನೆ, ಮೊದಲಾದವುಗಳನ್ನು ಮತ್ತು ಇತರ ಅಲಂಕಾರಿಕ ವಸ್ತುಗಳನ್ನು ಬಳಸಿ ಸುಂದರ ವೇದಿಕೆ ಸಿದ್ಧಪಡಿಸುತ್ತಿದ್ದ ದಾಮೋದರ ನಾಯ್ಕ 10-15 ಜನರಿಗೆ ಕೆಲಸ ಕೊಟ್ಟಿದ್ದರು. ಆದಾಯ ತರುವ ಈ ಸೀಜನ್‌ನಲ್ಲಿ ತಮ್ಮ ದುಡಿಮೆಯ ಉಳಿತಾಯದ ಬಂಡವಾಳವೆಲ್ಲ ಬೆಂಕಿಗಾಹುತಿಯಾಯಿತು ಎಂದು ದಾಮೋದರ ನಾಯ್ಕ ನೊಂದುಕೊಂಡಿದ್ದಾರೆ. ಬೆಂಕಿ ಹೊತ್ತಿಕೊಂಡ ತಕ್ಷಣ ತರಗೆಲೆಯಂತೆ ವಸ್ತುಗಳು ಉರಿದು ಹೋದವು. ಪೊಲೀಸ್ ಮತ್ತು ಅಗ್ನಿಶಾಮಕ ದಳದವರು ಸಾರ್ವಜನಿಕರ ಸಹಕಾರದ ಮೇರೆಗೆ ಬೆಂಕಿ ನಂದಿಸಿದ್ದರೂ ಹಲವು ವಸ್ತುಗಳು ಕರಕಲಾಗಿವೆ.
ಇದನ್ನೂ ಓದಿ: Lokayukta Raid: ರಾಣೆಬೆನ್ನೂರು ಪಿಎಸ್‌ಐ, ವಾಹನ ಚಾಲಕ ಲೋಕಾಯುಕ್ತ ಬಲೆಗೆ; 40 ಸಾವಿರ ರೂ. ಲಂಚ ಪಡೆಯುವಾಗ ಸಿಕ್ಕಿಬಿದ್ದರು