Site icon Vistara News

Fire Accident: ಕೊಪ್ಪಳ ಗೋಶಾಲೆಯಲ್ಲಿದ್ದ ಹುಲ್ಲಿನ ಬಣವೆಗೆ ಬೆಂಕಿ ಹಾಕಿದ ದುಷ್ಕರ್ಮಿಗಳು; ಬೀದರ್‌ನಲ್ಲಿ ಹೊತ್ತಿ ಉರಿದ ಅರಣ್ಯ

Miscreants set fire to stack of paddy straw stored at Koppal gaushala and Forest fire breaks out in Bidar

Miscreants set fire to stack of paddy straw stored at Koppal gaushala and Forest fire breaks out in Bidar

ಬೀದರ್/ಕೊಪ್ಪಳ: ಗೋಶಾಲೆಗೆ ಸಂಗ್ರಹಿಸಿದ್ದ ಭತ್ತದ ಹುಲ್ಲಿನ ಬಣವೆಗೆ ದುಷ್ಕರ್ಮಿಗಳು ಬೆಂಕಿ (Fire Accident) ಹಾಕಿರುವ ಘಟನೆ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಆರ್ಹಾಳ ಗ್ರಾಮದಲ್ಲಿ ನಡೆದಿದೆ. ಅಪಾರ ಪ್ರಮಾಣದ ಭತ್ತದ ಹುಲ್ಲು ಸುಟ್ಟು ಭಸ್ಮವಾಗಿದ್ದು, ಸುಮಾರು 10 ಎಕರೆಗಳಲ್ಲಿ ಬೆಳೆದಿದ್ದ ಭತ್ತದ ಹುಲ್ಲನ್ನು ಸಂಗ್ರಹಿಸಿದ್ದರು.

ಗೋಶಾಲೆಯಲ್ಲಿ ಸಂಗ್ರಹಿಸಿದ್ದ ಭತ್ತದ ಹುಲ್ಲು ಬೆಂಕಿಗಾಹುತಿ

ಭರತ ಭೂಮಿ ಸೇವಾ ಟ್ರಸ್ಟ್ ಹೇರೂರು ಇವರ ನೇತೃತ್ವದಲ್ಲಿ ಗೋಶಾಲೆ ನಡೆಯುತ್ತಿತ್ತು. ಗೋಸಂರಕ್ಷಣಾ ಕೇಂದ್ರ ಸ್ಥಾಪಿಸಿ ಸುಮಾರು 70ಕ್ಕೂ ಹೆಚ್ಚು ಆಕಳುಗಳ ರಕ್ಷಣೆ ಮಾಡಲಾಗಿತ್ತು. ಹುಲ್ಲು ಸುಟ್ಟು ಭಸ್ಮವಾಗಿದ್ದರಿಂದ ಮೇವಿಲ್ಲದೆ ಗೋವುಗಳು ಪರದಾಡಬೇಕಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಗೋಶಾಲೆ ಮಾಲೀಕರು ಆಗ್ರಹಿಸಿದ್ದಾರೆ.

ಕ್ಷಣಾರ್ಧದಲ್ಲಿ ಹೊತ್ತಿ ಉರಿದ ಮೀಸಲು ಅರಣ್ಯ ಪ್ರದೇಶ

ಬೀದರ್‌ ತಾಲೂಕಿನ ಹೊನ್ನಿಕೇರಿ ಗ್ರಾಮದ ಬಳಿ ಇರುವ ಮೀಸಲು ಅರಣ್ಯ ಪ್ರದೇಶದಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಏಕಾಏಕಿ‌ ಅರಣ್ಯ ಪ್ರದೇಶ ಹೊತ್ತಿ ಉರಿದಿದೆ. ಸುಮಾರು ಎರಡು ಎಕರೆಯಷ್ಟು ಪ್ರದೇಶದಲ್ಲಿ ಬೆಂಕಿ‌ ಜ್ವಾಲೆ ಹರಡಿದೆ.

ಮೀಸಲು ಅರಣ್ಯ ಪ್ರದೇಶದಲ್ಲಿ ಆಕಸ್ಮಿಕ ಬೆಂಕಿ ಅವಘಡ

ಇದನ್ನೂ ಓದಿ: kidney disease: ಕೊರೊನಾ ಕಾಣಿಸಿಕೊಂಡವರಲ್ಲಿ ಕಾಡುತ್ತಿದೆ ಕಿಡ್ನಿ ಸಮಸ್ಯೆ; ನಿರ್ಲಕ್ಷ್ಯ ಮಾಡಿದ್ರೆ ಅಪಾಯ ಗ್ಯಾರಂಟಿ

ವಿಷಯ ತಿಳಿದು ಸ್ಥಳಕ್ಕಾಗಿಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಡಬೇಕಾಯಿತು. ಸೋಮವಾರ ಸಂಜೆ ಅರಣ್ಯ ಪ್ರದೇಶದಲ್ಲಿ ಆಕಸ್ಮಿಕ ಬೆಂಕಿ ತಗಲಿತ್ತು.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version