ಬೆಂಗಳೂರು/ಯಲ್ಲಾಪುರ: ಇತ್ತೀಚೆಗೆ ರಾಜಧಾನಿ ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ವಾಕ್ಪ್ರತಿಯೋಜಿತಾ ಸ್ಪರ್ಧೆಗಳಲ್ಲಿ ಯಲ್ಲಾಪುರದ ಉಮ್ಮಚಗಿಯ ಶ್ರೀಮಾತಾ ಸಂಸ್ಕೃತ ಕಾಲೇಜಿನ ವಿದ್ಯಾರ್ಥಿಗಳು ಸಾಧನೆ ಮಾಡಿದ್ದು, ರಾಷ್ಟ್ರ ಮಟ್ಟಕ್ಕೂ (Selected to National level) ಆಯ್ಕೆ ಆಗಿದ್ದಾರೆ.
ಜ್ಯೋತಿಷ ಶಲಕಾ, ಅಲಂಕಾರ ಭಾಷಣ, ಸುಭಾಷಿತ ಹಾಗೂ ಕಾವ್ಯ ಕಂಠಪಾಠ ಸ್ಪರ್ಧೆ ಸೇರಿ ಜ್ಯೋತಿಷ ಭಾಷಣದ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಇದರಲ್ಲಿ ಐದು ಪ್ರಥಮ ಪುರಸ್ಕಾರ, ದ್ವಿತೀಯ ಮತ್ತು ತೃತೀಯ ತಲಾ ಒಂದೊಂದು ಪುರಸ್ಕಾರ ಪಡೆಯುವುದರೊಂದಿಗೆ ಉತ್ತಮ ಸಾಧನೆ ಮಾಡಿದ್ದಾರೆ.
ಜ್ಯೋತಿಷ ಶಲಾಕಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಗಣೇಶಪ್ರಸಾದ ನಾಗರಾಜ ಭಟ್ಟ, ಅಲಂಕಾರ ಭಾಷಣ ಸ್ಪರ್ಧೆಯಲ್ಲಿ ನಾಗರಾಜ ನಾರಾಯಣ ಭಟ್ಟ ಹಾಗೂ ಸುಭಾಷಿತ ಕಂಠಪಾಠ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಸುಮಂತ ಅನಂತ ಜೋಶಿ, ಕಾವ್ಯ ಕಂಠಪಾಠ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಶ್ರವಣ ಕುಮಾರ ದ. ಭಟ್ಟ, ಜ್ಯೋತಿಷ ಭಾಷಣದಲ್ಲಿ ವಿನಾಯಕ ರಾ ಭಟ್ಟ ಪ್ರಥಮ ಸ್ಥಾನ ಪಡೆದವರೆಲ್ಲರೂ ರಾಷ್ಟ್ರಮಟ್ಟಕ್ಕೆ ಆಯ್ಕೆ ಆಗಿದ್ದಾರೆ.
ಇನ್ನು ಅಕ್ಷರ ಶ್ಲೋಕಿಯಲ್ಲಿ ದ್ವಿತೀಯ ಸ್ಥಾನವನ್ನು ಆದರ್ಶ ಗೋ. ಭಟ್ಟ ಪಡೆದುಕೊಂಡರೆ ಭಾರತೀಯ ವಿಜ್ಞಾನ ಭಾಷಣದಲ್ಲಿ ತೃತೀಯ ಸ್ಥಾನ ನರೇಂದ್ರ ಶ್ರೀಪಾದ ಜೋಶಿ ಲಭಿಸಿದೆ. ಪ್ರಥಮ ಸ್ಥಾನ ಪಡೆದ ಎಲ್ಲ ವಿದ್ಯಾರ್ಥಿಗಳು ಕೂಡ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗುವುದರ ಮೂಲಕ ವಿದ್ಯಾಲಯದ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಎಂದು ಆಡಳಿತ ಮಂಡಳಿ ಹಾಗೂ ಅಧ್ಯಾಪಕ ವರ್ಗ ಪುರಸ್ಕೃತರನ್ನು ಅಭಿನಂದಿಸಿದೆ.
ಇದನ್ನೂ ಓದಿ | Nagavara Metro Pillar | ಮೆಟ್ರೋ ಪಿಲ್ಲರ್ ರೂಪದಲ್ಲಿ ಕಾದು ಕುಳಿತಿತ್ತು ಮೃತ್ಯು; ಛಿದ್ರವಾಯಿತು ಸುಂದರ ಸಂಸಾರ