Site icon Vistara News

Fire tragedy : ಹಂಪಿಯ ಅಕ್ಕ-ತಂಗಿಯರ ಗುಡ್ಡದಲ್ಲಿ ಬೆಂಕಿ, ಧಗಧಗನೆ ಹೊತ್ತಿ ಉರಿಯಿತು ಕುರುಚಲು ಕಾಡು

Fire at Hampi

#image_title

ಹೊಸಪೇಟೆ: ವಿಶ್ವ ಪಾರಂಪರಿಕ ತಾಣ ಹಂಪೆಯ ರಾಜ ಮಾನ್ಯರ ವಸತಿ ಗೃಹಗಳಿಗೆ ಹೊಂದಿಕೊಂಡಂತೆ ಇರುವ ರಾಜ್ಯ ಪುರಾತತ್ವ ಇಲಾಖೆಯ ಅಧೀನದಲ್ಲಿರುವ ಹಂಪಿ ಪರಿಸರ ಬೆಂಕಿಯಿಂದ (Fire tragedy) ಸಂಜೆ ವೇಳೆ ಹೊತ್ತಿ ಉರಿದಿದೆ.

ಕಮಲಾಪುರದಿಂದ ಹಂಪಿಗೆ ಹೋಗುವ ಮಾರ್ಗದಲ್ಲಿನ ಅಕ್ಕ – ತಂಗಿಯರ ಗುಡ್ಡದ ಸಮೀಪ ಕುರುಚಲು ಕಾಡಿಗೆ ಬೆಂಕಿ ಹೊತ್ತಿಕೊಂಡು ಧಗಧಗನೆ ಉರಿದಿದೆ.

ಬಿಸಿಲಿನಿಂದ ಕುರುಚಲು ಕಾಡು ಒಣಗಿ ಹೋಗಿದೆ. ಹೀಗಾಗಿ ಬೆಂಕಿ ಗಾಳಿಗೆ ಎಲ್ಲೆಡೆ ಹರಡಿದೆ. ಅಕ್ಕ – ತಂಗಿಯರ ಗುಡ್ಡದಲ್ಲಿನ ಕೋಟೆ ಗೋಡೆ ಹಾಗೂ ಪ್ರವೇಶ ದ್ವಾರಕ್ಕೆ ಕಿಡಿಗೇಡಿಗಳು ಬೆಂಕಿಯನ್ನು ಹಚ್ಚಿದ್ದಾರೆ ಎನ್ನಲಾಗ್ತಿದೆ. ಇದರಿಂದ ಕೋಟೆ ಗೋಡೆ ಹಾಗೂ ಪ್ರವೇಶ ದ್ವಾರಕ್ಕೆ ಹಾನಿ ಸಂಭವಿಸುವ ಸಾಧ್ಯತೆ ಇದ್ದುದರಿಂದ ವಿಜಯನಗರ ಸ್ಮಾರಕ ಸಂಸ್ಕೃತಿ ಸಂರಕ್ಷಣಾ ಸೇನೆ ವತಿಯಿಂದ ಬೆಂಕಿಯನ್ನು ನಂದಿಸಲಾಗಿದೆ. ವಿಜಯನಗರ ಸ್ಮಾರಕ ಸಂಸ್ಕೃತಿ ಸಂರಕ್ಷಣಾ ಸೇನೆಯಿಂದ ವಿಷಯವನ್ನು ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು, ಅರಣ್ಯ ಇಲಾಖೆ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ಸಹಕರಿಸಿದರು.

ಇತ್ತೀಚೆಗಷ್ಟೇ ಐತಿಹಾಸಿಕ ಜೋಳದ ರಾಶಿ ಗುಡ್ಡದಲ್ಲೂ ಇದೇ ರೀತಿ ಕಿಡಿಗೇಡಿಗಳ ಕೃತ್ಯದಿಂದ ಅರ್ಧದಷ್ಟು ಗುಡ್ಡ ಬೆಂಕಿಯಿಂದ ಹೊತ್ತಿ ಉರಿದಿತ್ತು.

ಇದನ್ನೂ ಓದಿ : Electric shock: ಕಾಡಿಗೆ ತಗುಲಿದ್ದ ಬೆಂಕಿ ನಂದಿಸಲು ಹೋಗಿ ವಿದ್ಯುತ್‌ ಆಘಾತದಿಂದ ಮೃತಪಟ್ಟ ಫಾರೆಸ್ಟ್‌ ವಾಚರ್‌

Exit mobile version