Site icon Vistara News

Fire Accident | ಬೆಳಗಾವಿಯಲ್ಲಿ ಆಕಸ್ಮಿಕ ಬೆಂಕಿಗೆ ಹೊತ್ತಿ ಉರಿದ ಮನೆ; ಅಪಾರ ಹಾನಿ, ಪ್ರಾಣಾಪಾಯದಿಂದ ಪಾರು!

Fire Accident

ಬೆಳಗಾವಿ: ಖಾನಾಪುರ ತಾಲೂಕಿನ ನಂದಗಡ ಗ್ರಾಮದಲ್ಲಿ ಮಯೂರ ಕಾಪಸೆ ಎಂಬುವವರಿಗೆ ಸೇರಿದ ಮನೆಗೆ ಸೋಮವಾರ (ಸೆ.12) ಆಕಸ್ಮಿಕ ಬೆಂಕಿ (Fire Accident) ತಗುಲಿ ಹೊತ್ತಿ ಉರಿದಿದ್ದು, ಅಪಾರ ಹಾನಿ ಸಂಭವಿಸಿದೆ.

ಮುಖ್ಯ ಬಜಾರ್‌ನಲ್ಲೇ ಮನೆ ಇದ್ದು ಅದೃಷ್ವವಶಾತ್‌ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ನಸುಕಿನ ಜಾವ 3 ಗಂಟೆಗೆ ಅನಾಹುತ ಸಂಭವಿಸಿದ್ದು, ಮನೆಯವರೆಲ್ಲರೂ ಹೊರಗೆ ಓಡಿ ಬಂದು ಪ್ರಾಣ ರಕ್ಷಣೆ ಮಾಡಿಕೊಂಡಿದ್ದಾರೆ. ಮನೆ ಮುಂದೆಯೇ ಮಯೂರ ಕಾಪಸೆ ಕಂಪ್ಯೂಟರ್ ಶಾಪ್ ನಡೆಸುತ್ತಿದ್ದರು.

ಇದನ್ನೂ ಓದಿ | Ev Scooter: ಬೆಂಕಿ ಅವಘಡಗಳಿಗೆ ಬ್ಯಾಟರಿ ಬಿಸಿಯಾಗುವುದೇ ಕಾರಣ

ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲಿ ಇಡೀ ಮನೆ ಧಗ ಧಗನೆ ಉರಿದಿದೆ. ನೀರು ಎರಚಿ ಬೆಂಕಿ ನಂದಿಸಲು ಸ್ಥಳೀಯರು ಹರಸಾಹಸಪಟ್ಟಿದ್ದಾರೆ. ಬಳಿಕ ಸ್ಥಳಕ್ಕೆ ಬಂದ ಖಾನಾಪುರ ಅಗ್ನಿಶಾಮಕ ಠಾಣೆ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಮನೆಯಲ್ಲಿದ್ದ ಪೀಠೋಪಕರಣ, ಕಂಪ್ಯೂಟರ್ ಸೇರಿ ಅಂದಾಜು 4 ಲಕ್ಷಕ್ಕೂ ರೂಪಾಯಿಗೂ ಅಧಿಕ ಹಾನಿ ಆಗಿದೆ. ನಂದಗಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದುರ್ಘಟನೆ ಸಂಭವಿಸಿದೆ.

ಇದನ್ನೂ ಓದಿ | Fire Accident | ರಿಚ್ಮಂಡ್ ಟೌನ್ ಫ್ಯಾಮಿಲಿ ಸೂಪರ್ ಮಾರ್ಟ್‌ನಲ್ಲಿ ಅಗ್ನಿ ಅವಘಡ : ಪೀಠೋಪಕರಣ ಭಸ್ಮ

Exit mobile version