Site icon Vistara News

ಹೊನ್ನಾವರ ಠಾಣೆಗೆ ಬಂದಿದ್ದ ಬಿಹಾರ ಮೂಲದ ವ್ಯಕ್ತಿ ಆತ್ಮಹತ್ಯೆ; ಐವರು ಪೊಲೀಸರ ಅಮಾನತು

Honnavar Police Station and PI Manjunath

#image_title

ಹೊನ್ನಾವರ: ವಿಚಾರಣೆಗೆ ಎಂದು ಕರೆದುಕೊಂಡು ಬಂದಿದ್ದ ವ್ಯಕ್ತಿ ಹೊನ್ನಾವರ ಠಾಣೆ (Honnavar police station) ಯಲ್ಲಿಯೇ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹೊನ್ನಾವರ ಠಾಣೆಯ ಪೊಲೀಸ್ ಇನ್​ಸ್ಪೆಕ್ಟರ್​, ಪಿಎಸ್​ಐ ಸೇರಿ ಒಟ್ಟು ಐವರು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.

ಬಂಗಾರವನ್ನು ಪಾಲಿಷ್​ ಮಾಡುವ ನೆಪದಲ್ಲಿ, ಕದಿಯುತ್ತಿದ್ದಾರೆ ಎಂಬ ಆರೋಪದಡಿ ಹೊನ್ನಾವರ ಠಾಣೆ ಪೊಲೀಸರು ಬಿಹಾರ ಮೂಲದ ಇಬ್ಬರನ್ನು ವಶಕ್ಕೆ ಪಡೆದು, ವಿಚಾರಣೆಗಾಗಿ ಠಾಣೆಗೆ ಕರೆತಂದಿದ್ದರು. ಅದರಲ್ಲಿ ದಿಲೀಪ್ ಮಂಡಲ್ (37) ಠಾಣೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದ. ಈ ಕೇಸ್​​ನಡಿ ಪಲೀಸ್ ಇನ್​ಸ್ಪೆಕ್ಟರ್ ಮಂಜುನಾಥ್, ಕ್ರೈಂ ವಿಭಾಗದ ಪಿಎಸ್​ಐ ಮಂಜೇಶ್ವರ್ ಚಂದಾವರ, ಸಿಬ್ಬಂದಿ ಮಹಾವೀರ, ರಮೇಶ್, ಸಂತೋಷ್​ ಎಂಬುವರು ಅಮಾನತುಗೊಂಡಿದ್ದಾರೆ.

ಇದನ್ನೂ ಓದಿ: Cyber Crime: ಸೋಷಿಯಲ್‌ ಮೀಡಿಯಾದಲ್ಲಿ ಬೇಕಾಬಿಟ್ಟಿ ಪೋಸ್ಟ್ ಹಾಕಿದ್ರೆ ಪೊಲೀಸ್‌ ವಿಚಾರಣೆ ಗ್ಯಾರಂಟಿ!

ಬಿಹಾರ ಮೂಲದ ಈ ಇಬ್ಬರೂ ವ್ಯಕ್ತಿಗಳು ಇತ್ತೀಚೆಗಷ್ಟೇ ಪಟ್ಟಣಕ್ಕೆ ಬಂದಿದ್ದರು. ಅಲ್ಲಲ್ಲಿ ಮನೆಗಳಿಗೆ ಹೋಗಿ ಬಂಗಾರ ಪಾಲಿಷ್ ಮಾಡಿಕೊಡುವುದಾಗಿ ಹೇಳುತ್ತಿದ್ದರು. ಆದರೆ ಇವರು ಬಂದಾಗಿನಿಂದಲೂ ಅಲ್ಲಲ್ಲಿ ಚಿನ್ನದ ಕಳ್ಳತನದ ಬಗ್ಗೆ ವರದಿಯಾಗುತ್ತಿದ್ದವು. ಹೀಗಾಗಿ ಸ್ಥಳೀಯರೇ ಅನುಮಾನದಿಂದ ಇವರಿಬ್ಬರನ್ನೂ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಶನಿವಾರ ಇಬ್ಬರನ್ನೂ ಠಾಣೆಯಲ್ಲಿ ಕೂರಿಸಿ, ಪೊಲೀಸ್ ಅಧಿಕಾರಿಗಳು, ಕೆಲವು ಸಿಬ್ಬಂದಿ ಮಳೆ ಹಾನಿ ಪರಿಶೀಲನೆಗೆ ತೆರಳಿದ್ದರು. ಆದರೆ ಅವರು ವಾಪಸ್ ಬರುವಷ್ಟರಲ್ಲಿ ದಿಲೀಪ್ ಮಂಡಲ್ ಆತ್ಮಹತ್ಯೆ ಮಾಡಿಕೊಂಡಿದ್ದ. ಬಂಗಾರ ತೊಳೆಯುವ ರಾಸಾಯನಿಕವನ್ನೇ ಸೇವಿಸಿರುವ ಶಂಕೆ ವ್ಯಕ್ತವಾಗಿದೆ. ಠಾಣೆಯ ಐವರು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದ್ದು, ಇನ್ನೊಂದು ತಂಡ ಪ್ರಕರಣದ ತನಿಖೆ ಕೈಗೆತ್ತಿಕೊಂಡಿದೆ.

Exit mobile version