ಆನೇಕಲ್: ಬೆಂಗಳೂರು ಹೊರವಲಯದ ಆನೇಕಲ್ ಪಟ್ಟಣದ ಕೋರ್ಟ್ ಪಕ್ಕದಲ್ಲಿನ ವಸತಿ ಗೃಹದಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ (Fire Accident) ಹೊತ್ತಿ ಉರಿದಿದೆ. ಬುಧವಾರ (ಆ.24) ಬೆಳಗ್ಗೆ 8 ಗಂಟೆ ಸಮಾರಿಗೆ ಅವಘಡ ಸಂಭವಿಸಿದೆ.
ಪೊಲೀಸರ ಹಳೆಯ ವಸತಿಗೃಹವಾಗಿದೆ ಎನ್ನಲಾಗಿದೆ. ವಸತಿ ಗೃಹದ ಕೆಳಭಾಗದ ಮನೆಯಲ್ಲಿ ಯಾರು ವಾಸ ಇರಲಿಲ್ಲ ಎನ್ನಲಾಗಿದೆ. ಮನೆಯ ಒಳಗೆ ಕೋವಿಡ್ ಸಮಯದಲ್ಲಿ ಬಳಿಸಿದ್ದ ಹಳೆಯ ಬೆಡ್ಗಳನ್ನು ಹಾಕಲಾಗಿತ್ತು. ಕಿಡಿಗೇಡಿಗಳು ಬೆಂಕಿ ಹಚ್ಚಿರುವಂತಹ ಸಾಧ್ಯತೆ ಇದು ಎಂದೂ ಶಂಕಿಸಲಾಗಿದೆ.
ವಸತಿಗೃಹದಲ್ಲಿ ದಟ್ಟವಾದ ಬೆಂಕಿ ಹಾಗೂ ಹೊಗೆ ಆವರಿಸಿದ್ದು, ಸ್ಥಳಕ್ಕೆ ಅಗ್ನಿಶಾಮಕದಳ ಸಿಬ್ಬಂದಿ ಭೇಟಿ ನೀಡಿದ್ದಾರೆ. ಬೆಂಕಿಯನ್ನು ನಂದಿಸಲು ಹರಸಾಹಸಪಟ್ಟಿದ್ದಾರೆ.
ಇದನ್ನೂ ಓದಿ | Fire Accident | ತ್ಯಾಗಿ ಸರ್ಕಲ್ ಪ್ಯಾಲೇಸ್ ಮಾಲ್ನಲ್ಲಿ ಅಗ್ನಿ ಅವಘಡ : ಗಾಜಿನ ಸಾಮಗ್ರಿಗಳು ಬೆಂಕಿಗಾಹುತಿ